ಭಾಗ್ಯನಗರದಲ್ಲಿ ಜೂ. ೨೮ರಂದು ಕೊಪ್ಪಳ ತಾಲೂಕು ಚುಟುಕು ಸಾಹಿತ್ಯ ಸಮ್ಮೇಳನ
ಕೊಪ್ಪಳ, 24 ಜೂನ್ (ಹಿ.ಸ.) : ಆ್ಯಂಕರ್ : ಕೊಪ್ಪಳ ತಾಲೂಕಿನ ಭಾಗ್ಯನಗರದಲ್ಲಿ ಕೊಪ್ಪಳ ತಾಲೂಕಾ ಎರಡನೇ ಚುಟುಕು ಸಾಹಿತ್ಯ ಸಮ್ಮೇಳನ ಜೂ.೨೮ರಂದು ಜರುಗಲಿದೆ. ಕವಿ ಹಾಗೂ ಮುಖ್ಯೋಪಾಧ್ಯಾಯ ಶ್ರೀನಿವಾಸ್ ಚಿತ್ರಗಾರ ಅವರ ಸವಾ೯ಧ್ಯಕ್ಷ್ಯತೆಯಲ್ಲಿ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಡಾ.ಎಂ.ಜಿ.ಆರ್. ಅರಸು ಅವರು
ಭಾಗ್ಯನಗರದಲ್ಲಿ  ಜೂ. ೨೮ರಂದು ಕೊಪ್ಪಳ ತಾಲೂಕು ಚುಟುಕು ಸಾಹಿತ್ಯ ಸಮ್ಮೇಳನ


ಕೊಪ್ಪಳ, 24 ಜೂನ್ (ಹಿ.ಸ.) :

ಆ್ಯಂಕರ್ : ಕೊಪ್ಪಳ ತಾಲೂಕಿನ ಭಾಗ್ಯನಗರದಲ್ಲಿ ಕೊಪ್ಪಳ ತಾಲೂಕಾ ಎರಡನೇ ಚುಟುಕು ಸಾಹಿತ್ಯ ಸಮ್ಮೇಳನ ಜೂ.೨೮ರಂದು ಜರುಗಲಿದೆ.

ಕವಿ ಹಾಗೂ ಮುಖ್ಯೋಪಾಧ್ಯಾಯ ಶ್ರೀನಿವಾಸ್ ಚಿತ್ರಗಾರ ಅವರ ಸವಾ೯ಧ್ಯಕ್ಷ್ಯತೆಯಲ್ಲಿ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಡಾ.ಎಂ.ಜಿ.ಆರ್. ಅರಸು ಅವರು ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ.

ತಾಲುಕು ಅಧ್ಯಕ್ಷ ಮೈಲಾರಪ್ಪ ಉ೦ಕಿ ಅಧ್ಯಕ್ಷತೆ ವಹಿಸುವರು, ಸಂಸದ ರಾಜಶೇಖರ ಹಿಟ್ನಾಳ ಅವರು ಸಮ್ಮೇಳನಾಧ್ಯಕ್ಷರ ಭಾಷಣ ಪ್ರತಿ ಬಿಡುಗಡೆ, , ಶ್ರೀನಿವಾಸ ಚಿತ್ರಗಾರ ಅವರ ಎಳೆಯರಿಗಾಗಿ ಒತ್ತಕ್ಷರ ಇಲ್ಲದ ಕಥೆಗಳು ಕೃತಿಯನ್ನು

ಅವರುಬಿಡುಗಡೆಗೊಳಿಸುವರು.

ಈರಪ್ಪ ಬಿಜಲಿ ಅವರ ನಿಖಿಲ್ ನ ಬಣ್ಣದ ಕೊಡೆ ಕೃತಿಎನ್ನು ಎಂಎಲ್ಸಿ ಹೇಮಲತಾ ನಾಯಕ ಅವರು ಬಿಡುಗಡೆಗೊಳಿಸುವರು. ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಅವರು ಕವಿ ಎಪಿ ಅಂಗಡಿ ಅವರ ಕಲಾ ಕೃತಿ ಬಿಡುಗಡೆ ಗೋಳಿಸುವರು.

ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಮೇಶ ಹ್ಯಾಟಿ, ಉಪಾಧ್ಯಕ್ಷ ಹೊನ್ನೂರಸಾಬ ಬೈರಾಪುರ,ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರು, ಎಚ್.ಎಸ್.ಪಾಟೀಲ್,

ಕೆ. ಬಿ.ಬ್ಯಾಳಿ, ಗಣ್ಯರಾದ ಶ್ರೀನಿವಾಸ ಗುಪ್ತಾ, ಅಮ್ಜದ್ ಪಟೇಲ್, ಗುರುರಾಜ್ ಹಲಗೇರಿ, ಸಿ.ವಿ.ಚಂದ್ರಶೇಖರ, ತುಕರಾಮಪ್ಪ ಗಡಾದ, ಮೀಡಿಯ ಕ್ಲಬ್ ಅಧ್ಯಕ್ಷ ದೇವು ನಾಗನೂರು, ಕಾಯ೯ ನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ರಾಜು ಬೀ.ಆರ್,ಕವಿ ಸಿರಾಜ್ ಬಿಸರಳ್ಳಿ ಸೇರಿದಂತೆ ಇತರರು ಆಗಮಿಸುವರು.

ನಂತರ ಗೋಷ್ಠಿ ೧ ರಚುಟುಕು ಸಾಹಿತ್ಯ ಬೆಳೆದು ಬಂದ ಬಗೆ ಕುರಿತು ಶಿ. ಕಾ.ಬಡಿಗೇರ ಅವರು ಉಪನ್ಯಾಸ ನೀಡಲಿದ್ದಾರೆ, ಡಾ.ಮಹಾಂತೇಶ್ ಮಲ್ಲನಗೌಡರ ಅಧ್ಯಕ್ಷತೆ ವಹಿಸಲಿದ್ದಾರೆ, ಸಾಹಿತಿಗಳಾದ ರವಿತೇಜ ಅಬ್ಬಿಗೇರಿ,ಡಾ.ಬಸವರಾಜ್ ಪೂಜಾರ್, ಬೀರಪ್ಪ ಅಂಡಗಿ, ಕೋಮಲಾ ಕುದರಿ ಮೋತಿ, ಬಸವರಾಜ್ ಶೀಲವಂತರ, ಡಾ.ಬಸವರಾಜ್ ಗಡಾದ, ಡಾ.ಫಕೀರಪ್ಪ ವಜ್ರಬಂಡಿ, ಮಹಬೂಬ ನದಾಫ್ ಅತಿಥಿಗಳಾಗಿ ಆಗಮಿಸುವರು.

ಗೋಷ್ಠಿ ೨ ರಲ್ಲಿ ಕೊಪ್ಪಳ ತಾಲ್ಲೂಕು ಅಭಿವೃದ್ದಿ ಒಂದು ಅವಲೋಕನ ಕುರಿತು ಹಿರಿಯ ಪತ್ರಕರ್ತ ಶರಣಪ್ಪ ಬಾಚಲಾಪುರ ಅವರು ಕುರಿತು ವಿಷಯ ಮಂಡಿಸಲಿದ್ದಾರೆ, ಹಿರಿಯ ಚಿಂತಕ ವೀರಣ್ಣ ಹುರಕಡ್ಲಿ ಅಧ್ಯಕ್ಷತೆ ವಹಿಸುವರು, ಸಾಹಿತಿ ಈಶ್ವರ ಹತ್ತಿ, ವಕೀಲರಾದ ಆರ್.ಬೀ. ಪಾನಘಂಟಿ, ಸಿ.ವಿ.ಜಡಿಯವರ, ಉಮೇಶ್ ಸುವೆ೯, ಬಾಳಪ್ಪ ವೀರಾಪುರ, ಬಸವರಾಜ್ ಕೊಡ್ಲಿ, ನಾಗರಾಜ್ ಡೊಳ್ಳಿನ, ಕಾಶಪ್ಪ ಛಲವಾದಿ, ಮುದುಕಪ್ಪ ಹೊಸಮನಿ, ಎಸ್.ಬೀ.ಕಡೆ ಮನಿ ಸೇರಿದಂತೆ ಇತರರು ಆಗಮಿಸಲಿದ್ದಾರೆ.

ನಂತರ ನಡೆಯುವ ಚುಟುಕು ಕವಿಗೋಷ್ಠಿಯನ್ನು ಹಿರಿಯ ಕವಿ ವಿ.ಬೀ.ಪಟ್ಟಣಶೆಟ್ಟಿ ಅವರು ಉದ್ಘಾಟಿಸುವರು. ಕವಿ ಯಲ್ಲಪ್ಪ ಮಲ್ಲಪ್ಪ ಹರನಾಳಗಿ ಅಧ್ಯಕ್ಷತೆ ವಹಿಸುವರು, ಶರಣಬಸಪ್ಪ ಬಿಳಿಯಲಿ ಅವರು ಆಶಯ ನುಡಿ ಹೇಳಲಿದ್ದಾರೆ, ಸಾಹಿತಿಗಳಾದ ವೀರಣ್ಣ ವಾಲಿ, ಅಕ್ಬರ್ ಸಿ.ಕಾಲಿಮಿಚಿ೯, ಅರುಣಾ ನರೇಂದ್ರ ಪಾಟೀಲ್, ಡಾ. ಸಿದ್ದಲಿಂಗಪ್ಪ ಕೊಟ್ಬೇಕಲ್, ಡಾ. ತುಕಾರಾಮ ನಾಯಕ, ಪ್ರಮುಖರಾದ ವೀರೇಶ್ ತಾವರಗೇರಾ, ಅಮರೇಶ ಉಪಲಾಪುರ ಸೇರಿದಂತೆ ಇತರರು ಹಾಗೂ ಕೊಪ್ಪಳ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ ಕವಿಗಳು ಭಾಗವಹಿಸಲಿದ್ದಾರೆ.

ನಂತರ ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಾಹಿತಿ ಸಾವಿತ್ರಿ ಮುಜಮದಾರ್ ಅವರು ಸಮಾರೋಪ ನುಡಿ ಹೇಳಲಿದ್ದಾರೆ.

ಪರಿಷತ್ತಿನ ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ ಅವರು ಅಧ್ಯಕ್ಷತೆ ವಹಿಸುವರು, ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದ ಪ್ರಮುಖರಾದ ಎಂ. ಬಿ.ಅಳವಂಡಿ, ಗಿರಿಜಾ ಶಂಕರ್ ಪಾಟೀಲ್, ಜಿ.ಎಸ್.ಗೋನಾಳ, ಪರಶುರಾಮಪ್ಪ ಚಿತ್ರಗಾರ, ಗಾಳೆಪ್ಪ ಪೂಜಾರ, ವಿಶ್ವನಾಥ ಚಿತ್ರಗಾರ, ವಿದ್ಯಾವತಿ ಚಿತ್ರಗಾರ, ಮಂಜುನಾಥ ಸೊರಟೂರ, ನಾಗರಾಜ್ ದಂಡೋತಿ, ಚುಟುಕು ಸಾಹಿತ್ಯ ಪರಿಷತ್ ವಿವಿಧ ತಾಲ್ಲೂಕುಗಳ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಆಗಮಿಸುವರು.

ಇಡೀ ದಿನ ನಡೆಯುವ ಸಮ್ಮೇಳನದಲ್ಲಿ ಕೊಪ್ಪಳ ಜಿಲ್ಲೆಯ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಸಮ್ಮೇಳನ ಮುನ್ನ ಸಾಯಿಬಾಬಾ ದೇವಸ್ಥಾನದಿಂದ ನಿಮಿಷಾಂಬ ದೇವಸ್ಥಾನ ವರೆಗೆ ಸಮ್ಮೇಲಧ್ಯಕ್ಷರ ಮೆರವಣಿಗೆ ನಡೆಯಲಿದೆ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪರಿಷತ್ತಿನ ತಾಲುಕು ಅಧ್ಯಕ್ಷ ಮೈಲಾರಪ್ಪ ಉಂಕಿ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಮಹಾಂತೇಶ ನೇಲಾಗಣಿ ತಾಲುಕು ಪ್ರಧಾನ ಕಾರ್ಯದರ್ಶಿ ಅಮೀನ ಸಾಬ್ ಮುಲ್ಲಾ ತಿಳಿಸಿದ್ದಾರೆ .

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande