ಗ್ರಂಥಾಲಯ ಕರ ಬಾಕಿ ವಸೂಲಿಗೆ ಜಿಲ್ಲಾಧಿಕಾರಿಗಳ ಸೂಚನೆ
ಗ್ರಂಥಾಲಯ ಕರ ಬಾಕಿ ವಸೂಲಿಗೆ ಜಿಲ್ಲಾಧಿಕಾರಿಗಳ ಸೂಚನೆ
ಗ್ರಂಥಾಲಯ ಪ್ರಾಧಿಕಾರದ ಸಭೆ ಕೋಲಾರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅಧ್ಯಕ್ಷತೆಯಲ್ಲಿ ನಡೆಯಿತು.


ಕೋಲಾರ, ೨೫ ಜೂನ್ (ಹಿ.ಸ) :

ಆ್ಯಂಕರ್ : ಜಿಲ್ಲೆಯ ಸಾರ್ವಜನಿಕ ಗ್ರಂಥಾಲಯಗಳ ಅಭಿವೃದ್ಧಿ, ಮೂಲಸೌಕರ್ಯ ವೃದ್ಧಿ ಹಾಗೂ ಡಿಜಿಟಲೀಕರಣಕ್ಕೆ ಸಂಬ0ಧಿಸಿದ0ತೆ ಜಿಲ್ಲಾಧಿಕಾರಿಗಳಾದ ಡಾ. ಎಂ. ಆರ್. ರವಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯು ನಡೆಯಿತು.

ಸಭೆಯಲ್ಲಿ ಜಿಲ್ಲೆಯ ವಿವಿಧ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಿ0ದ ಪ್ರಾಧಿಕಾರಕ್ಕೆ ಬರಬೇಕಾದ ಗ್ರಂಥಾಲಯ ಉಪಕರದ ಪ್ರಗತಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಬಾಕಿ ಉಳಿಸಿಕೊಂಡಿರುವ ಸ್ಥಳೀಯ ಸಂಸ್ಥೆಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ ತಕ್ಷಣವೇ ಬಾಕಿ ಮೊತ್ತವನ್ನು ಪಾವತಿ ಮಾಡಿಸಿಕೊಳ್ಳಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಜಿಲ್ಲೆಯ ಒಟ್ಟು ೬ ಪ್ರಮುಖ ಸ್ಥಳೀಯ ಸಂಸ್ಥೆಗಳಿAದ ಮಾರ್ಚ್ ಅಂತ್ಯಕ್ಕೆ ರೂ. ೩,೫೫,೨೪,೯೩೯ ಒಟ್ಟು ಗ್ರಂಥಾಲಯ ಕರದ ಬೇಡಿಕೆ ಇತ್ತು. ಇದರಲ್ಲಿ ಕೇವಲ ರೂ. ೮೨,೧೬,೮೦೯ ಮಾತ್ರ ಪ್ರಾಧಿಕಾರಕ್ಕೆ ಪಾವತಿಯಾಗಿದ್ದು, ಇನ್ನುಳಿದಂತೆ ಬರೋಬ್ಬರಿ ರೂ. ೨,೭೩,೦೮,೧೩೦ (೨.೭೩ ಕೋಟಿ ರೂ.) ಮೊತ್ತ ಬಾಕಿ ಉಳಿದಿದೆ.

ಸ್ಥಳೀಯ ಸಂಸ್ಥೆಗಳ ಬಾಕಿ ವಿವರವನ್ನು ಪರಿಶೀಲಿಸಿದಾಗ ಮುಳಬಾಗಲು ನಗರಸಭೆಯು ರೂ. ೭೨,೬೯,೦೦೦.೦೦ ಬೇಡಿಕೆಯಲ್ಲಿ ಒಂದೂ ರೂಪಾಯಿ ಪಾವತಿಸದೆ ಸಂಪೂರ್ಣ ರೂ. ೭೨,೬೯,೦೦೦.೦೦ ಮೊತ್ತವನ್ನು ಬಾಕಿ ಉಳಿಸಿಕೊಂಡಿರುವುದು ಕಂಡುಬAದಿದೆ. ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಮುಳಬಾಗಲು ನಗರಸಭೆಯಿಂದ ತಕ್ಷಣವೇ ಬಾಕಿ ವಸೂಲು ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಇನ್ನುಳಿದಂತೆ ಕೋಲಾರ ನಗರಸಭೆಯಿಂದ ರೂ. ೫೦,೯೧,೫೭೮, ಬಂಗಾರಪೇಟೆ ಪುರಸಭೆಯಿಂದ ರೂ. ೫೦,೮೯,೫೫೪, ಮಾಲೂರು ಪುರಸಭೆಯಿಂದ ರೂ. ೪೯,೨೭,೦೦೦, ಶ್ರೀನಿವಾಸಪುರ ಪುರಸಭೆಯಿಂದ ರೂ. ೨೬,೧೧,೦೪೫ ಹಾಗೂ ವೇಮಗಲ್/ಕುರುಗಲ್ ಪಟ್ಟಣ ಪಂಚಾಯಿತಿಯಿAದ ರೂ. ೨೩,೧೯,೯೫೩ ಗ್ರಂಥಾಲಯ ಕರ ಬಾಕಿ ಬರಬೇಕಿದೆ ಎಂದರು.

ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ ಆಗಮಿಸುವ ಓದುಗರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದರಿಂದ ಸದ್ಯ ಇರುವ ಸ್ಥಳಾವಕಾಶದ ಕೊರತೆಯನ್ನು ನೀಗಿಸಲು, ಪ್ರಸ್ತುತ ಇರುವ ಕಟ್ಟಡದ ಮೇಲ್ಭಾಗದಲ್ಲಿ ಓದುಗರಿಗಾಗಿ ಮತ್ತೊಂದು ಪ್ರತ್ಯೇಕ ಸವಲತ್ತಿನ ಓದುಗರ ವಿಭಾಗವನ್ನು ಸಿದ್ಧಪಡಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದರು.

ಸಾರ್ವಜನಿಕರಿಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಡಿಜಿಟಲ್ ಜ್ಞಾನ ಒದಗಿಸುವ ನಿಟ್ಟಿನಲ್ಲಿ ಗ್ರಂಥಾಲಯಗಳಲ್ಲಿ ಗಣಕಯಂತ್ರಗಳ (ಕಂಪ್ಯೂಟರ್) ಸಂಖ್ಯೆಯನ್ನು ಹೆಚ್ಚಿಸಲು ಮತ್ತು ಉತ್ತಮ ಇಂಟರ್ನೆಟ್ ಸಂಪರ್ಕ ಕಲ್ಪಿಸಲು ತೀರ್ಮಾನಿಸಲಾಯಿತು. ಕೆ.ಜಿ.ಎಫ್.ನ ಸರ್ಕಾರಿ ಡಿಗ್ರಿ ಕಾಲೇಜಿನಲ್ಲಿ ಹಾಗೂ ಮಾಸ್ತಿಯಲ್ಲಿ ನೂತನ ಡಿಜಿಟಲ್ ಗ್ರಂಥಾಲಯಗಳನ್ನು ಆರಂಭಿಸುವ ಕುರಿತು ಸಭೆಯಲ್ಲಿ ಚರ್ಚಿಸಿ, ಶೀಘ್ರ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಉಪಾಧ್ಯಕ್ಷರು ಸೇರಿದಂತೆ ಅಲ್ಮಾಸ್ ಪರ್ವೀನ್ ತಾಜ್, ಸರ್ಕಾಯ್ ಮಹಿಳಾ ಕಾಲೇಜಿನ ಲೆಕ್ಕಧಿಕಾರಿ ದಿಲೀಪ್, ಸರ್ಕಾರಿ ಪದವೀಪೂರ್ವ ಕಾಲೇಜಿನ ಉಪಪ್ರಂಶುಪಾಲರಾದ ಸುನಂದಮ್ಮ, ಪ್ರಾಧಿಕಾರದ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande