135 ಕೆ.ಜಿ.ಗೂ ಅಧಿಕ ಗಾಂಜಾ, ಎಂಡಿಎಂಎ ನಾಶ
ಮೈಸೂರು, 25 ಜೂನ್ (ಹಿ.ಸ.): ಆ್ಯಂಕರ್: ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಅಂಗವಾಗಿ ಮಂಡ್ಯ ಜಿಲ್ಲಾ ಪೊಲೀಸ್ ಇಲಾಖೆ ಗುರುವಾರ ವಶಪಡಿಸಿಕೊಂಡಿದ್ದ ಮಾದಕ ವಸ್ತುಗಳನ್ನು ನಾಶಪಡಿಸುವ ಕಾರ್ಯ ಕೈಗೊಂಡಿತು. ಮೈಸೂರು ತಾಲ್ಲೂಕಿನ ಜಯಪುರ ಹೋಬಳಿಯ ಗುಜ್ಜೆಗೌಡನಪುರ ಗ್ರಾಮದ ಸಮೀಪ ಇರುವ ಜಿಐಪಿ
destroyed


ಮೈಸೂರು, 25 ಜೂನ್ (ಹಿ.ಸ.):

ಆ್ಯಂಕರ್:

ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಅಂಗವಾಗಿ ಮಂಡ್ಯ ಜಿಲ್ಲಾ ಪೊಲೀಸ್ ಇಲಾಖೆ ಗುರುವಾರ ವಶಪಡಿಸಿಕೊಂಡಿದ್ದ ಮಾದಕ ವಸ್ತುಗಳನ್ನು ನಾಶಪಡಿಸುವ ಕಾರ್ಯ ಕೈಗೊಂಡಿತು.

ಮೈಸೂರು ತಾಲ್ಲೂಕಿನ ಜಯಪುರ ಹೋಬಳಿಯ ಗುಜ್ಜೆಗೌಡನಪುರ ಗ್ರಾಮದ ಸಮೀಪ ಇರುವ ಜಿಐಪಿಎಸ್ ಬಯೋಟೆಕ್ ಘಟಕದಲ್ಲಿ ಈ ಕಾರ್ಯಾಚರಣೆ ನಡೆಯಿತು. ಮಂಡ್ಯ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ದಾಖಲಾಗಿದ್ದ 17 ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 135 ಕೆ.ಜಿ. 57 ಗ್ರಾಂ 51 ಮಿಲಿಗ್ರಾಂ ಗಾಂಜಾ ಹಾಗೂ 56.49 ಗ್ರಾಂ ಎಂಡಿಎಂಎ (ಮಾದಕ ವಸ್ತು) ಅನ್ನು ವೈಜ್ಞಾನಿಕ ವಿಧಾನದಲ್ಲಿ ನಾಶಪಡಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಶೋಭಾರಾಣಿ ವಿ.ಜೆ. ಉಪಸ್ಥಿತರಿದ್ದು, ಮಾದಕ ದ್ರವ್ಯಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಮುಂದುವರಿಯಲಿದೆ ಎಂದು ತಿಳಿಸಿದರು.

ಮಾದಕ ವಸ್ತುಗಳ ಸಾಗಾಟ, ಮಾರಾಟ ಹಾಗೂ ಬಳಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು, ಯುವಜನರು ಮಾದಕ ವ್ಯಸನದಿಂದ ದೂರವಿರಬೇಕು ಎಂದು ಜಾಗೃತಿ ಮೂಡಿಸಲಾಯಿತು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande