ಸ್ವದೇಶಿ ರಕ್ಷಣಾ ಸಾಧನೆಗಳು ಆತ್ಮನಿರ್ಭರ ಭಾರತದ ಹೆಮ್ಮೆ : ಸಿ.ಟಿ. ರವಿ
ಬೆಂಗಳೂರು, 28 ಜೂನ್ (ಹಿ.ಸ.) : ಆ್ಯಂಕರ್ : ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಭಾನುವಾರ ನಗರಸಭಾ ಸದಸ್ಯ ಕೋಟೆ ಮಧು ಕುಮಾರ್ ರಾಜ್ ಅರಸ್ ಅವರ ನಿವಾಸದಲ್ಲಿ ಪಕ್ಷದ ಪ್ರಮುಖರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕೀ ಬಾತ್’ ಕಾರ್ಯಕ್ರಮವನ್ನು ಆಲಿಸಿದರು. ಬಳಿಕ ಸಾಮಾಜಿಕ ಜಾಲತಾಣ ಎಕ್ಸ್ನ
CT ravi


ಬೆಂಗಳೂರು, 28 ಜೂನ್ (ಹಿ.ಸ.) :

ಆ್ಯಂಕರ್ : ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಭಾನುವಾರ ನಗರಸಭಾ ಸದಸ್ಯ ಕೋಟೆ ಮಧು ಕುಮಾರ್ ರಾಜ್ ಅರಸ್ ಅವರ ನಿವಾಸದಲ್ಲಿ ಪಕ್ಷದ ಪ್ರಮುಖರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕೀ ಬಾತ್’ ಕಾರ್ಯಕ್ರಮವನ್ನು ಆಲಿಸಿದರು.

ಬಳಿಕ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯಿಸಿದ ಅವರು, ಪ್ರಧಾನಿ ಅವರ ಸಂದೇಶವು ಆತ್ಮನಿರ್ಭರ ಭಾರತದ ಬೆಳೆಯುತ್ತಿರುವ ಸಾಮರ್ಥ್ಯವನ್ನು ಮತ್ತೊಮ್ಮೆ ದೇಶದ ಜನರಿಗೆ ಪರಿಚಯಿಸಿದೆ ಎಂದು ಹೇಳಿದರು.

ಸ್ವದೇಶಿ ರಕ್ಷಣಾ ಉತ್ಪಾದನೆ, ರಕ್ಷಣಾ ಕ್ಷೇತ್ರದಲ್ಲಿನ ಸ್ವಾವಲಂಬನೆ ಹಾಗೂ ದೇಶದ ಭದ್ರತೆಯನ್ನು ಬಲಪಡಿಸುವ ಸಾಧನೆಗಳ ಕುರಿತು ಪ್ರಧಾನಿ ಹಂಚಿಕೊಂಡ ಪ್ರತಿಯೊಂದು ವಿಚಾರವೂ ಪ್ರತಿಯೊಬ್ಬ ಭಾರತೀಯನಲ್ಲಿ ಹೆಮ್ಮೆ ಮತ್ತು ದೇಶಭಕ್ತಿಯ ಭಾವನೆಯನ್ನು ಜಾಗೃತಗೊಳಿಸುವಂತಿದೆ ಎಂದು ಸಿ.ಟಿ. ರವಿ ತಿಳಿಸಿದರು.

ಭಾರತವು ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಯತ್ತ ವೇಗವಾಗಿ ಸಾಗುತ್ತಿರುವುದು ಆತ್ಮನಿರ್ಭರ ಭಾರತದ ಯಶಸ್ಸಿನ ಪ್ರತೀಕವಾಗಿದ್ದು, ದೇಶದ ಸಾಮರ್ಥ್ಯವನ್ನು ವಿಶ್ವದ ಮುಂದೆ ಪ್ರದರ್ಶಿಸುವ ಮಹತ್ವದ ಬೆಳವಣಿಗೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande