ದೊಡ್ಡಬಳ್ಳಾಪುರದಲ್ಲಿ ಸ್ಕೌಟ್ಸ್ ರಾಜ್ಯ ಮಟ್ಟದ ತರಬೇತಿ
ದೊಡ್ಡಬಳ್ಳಾಪುರ, 27 ಜೂನ್ (ಹಿ.ಸ.) : ಆ್ಯಂಕರ್ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ೨೦೨೬-೨೭ನೇ ಸಾಲಿನ ರಾಜ್ಯಮಟ್ಟದ ರೋವರ್ ಸ್ಕೌಟ್ಸ್ ಲೀಡರ್ ಮತ್ತು ರೇಂಜರ್ ಲೀಡರ್ ಮೂಲ ತರಬೇತಿ ಶಿಬಿರವನ್ನು ಜೂ.೨೦ರಿಂದ ಜೂ.೨೬ರವರೆಗೆ ಆಯೋಜಿಸಲಾಗಿತ್ತು. ಡಾ.ಅನಿಬೆಸೆಂಟ್ ಸ್ಕೌಟ್ಸ್ ಮತ
ದೊಡ್ಡಬಳ್ಳಾಪುರದಲ್ಲಿ  ಸ್ಕೌಟ್ಸ್  ರಾಜ್ಯಮಟ್ಟದ ತರಬೇತಿ


ದೊಡ್ಡಬಳ್ಳಾಪುರದಲ್ಲಿ  ಸ್ಕೌಟ್ಸ್  ರಾಜ್ಯಮಟ್ಟದ ತರಬೇತಿ


ದೊಡ್ಡಬಳ್ಳಾಪುರದಲ್ಲಿ  ಸ್ಕೌಟ್ಸ್  ರಾಜ್ಯಮಟ್ಟದ ತರಬೇತಿ


ದೊಡ್ಡಬಳ್ಳಾಪುರದಲ್ಲಿ  ಸ್ಕೌಟ್ಸ್  ರಾಜ್ಯಮಟ್ಟದ ತರಬೇತಿ


ದೊಡ್ಡಬಳ್ಳಾಪುರದಲ್ಲಿ  ಸ್ಕೌಟ್ಸ್  ರಾಜ್ಯಮಟ್ಟದ ತರಬೇತಿ


ದೊಡ್ಡಬಳ್ಳಾಪುರ, 27 ಜೂನ್ (ಹಿ.ಸ.) :

ಆ್ಯಂಕರ್ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ೨೦೨೬-೨೭ನೇ ಸಾಲಿನ ರಾಜ್ಯಮಟ್ಟದ ರೋವರ್ ಸ್ಕೌಟ್ಸ್ ಲೀಡರ್ ಮತ್ತು ರೇಂಜರ್ ಲೀಡರ್ ಮೂಲ ತರಬೇತಿ ಶಿಬಿರವನ್ನು ಜೂ.೨೦ರಿಂದ ಜೂ.೨೬ರವರೆಗೆ ಆಯೋಜಿಸಲಾಗಿತ್ತು.

ಡಾ.ಅನಿಬೆಸೆಂಟ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ತರಬೇತಿ ಮತ್ತು ಶಿಬಿರದ ಕೇಂದ್ರದಲ್ಲಿ ರಾಜ್ಯದ ೨೮ ಜಿಲ್ಲೆಗಳಿಂದ ಪ್ರಾಥಮಿಕ ಶಾಲೆ, ಹೈಸ್ಕೂಲ್ ಮತ್ತು ಕಾಲೇಜುಗಳಿಂದ ಶಿಕ್ಷಕರು, ಉಪನ್ಯಾಸಕರು ಪಾಲ್ಗೊಂಡಿದ್ದರು.

ಈ ತರಬೇತಿಯು ಶಿಕ್ಷಕರ, ಉಪನ್ಯಾಸಕರ ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳ ಜೀವನದ ಕೌಶಲ್ಯಗಳನ್ನು ಕಲಿಸುತ್ತಿದ್ದು, ಸ್ಕೌಟ್ಸ್ ಮತ್ತು ಗೈಡ್ಸ್ ನ ಉನ್ನತ ಮಟ್ಟದ ಸಂಪನ್ಮೂಲ ವ್ಯಕ್ತಿಗಳು ವಿವಿಧ ರೀತಿಯ ರಕ್ಷಣಾತ್ಮಕ ಹಾಗೂ ಸಾಮಾಜಿಕ ತರಬೇತಿಗಳನ್ನು ನೀಡಿದರು.

ಈ ಶಿಬಿರವು ಪ್ರತಿಯೊಬ್ಬ ವಿದ್ಯಾರ್ಥಿ, ಮಕ್ಕಳಿಗೆ ಅವಶ್ಯಕತೆ ಇದ್ದು ಬಹುಮುಖ್ಯವಾಗಿ ಸ್ವಯಂ ರಕ್ಷಣೆ, ವಿದ್ಯಾಭ್ಯಾಸದ ಧ್ಯೇಯೋದ್ದೇಶಗಳು, ರಕ್ಷಣಾತ್ಮಕವಾಗಿ ಎಚ್ಚರಿಕೆಯಿಂದ ಇರಬೇಕಾದ ಸೂತ್ರಗಳು, ಜೀವನದ ಕೌಶಲ್ಯಗಳು, ಸರ್ವಧರ್ಮಗಳ ಸಮನ್ವಯತೆಯ ಪ್ರಾರ್ಥನೆ, ತಾರತಮ್ಯ ಮಾಡದಿರುವುದು, ಜೀವನದ ಜಟಿಲ ಸಮಸ್ಯೆಗಳು, ಸವಾಲುಗಳನ್ನು ಎದೆಗುಂದದೆ ಎದುರಿಸುವುದು, ನಾಯಿ ಕಡಿತಕ್ಕೆ ಚಿಕಿತ್ಸೆ, ನೀರಿನಲ್ಲಿ ಮುಳುಗಿದಾಗ ರಕ್ಷಣೆ ಮಾಡುವುದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದಾಗ ಕೈಗೊಳ್ಳುವ ಮುಂಜಾಗೃತಾ ಕ್ರಮಗಳು, ಸಿಲಿಂಡರ್ ಬ್ಲಾಸ್ಟ್ ಆದಾಗ ತೆಗೆದುಕೊಳ್ಳಬೇಕಾದ ಕ್ರಮಗಳು, ಗಾಯಗಳ ಉಪಶಮನಕ್ಕೆ ಹೀಗೆ ಹಲವಾರು ಬಗೆಯ ತರಬೇತಿಗಳನ್ನು ನೀಡಲಾಯಿತು.

ಶಿಸ್ತು ಮತ್ತು ಸಂಯಮದ ಜೊತೆಗೆ ಪ್ರತಿದಿನ ಕಾರ್ಯಕಲಾಪಗಳ ಕುರಿತು ಬೆಳಿಗ್ಗೆ ೬-೩೦ರಿಂದ ಸಂಜೆಯವರೆಗೂ ವಿವಿಧೋದ್ದೇಶಗಳ ಕೌಶಲ್ಯಗಳ ಬಗ್ಗೆ ಧೈರ್ಯ, ಸಾಹಸ, ಆರೋಗ್ಯ, ಕಾಡು ಮೇಡುಗಳಲ್ಲಿ ಸಾಗುವಾಗ ವಹಿಸಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ತರಬೇತಿಯನ್ನು ನೀಡಲಾಗಿದ್ದು, ಭಾಗವಹಿಸಿದ್ದ ಎಲ್ಲರಿಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

ಕರ್ನಾಟಕದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್.ಸಿಂಧ್ಯಾ, ರಾಜ್ಯ ಆಯುಕ್ತರಾದ ಗೀತಾ ನಟರಾಜ್, ಕೋರ್ಸ್ ನ ನಾಯಕರಾದ ಬಿ.ವಿ.ರಮಾಲತಾ, ರಾಜ್ಯ ತರಬೇತಿ ಆಯುಕ್ತರಾದ ಶಾಮಲಾ ಕೆ.ವಿ., ಸೇರಿದಂತೆ ಸ್ಕೌಟ್ಸ್ ಮತ್ತು ಗೈಡ್ಸ್ ನ ಮುಖ್ಯಸ್ಥರು, ಅಧ್ವರ್ಯುಗಳು ಸೂಕ್ತ ತರಬೇತಿ ನೀಡಿದ್ದು, ತರಬೇತಿಯಲ್ಲಿ ಪಾಲ್ಗೊಂಡಿದ್ದ ಎಲ್ಲ ಶಿಬಿರಾರ್ಥಿಗಳು ಉತ್ತಮ ರೀತಿಯಲ್ಲಿ ಆಯೋಜನೆ ಮಾಡಿದ್ದ ಆಯೋಜಕರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande