
ಕೋಲಾರ, ಜೂ.೨೨ (ಹಿ.ಸ) :
ಆ್ಯಂಕರ್ : ನೂರಾರು ವರ್ಷಗಳ ಇತಿಹಾಸವಿರುವ, ಕೋಲಾರ ನಗರದ ಹೃದಯಭಾಗದ ಧಾರ್ಮಿಕ ಶ್ರದ್ಧಾಕೇಂದ್ರ ಶಿಥಿಲಾವಸ್ಥೆಯಲ್ಲಿರುವ ಕೀಲುಕೋಟೆ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಸಂಪೂರ್ಣವಾಗಿ ಕಲ್ಲಿನಲ್ಲೇ ಪುನರ್ ನಿರ್ಮಾಣ ಮಾಡುವುದು ನನ್ನ ಜೀವನದ ಬಹುದೊಡ್ಡ ಸಂಕಲ್ಪ ಎಂದು ಶಾಸಕ ಕೊತ್ತೂರು ಜಿ. ಮಂಜುನಾಥ್ ಹೇಳಿದರು.
ನಗರದ ತಹಶಿಲ್ದಾರ್ ಕಛೇರಿಯಲ್ಲಿ ಸೋಮವಾರ ಕೀಲುಕೋಟೆ ಆಂಜನೇಯ ಸ್ವಾಮಿ ದೇವಾಲಯ ಜಿರ್ಣೋದ್ದಾರ ಕುರಿತು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಕೀಲುಕೋಟೆ ಅಂಜನೇಯ ಸ್ವಾಮಿ ದೇವಾಲಯ ಜೀರ್ಣೋದ್ದಾರ
?ಅಷ್ಟೇ ಅಲ್ಲದೆ, ಈ ಪುಣ್ಯಕಾರ್ಯಕ್ಕೆ ವಿಘ್ನ ತರಲು ಪ್ರಯತ್ನಿಸುವವರು ನಮ್ಮಿಂದ ತೊಂದರೆಗೆ ಸಿಲುಕದಿರುವುದು ಒಳ್ಳೆಯದು ಎಂದು ಎಚ್ಚರಿಕೆ ನೀಡಿದರು.
ದೇವಾಲಯದ ಜೀರ್ಣೋದ್ದಾರ ಕಾರ್ಯಕ್ಕೆ ಈಗಾಗಲೇ ನೀಲಿನಕ್ಷೆ ಸಿದ್ಧವಾಗಿದ್ದು ಒಂದೂವರೆ ವರ್ಷದೊಳಗೆ ಕೆಲಸ ಮುಗಿಸಲು ದಿನಾಂಕ ನಿಗದಿಯಾಗಿದೆ: ಜೂನ್ ೨೪ (ಬುಧವಾರ) ಬೆಳಿಗ್ಗೆ ೮:೩೦ಕ್ಕೆ ಹಳೆಯ ಹಾಗೂ ಶಿಥಿಲಗೊಂಡಿರುವ ದೇವಸ್ಥಾನದ ಕಟ್ಟಡವನ್ನು ತೆರವುಗೊಳಿಸುವ ಮುನ್ನ ಶಾಸ್ತ್ರೋಕ್ತವಾಗಿ ವಿಶೇಷ ಪೂಜೆ ಸಲ್ಲಿಸಿ, ತೆರವು ಕಾರ್ಯಾಚರಣೆಗೆ ಚಾಲನೆ ನೀಡಲಾಗುತ್ತದೆ ಎಂದರು.
ವಾಸ್ತುಪ್ರಕಾರವಾಗಿ ಹೊಸ ದೇಗುಲ ನಿರ್ಮಿಸಲು ಜುಲೈ ೫ ರಂದು ಗುದ್ದಲಿ ಪೂಜೆ ನೆರವೇರಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಮುಂದಿನ ೧೮ ತಿಂಗಳ ಒಳಗಾಗಿ ಇಡೀ ಕಾಮಗಾರಿಯನ್ನು ಪೂರ್ಣಗೊಳಿಸಿ, ಭಕ್ತಾದಿಗಳ ದರ್ಶನಕ್ಕೆ ಭವ್ಯ ಮಂದಿರವನ್ನು ಮುಕ್ತ ಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಈ ದೇವಸ್ಥಾನದ ಜೀರ್ಣೋದ್ದಾರಕ್ಕೆ ನೂರು ಮಂದಿ ಅಡ್ಡಗಾಲು ಹಾಕಿದರೂ ನಾನು ಯಾರಿಗೂ ಕಣ್ಮುಚ್ಚಿ ಕೂರಲ್ಲ. ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡಿಯೇ ತೀರುತ್ತೇನೆ. ಧನಸಹಾಯ ಮಾಡುವ ಗುಣವಿರುವವರು ನಮ್ಮ ಜೊತೆ ಕೈಜೋಡಿಸಿ. ಅದನ್ನು ಬಿಟ್ಟು ದೇವಸ್ಥಾನದ ಕೆಲಸಕ್ಕೆ ತೊಂದರೆ ಕೊಡಲು ಬಂದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಗುಡುಗಿದರು.
ದೇವಸ್ಥಾನದ ನಿರ್ಮಾಣ ಕಾರ್ಯಕ್ಕಾಗಿ ಶಾಸಕರನ್ನೊಳಗೊಂಡ ತಮ್ಮ ತಂಡದ ವತಿಯಿಂದ ೫೦ ಲಕ್ಷ ರೂಪಾಯಿಗಳ ಬೃಹತ್ ವೈಯಕ್ತಿಕ ದೇಣಿಗೆಯನ್ನು ಘೋಷಿಸಿದ್ದಾರೆ. ಸದ್ಯ ತಾವೇ ಮುಜರಾಯಿ ಇಲಾಖೆಯ ಸಮಿತಿ ಅಧ್ಯಕ್ಷರಾಗಿರುವುದರಿಂದ, ಇಡೀ ಆರ್ಥಿಕ ವ್ಯವಹಾರದ ಉಸ್ತುವಾರಿಯನ್ನು ತಾವೇ ಖುದ್ದಾಗಿ ನೋಡಿಕೊಳ್ಳುವುದಾಗಿ ಸ್ಪಷ್ಟಪಡಿಸಿದರು.
ದಾನಿಗಳು ನೀಡುವ ಪ್ರತಿಯೊಂದು ರೂಪಾಯಿ ಹಣವೂ ದುರುಪಯೋಗವಾಗದಂತೆ ತಡೆಯಲು ದೇವಸ್ಥಾನ ಜೀರ್ಣೋದ್ದಾರ ಸಮಿತಿಯನ್ನು ರಚಿಸಲಾಗಿದೆ ಸಾರ್ವಜನಿಕರು ಹಾಗೂ ದಾನಿಗಳು ನೀಡುವ ಹಣವನ್ನು ನೇರವಾಗಿ ಸಮಿತಿಯ ಬ್ಯಾಂಕ್ ಖಾತೆಗೆ ಜಮೆ ಮಾಡಿಕೊಂಡು, ಹಂತ ಹಂತವಾಗಿ ದೇವಸ್ಥಾನದ ಅಭಿವೃದ್ಧಿಗೆ ಮಾತ್ರ ಬಳಸಲಾಗುವುದು ಎಂದು ಶಾಸಕರು ತಿಳಿಸಿದರು.
ಸಭೆಯಲ್ಲಿ ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್, ತಹಶೀಲ್ದಾರ್ ಶ್ರೀನಿವಾಸ್, ತಾಪಂ ಇಒ ಮಂಜುನಾಥ್, ಮುಜರಾಯಿ ತಹಶೀಲ್ದಾರ್ ಮೋಹನ್, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಆ??? ರಾಜೇಂದ್ರ ಪ್ರಸಾದ್ ಸೇರಿದಂತೆ ದಾನಿಗಳು, ದೇವಾಲಯದ ಅರ್ಚಕರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್