ವಿಶ್ವದ ಅಗ್ಗದ ಎಲ್ಪಿಜಿ ಪೂರೈಕೆದಾರ ರಾಷ್ಟ್ರಗಳಲ್ಲಿ ಭಾರತ
ನವದೆಹಲಿ, 07 ಜೂನ್ (ಹಿ.ಸ.) : ಆ್ಯಂಕರ್ : ವಿಶ್ವದ ಅತ್ಯಂತ ಕಡಿಮೆ ದರದಲ್ಲಿ ಅಡುಗೆ ಅನಿಲ ಪೂರೈಕೆ ಮಾಡುತ್ತಿರುವ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಿಳಿಸಿದೆ. ಪ್ರಧಾನ ಮಂತ್ರಿ ಉಜ್ವಲಾ ಯೋಜನೆ ಫಲಾನುಭವಿಗಳು 14.2 ಕೆಜಿ ಎಲ್ಪಿಜಿ ಸ
ಸಿಲಿಂಡರ್


ನವದೆಹಲಿ, 07 ಜೂನ್ (ಹಿ.ಸ.) :

ಆ್ಯಂಕರ್ : ವಿಶ್ವದ ಅತ್ಯಂತ ಕಡಿಮೆ ದರದಲ್ಲಿ ಅಡುಗೆ ಅನಿಲ ಪೂರೈಕೆ ಮಾಡುತ್ತಿರುವ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಿಳಿಸಿದೆ.

ಪ್ರಧಾನ ಮಂತ್ರಿ ಉಜ್ವಲಾ ಯೋಜನೆ ಫಲಾನುಭವಿಗಳು 14.2 ಕೆಜಿ ಎಲ್ಪಿಜಿ ಸಿಲಿಂಡರ್ ಅನ್ನು ಕೇವಲ ₹642ಕ್ಕೆ ಪಡೆಯುತ್ತಿದ್ದು, ಸಾಮಾನ್ಯ ಗ್ರಾಹಕರು ದೆಹಲಿಯಲ್ಲಿ ₹942 ಪಾವತಿಸುತ್ತಿದ್ದಾರೆ. ಆದರೆ ಪ್ರಸ್ತುತ ಅಂತರರಾಷ್ಟ್ರೀಯ ಮಾರುಕಟ್ಟೆ ದರಗಳ ಪ್ರಕಾರ ಒಂದು ಸಿಲಿಂಡರ್ ಪೂರೈಕೆಯ ವೆಚ್ಚ ₹1,600 ಮೀರಿದೆ ಎಂದು ಸಚಿವಾಲಯ ಹೇಳಿದೆ.

ಸಚಿವಾಲಯದ ಪ್ರಕಟಣೆಯ ಪ್ರಕಾರ, ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ ಮೊದಲ ನಾಲ್ಕು ರೀಫಿಲ್ಗಳ ಮೇಲೆ ಪ್ರತಿ ಸಿಲಿಂಡರ್ಗೆ ₹300 ನೇರ ಲಾಭ ವರ್ಗಾವಣೆ (ಡಿಬಿಟಿ) ಸಹಾಯಧನ ನೀಡಲಾಗುತ್ತಿದೆ. ಇದರಿಂದ ಪ್ರತಿ ಕುಟುಂಬವು ವರ್ಷಕ್ಕೆ ₹1,200 ಸಹಾಯಧನ ಪಡೆಯುತ್ತಿದೆ. ಉಜ್ವಲಾ ಯೋಜನೆಯ ಹೊರಗಿನ ಗ್ರಾಹಕರಿಗೂ ಮಾರುಕಟ್ಟೆ ಆಧಾರಿತ ವೆಚ್ಚಕ್ಕಿಂತ ಸುಮಾರು ₹700 ಕಡಿಮೆ ದರದಲ್ಲಿ ಎಲ್ಪಿಜಿ ಲಭ್ಯವಾಗುತ್ತಿದೆ.

ಭಾರತದಲ್ಲಿ ಉಜ್ವಲಾ ಫಲಾನುಭವಿಗಳಿಗೆ ಎಲ್ಪಿಜಿ ಸಿಲಿಂಡರ್ನ ಪರಿಣಾಮಕಾರಿ ಬೆಲೆ ₹642 ಆಗಿದ್ದರೆ, ಪಾಕಿಸ್ತಾನದಲ್ಲಿ ಇದೇ ಪ್ರಮಾಣದ ಸಿಲಿಂಡರ್ ₹1,046, ನೇಪಾಳದಲ್ಲಿ ₹1,207, ಬಾಂಗ್ಲಾದೇಶದಲ್ಲಿ ₹1,225 ಹಾಗೂ ಶ್ರೀಲಂಕಾದಲ್ಲಿ ₹1,241 ದರ ಹೊಂದಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾದ ಅಮೆರಿಕದಲ್ಲಿ ₹1,755, ಆಸ್ಟ್ರೇಲಿಯಾದಲ್ಲಿ ₹1,765 ಹಾಗೂ ಕೆನಡಾದಲ್ಲಿ ₹2,411 ದರ ದಾಖಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಭಾರತ ತನ್ನ ಎಲ್ಪಿಜಿ ಅಗತ್ಯದ ಬಹುಭಾಗವನ್ನು ಆಮದು ಮಾಡಿಕೊಳ್ಳುವುದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಸೌದಿ ಒಪ್ಪಂದದ ಬೆಲೆ (ಸಿಪಿ) ನೇರ ಪರಿಣಾಮ ಬೀರುತ್ತದೆ. ಫೆಬ್ರವರಿಯಲ್ಲಿ ಪ್ರತಿ ಟನ್ಗೆ 542.5 ಡಾಲರ್ ಇದ್ದ ಎಲ್ಪಿಜಿ ಬೆಲೆ, 2026ರ ಜೂನ್ ವೇಳೆಗೆ 790 ಡಾಲರ್ಗೆ ಏರಿಕೆಯಾಗಿದ್ದು, ಸುಮಾರು 46 ಶೇಕಡಾ ಹೆಚ್ಚಳ ಕಂಡಿದೆ.

ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆ ಹಾಗೂ ಹಾರ್ಮುಜ್ ಜಲಸಂಧಿಯಲ್ಲಿನ ಅಡೆತಡೆಗಳ ನಡುವೆಯೂ ಭಾರತ ತನ್ನ ಇಂಧನ ಪೂರೈಕೆ ಸರಪಳಿಯನ್ನು ಯಶಸ್ವಿಯಾಗಿ ನಿರ್ವಹಿಸಿದೆ. ದೇಶದಲ್ಲಿ ಯಾವುದೇ ಪೆಟ್ರೋಲಿಯಂ ಉತ್ಪನ್ನಗಳ ಕೊರತೆ ಉಂಟಾಗದೆ, ಎಲ್ಪಿಜಿ ಬಾಟಲಿಂಗ್ ಮತ್ತು ವಿತರಣಾ ಪ್ರಕ್ರಿಯೆಗಳು ಸುಗಮವಾಗಿ ಮುಂದುವರಿದಿವೆ ಎಂದು ಸಚಿವಾಲಯ ತಿಳಿಸಿದೆ.

ಅಂತಾರಾಷ್ಟ್ರೀಯ ಬೆಲೆ ಏರಿಕೆಯ ಸಂಪೂರ್ಣ ಹೊರೆ ಗ್ರಾಹಕರ ಮೇಲೆ ಬೀಳದಂತೆ ಕೇಂದ್ರ ಸರ್ಕಾರ ಹಾಗೂ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ವೆಚ್ಚ ಮತ್ತು ಚಿಲ್ಲರೆ ಬೆಲೆಯ ನಡುವಿನ ಅಂತರವನ್ನು ಭರಿಸುತ್ತಿವೆ. ಇದರ ಪರಿಣಾಮವಾಗಿ ದೇಶೀಯ ಎಲ್ಪಿಜಿ ಮೇಲಿನ ಸಂಚಿತ ಅಂಡರ್-ರಿಕವರಿ ಕಳೆದ ಹಣಕಾಸು ವರ್ಷದ ಅಂತ್ಯದ ವೇಳೆಗೆ ಸುಮಾರು ₹60 ಸಾವಿರ ಕೋಟಿಗೆ ತಲುಪಿದೆ. ಇದು ಒಂದು ವರ್ಷದ ಹಿಂದಿನ ₹41,338 ಕೋಟಿಗೆ ಹೋಲಿಸಿದರೆ ಗಣನೀಯ ಏರಿಕೆಯಾಗಿದೆ. ಈ ನಿಟ್ಟಿನಲ್ಲಿ ತೈಲ ಮಾರುಕಟ್ಟೆ ಕಂಪನಿಗಳಿಗೆ ₹30 ಸಾವಿರ ಕೋಟಿ ಪರಿಹಾರ ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯಡಿ ಇದುವರೆಗೆ ದೇಶದಾದ್ಯಂತ 10.58 ಕೋಟಿಗೂ ಅಧಿಕ ಎಲ್ಪಿಜಿ ಸಂಪರ್ಕಗಳನ್ನು ವಿತರಿಸಲಾಗಿದೆ. ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಶುದ್ಧ ಅಡುಗೆ ಇಂಧನ ಒದಗಿಸುವಲ್ಲಿ ಈ ಯೋಜನೆ ಮಹತ್ವದ ಪಾತ್ರ ವಹಿಸಿದೆ ಎಂದು ಸಚಿವಾಲಯ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande