ಗೆದ್ದಲಮರಿ ಗ್ರಾಮದಲ್ಲಿ ಚಿರತೆ ದಾಳಿಗೆ ಕರು ಬಲಿ
ಹುಣಸಗಿ, 27 ಜೂನ್ (ಹಿ.ಸ.) : ಆ್ಯಂಕರ್ : ತಾಲೂಕಿನ ಗೆದ್ದಲಮರಿ ಗ್ರಾಮದ ರೈತ ಶಿವಪುತ್ರಪ್ಪ ಮಲ್ಲಪ್ಪ ಅವರ ಹೊಲದಲ್ಲಿನ ಶೆಡ್ಡಿನಲ್ಲಿ ಕಟ್ಟಿ ಹಾಕಿದ್ದ ಆಕಳ ಕರುವನ್ನು ಚಿರತೆ ದಾಳಿ ನಡೆಸಿ ಕೊಂದು ಹಾಕಿದ ಘಟನೆ ನಡೆದಿದೆ. ದಾಳಿ ನಡೆಸಿ ಅದರ ದೇಹದ ಒಂದು ಭಾಗವನ್ನು ತಿಂದು ಉಳಿದ ಭಾಗವನ್ನು ಅಲ್ಲಿಯ
ಗೆದ್ದಲಮರಿ ಗ್ರಾಮದಲ್ಲಿ ಚಿರತೆ ದಾಳಿಗೆ ಕರು ಬಲಿ


ಹುಣಸಗಿ, 27 ಜೂನ್ (ಹಿ.ಸ.) :

ಆ್ಯಂಕರ್ : ತಾಲೂಕಿನ ಗೆದ್ದಲಮರಿ ಗ್ರಾಮದ ರೈತ ಶಿವಪುತ್ರಪ್ಪ ಮಲ್ಲಪ್ಪ ಅವರ ಹೊಲದಲ್ಲಿನ ಶೆಡ್ಡಿನಲ್ಲಿ ಕಟ್ಟಿ ಹಾಕಿದ್ದ ಆಕಳ ಕರುವನ್ನು ಚಿರತೆ ದಾಳಿ ನಡೆಸಿ ಕೊಂದು ಹಾಕಿದ ಘಟನೆ ನಡೆದಿದೆ.

ದಾಳಿ ನಡೆಸಿ ಅದರ ದೇಹದ ಒಂದು ಭಾಗವನ್ನು ತಿಂದು ಉಳಿದ ಭಾಗವನ್ನು ಅಲ್ಲಿಯೇ ಬಿಟ್ಟು ಹೋಗಿದೆ. ಕರು ಹಗ್ಗಕ್ಕೆ ಕಟ್ಟಿದ್ದ ಕಾರಣ ಅದನ್ನು ಎಳೆದುಕೊಂಡು ಹೋಗಲು ಸಾಧ್ಯವಾಗದೆ ಅಲ್ಲಿಯೇ ಬಿಟ್ಟು ಹೋಗಿದೆ ಎಂದು ತಿಳಿದುಬಂದಿದೆ.

ನಡೆದ ಘಟನೆಯ ಮಾಹಿತಿ ತಿಳಿದ ತಕ್ಷಣ ರೈತರು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ, ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ, ಹೆಜ್ಜೆ ಗುರುತುಗಳನ್ನು ಗಮನಿಸಿದಾಗ ಚಿರತೆ ಸಂಚರಿಸಿರುವುದು ಖಚಿತ ವ್ಯಕ್ತಪಡಿಸಿದರು.

ಈ ವೇಳೆ ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಭಾಗಪ್ಪಗೌಡ ಮಾತನಾಡಿ, ರಾತ್ರಿ ವೇಳೆ ಹೊಲಗಳಿಗೆ ಒಬ್ಬೊಬ್ಬರಾಗಿ ತೆರಳಬಾರದು, ಗುಂಪಾಗಿ ತೆರಳಬೇಕು. ಟಾರ್ಚ್ಗಳನ್ನು ಬಳಸುವುದು, ಕೈಯಲ್ಲಿ ಕೋಲುಗಳನ್ನು ಹಿಡಿದುಕೊಂಡು ಸಂಚರಿಸುವುದು ಹಾಗೂ ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಕಟ್ಟಿಡುವುದು ಅಗತ್ಯ ಎಂದು ಗ್ರಾಮಸ್ಥರಿಗೆ ಮುನ್ನಚರಿಕೆ ಸಲಹೆ ನೀಡಿದರು.

ಗ್ರಾಮದ ಸುತ್ತಮುತ್ತ ಚಿರತೆ ಸಂಚಾರ ಕಂಡು ಬಂದಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು ಚಿರತೆಯ ಚಲನವಲನದ ಮೇಲೆ ನಿಗಾ ವಹಿಸಿ ಅದನ್ನು ಹಿಡಯುವಂತೆ ರೈತರು ಅಧಿಕಾರಿಗಳಲ್ಲಿ ಮನವಿ ಮಾಡಿದರು.

ಈ ಸಂದರ್ಭ ಉಪವಲಯ ಅರಣ್ಯಾಧಿಕಾರಿ ಎಚ್.ಬಿ.ಬಿರಾದಾರ, ಗಸ್ತು ಅರಣ್ಯ ಪಾಲಕರಾದ ಸಿದ್ದಲಿಂಗಯ್ಯ ಹಾಗೂ ಸೈಯದ್ ಪಟೇಲ್ ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande