ಮಾಹಿತಿ ನೀಡದ ಅಧಿಕಾರಿಗಳಿಗೆ 25 ಸಾವಿರ ರೂಪಾಯಿ ದಂಡ
ಗದಗ, 24 ಜೂನ್ (ಹಿ.ಸ.) : ಆ್ಯಂಕರ್ : ಕರ್ನಾಟಕ ಮಾಹಿತಿ ಆಯೋಗದ ಬೆಳಗಾವಿ ಪೀಠದಲ್ಲಿ ಪ್ರತಿದಿನ ಸುಮಾರು 60 ರಿಂದ 100 ಅರ್ಜಿಗಳ ವಿಚಾರಣೆಯು ಆಫ್ಲೇಕೇಶನ್ ಮತ್ತು ಆನ್ಲೈನ್ ಮಾದರಿಯಲ್ಲಿ ನಡೆಯುತ್ತಿದೆ. ಮಾಹಿತಿ ಹಕ್ಕು ಅಧಿನಿಯಮದಡಿ ಸಾರ್ವಜನಿಕರು ಕೇಳಿದ ಮಾಹಿತಿಯನ್ನು ನೀಡದೆ ಸತಾಯಿಸುವ ಅಧಿಕಾರಿಗಳ ವಿ
ಫೋಟೋ


ಗದಗ, 24 ಜೂನ್ (ಹಿ.ಸ.) :

ಆ್ಯಂಕರ್ : ಕರ್ನಾಟಕ ಮಾಹಿತಿ ಆಯೋಗದ ಬೆಳಗಾವಿ ಪೀಠದಲ್ಲಿ ಪ್ರತಿದಿನ ಸುಮಾರು 60 ರಿಂದ 100 ಅರ್ಜಿಗಳ ವಿಚಾರಣೆಯು ಆಫ್ಲೇಕೇಶನ್ ಮತ್ತು ಆನ್ಲೈನ್ ಮಾದರಿಯಲ್ಲಿ ನಡೆಯುತ್ತಿದೆ. ಮಾಹಿತಿ ಹಕ್ಕು ಅಧಿನಿಯಮದಡಿ ಸಾರ್ವಜನಿಕರು ಕೇಳಿದ ಮಾಹಿತಿಯನ್ನು ನೀಡದೆ ಸತಾಯಿಸುವ ಅಧಿಕಾರಿಗಳ ವಿರುದ್ಧ ಆಯೋಗವು ಕಠಿಣ ಕ್ರಮ ಕೈಗೊಳ್ಳಲಾಗುವುದು.

ಮಾಹಿತಿ ಹಕ್ಕು ಕಾಯ್ದೆಯು ಜನಪರ ಮತ್ತು ಪ್ರಜಾಪ್ರಭುತ್ವದ ಭದ್ರ ಬುನಾದಿಯಾಗಿದೆ. ಸ್ವತಂತ್ರ ಭಾರತದಲ್ಲಿ ಸಾಮಾನ್ಯ ಜನರಿಗೆ ಸರ್ಕಾರದ ಮಾಹಿತಿ ಸುಲಭವಾಗಿ ತಲುಪಬೇಕು ಎಂಬ ಉದ್ದೇಶ ಹೊಂದಿರುವ ಇದು ಅತ್ಯಂತ ಕ್ರಾಂತಿಕಾರಕ ಕಾಯ್ದೆಯಾಗಿದೆ.

ಮಾಹಿತಿಯನ್ನು ಸಾಮಾನ್ಯ ಜನರಿಗೆ ನೀಡದಿರುವುದು, ಆಯೋಗದ ವಿಚಾರಣೆಗೆ ಗೈರು ಹಾಜರಾಗುವುದು ಹಾಗೂ ಆಯೋಗ ನೀಡುವ ನೋಟಿಸ್ಗಳಿಗೆ ಸ್ಪಂದಿಸದಿರುವ ವಿವಿಧ ಇಲಾಖೆಗಳ ಅಧಿಕಾರಿಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಜರುಗಿಸಲಾಗುತ್ತದೆ.

ಕರ್ತವ್ಯ ಲೋಪ ಎಸಗುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ವಿಚಾರಣಾ ಸಮಿತಿಗೆ ಶಿಫಾರಸು ಮಾಡುವುದರ ಜೊತೆಗೆ, ರೂ. 25,000/- ದವರೆಗೆ ದಂಡ ಹಾಗೂ ಅರ್ಜಿದಾರರಿಗೆ ಸೂಕ್ತ ಪರಿಹಾರ ನೀಡುವ ಆದೇಶಗಳನ್ನು ಆಯೋಗವು ಹೊರಡಿಸಲಾಗುವುದು ಎಂದು ಕರ್ನಾಟಕ ಮಾಹಿತಿ ಆಯೋಗದ ಬೆಳಗಾವಿ ಪೀಠದ ರಾಜ್ಯ ಮಾಹಿತಿ ಆಯುಕ್ತ ಪ್ರಕಾಶ ನಾರಾಯಣ ಚನ್ನಾಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande