ಕಲ್ಲು ಗಣಿಗಾರಿಕೆ ಯೋಜನೆ ; ಜುಲೈ 30 ರಂದು ಪರಿಸರ ಸಾರ್ವಜನಿಕ ಆಲಿಕೆ ಸಭೆ
ಬಳ್ಳಾರಿ, 30 ಜೂನ್ (ಹಿ.ಸ.) : ಆ್ಯಂಕರ್ : ಸಂಡೂರು ತಾಲೂಕಿನ ಕಾಳಂಗೇರಿ ಗ್ರಾಮದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಎರಡು ಪ್ರತ್ಯೇಕ ಕಟ್ಟಡ ಕಲ್ಲು ಗಣಿಗಾರಿಕೆ ಯೋಜನೆಗಳ ಪ್ರಸ್ತಾವನೆಗೆ ಸಂಬಂಧಿಸಿದಂತೆ, ಸಾರ್ವಜನಿಕರಿಂದ ಅಭಿಪ್ರಾಯ ಹಾಗೂ ಆಕ್ಷೇಪಣೆಗಳನ್ನು ಆಲಿಸಲು ಜುಲೈ 30 ರಂದು ಪರಿಸರ ಸಾರ್ವಜನಿಕ ಆಲ
ಕಲ್ಲು ಗಣಿಗಾರಿಕೆ ಯೋಜನೆ ; ಜುಲೈ 30 ರಂದು ಪರಿಸರ ಸಾರ್ವಜನಿಕ ಆಲಿಕೆ ಸಭೆ


ಬಳ್ಳಾರಿ, 30 ಜೂನ್ (ಹಿ.ಸ.) :

ಆ್ಯಂಕರ್ : ಸಂಡೂರು ತಾಲೂಕಿನ ಕಾಳಂಗೇರಿ ಗ್ರಾಮದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಎರಡು ಪ್ರತ್ಯೇಕ ಕಟ್ಟಡ ಕಲ್ಲು ಗಣಿಗಾರಿಕೆ ಯೋಜನೆಗಳ ಪ್ರಸ್ತಾವನೆಗೆ ಸಂಬಂಧಿಸಿದಂತೆ, ಸಾರ್ವಜನಿಕರಿಂದ ಅಭಿಪ್ರಾಯ ಹಾಗೂ ಆಕ್ಷೇಪಣೆಗಳನ್ನು ಆಲಿಸಲು ಜುಲೈ 30 ರಂದು ಪರಿಸರ ಸಾರ್ವಜನಿಕ ಆಲಿಕೆ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಳ್ಳಾರಿಯ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿಗಳು ತಿಳಿಸಿದ್ದಾರೆ.

ಕಾಳಂಗೇರಿ ಗ್ರಾಮದ ಸರ್ವೆ ನಂ. 240 ರಲ್ಲಿ ಹಿರೇಮಠ ಕುಮಾರಸ್ವಾಮಿ ಹಾಗೂ ಕಾಳಂಗೇರಿ ಮಲ್ಲಿಕಾರ್ಜುನ ಅವರು ತಲಾ 2.50 ಎಕರೆ (1.012 ಹೆಕ್ಟೇರ್) ಪ್ರದೇಶದಲ್ಲಿ ವಾರ್ಷಿಕ 60,000 ಟನ್ ಸಾಮಥ್ರ್ಯದ ಕಟ್ಟಡ ಕಲ್ಲು ಗಣಿಗಾರಿಕೆ ಯೋಜನೆಯನ್ನು ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸಿದ್ದಾರೆ.

ಈ ಎರಡೂ ಗುತ್ತಿಗೆ ಪ್ರದೇಶಗಳು ಪರಸ್ಪರ 500 ಮೀಟರ್ ಒಳಗಿನ ಅಂತರದಲ್ಲಿರುವುದರಿಂದ, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯದ ನಿಯಮಾವಳಿಗಳ ಪ್ರಕಾರ ಇದನ್ನು ‘ಕ್ಲಸ್ಟರ್ ಪ್ರದೇಶ' ಎಂದು ಪರಿಗಣಿಸಲಾಗಿದೆ.

ಹಾಗಾಗಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರ ಅಧ್ಯಕ್ಷತೆಯಲ್ಲಿ ಜುಲೈ 30-ರಂದು ಮಧ್ಯಾಹ್ನ 03 ಗಂಟೆಗೆ ಯೋಜನೆ ನಡೆಯುವ ಪ್ರದೇಶ (ಕಾಳಂಗೇರಿ ಗ್ರಾಮ, ಸರ್ವೆ ನಂ. 240, ಸಂಡೂರು ತಾಲೂಕು, ಬಳ್ಳಾರಿ ಜಿಲ್ಲೆ) ಇಲ್ಲಿ ಪರಿಸರ ಸಾರ್ವಜನಿಕ ಆಲಿಕೆ ಸಭೆ ಆಯೋಜಿಸಲಾಗಿದೆ.

ಸಂಬಂಧಪಟ್ಟ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಈ ಸಭೆಯಲ್ಲಿ ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬಹುದಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande