
ಕೊಪ್ಪಳ, 25 ಜೂನ್ (ಹಿ.ಸ.):
ಆ್ಯಂಕರ್ : ನಗರಸಭೆ ಮುಂದಿನ ಬಲ್ಡೋಟ ಕಾರ್ಖಾನೆ ಬೃಹತ್ ಬಂಡವಾಳ ವಿರೋಧಿಸಿ, ಬಸಾಪುರ ಕೆರೆ ಸಾರ್ವಜನಿಕರಿಗೆ ಮುಕ್ತಗೊಳಿಸಿ 238ನೇ ದಿನದ ಅನಿರ್ದಿಷ್ಟಾವಧಿ ಧರಣಿ ನಡೆಯಿತು.
ಇಂದು ಜಿಲ್ಲೆಗೆ ಆಗಮಿಸಿದ ಮುಖ್ಯಮಂತ್ರಿಗಳು ಜಿಲ್ಲೆಯ ಗಂಭೀರ ಸಮಸ್ಯೆಯಾದ ತುಂಗಭದ್ರಾ ಮಾಲಿನ್ಯ, ಜಲಾಶಯದ ನೀರು ಕೈಗಾರಿಕೆಗಳ ಮಿತಿಮೀರಿದ ಬಳಕೆ ಯಾವ ಕ್ರಮವನ್ನು ಜರುಗಿಸುವ ಭರವಸೆ ನೀಡಿಲ್ಲ. ಕಾರ್ಖಾನೆಗಳ ಕೇಂದ್ರಿಕರಣದಿಂದ 22 ಹಳ್ಳಿಗಳಲ್ಲಿ ರೋಗರುಜಿನ, ಕೃಷಿ, ಅಂತರ್ಜಲ ಹಾಳಾಗಿರುವ ಸಮಸ್ಯೆಗಳನ್ನು ಆಲಿಸಿ, ಸತ್ಯವನ್ನು ಅರಿಯಲು ಡಿ.ಕೆ.ಶಿವಕುಮಾರ ಬಾಧಿತ ಹಳ್ಳಿಗಳಿಗೆ ಭೇಟಿ ಕೊಡಬೇಕಿತ್ತು. ಅದನ್ನೂ ನೆರವೇರಿಸದ ಮುಖ್ಯಮಂತ್ರಿ ಶಿಷ್ಟಾಚಾರದ ಕಾರ್ಯಕ್ರಮಕ್ಕೆ ಸೀಮಿತವಾಗಿದ್ದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ. ಎಂದು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಅತೃಪ್ತಿ ವ್ಯಕ್ತಪಡಿಸಿದೆ.
ಧರಣಿಯಲ್ಲಿ ಪ್ರಕಾಶಕ ಡಿ.ಎಂ. ಬಡಿಗೇರ, ಮಹಾಂತೇಶ, ಕೊತಬಾಳ, ರಾಜಶೇಖರ ಏಳುಭಾವಿ, ಅರ್ಚಕ ಸೋಮಶೇಖರ, ಮಹಾದೇವಪ್ಪ ಮಾವಿನಮಡು, ಮಖಬೂಲ್ ರಾಯಚೂರು, ಶಿವಪ್ಪ ಜಲ್ಲಿ ಇತರರು ಪಾಲ್ಗೊಂಡರು
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್