
ಕೋಲಾರ, ೨೨ ಜೂನ್ (ಹಿ.ಸ) :
ಆ್ಯಂಕರ್ : ವಿಶ್ವ ಯೋಗ ದಿನಾಚರಣೆ ಹಿನ್ನಲೆ, ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ವೃಷಬಾದ್ರಿ ಬೆಟ್ಟದ ಸುಮಾರು ಒಂದು ಸಾವಿರ ಅಡಿಗಳ ಮೇಲ್ಭಾಗದಲ್ಲಿ ನೂರಾರು ವಿದ್ಯಾರ್ಥಿಗಳೊಂದಿಗೆ ಯೋಗಾಭ್ಯಾಸ ಮಾಡುವ ಮೂಲಕ ಮಾಜಿ ಸಂಸದ ಎಸ್ ಮುನಿಸ್ವಾಮಿ ಹಾಗೂ ಬಿಜೆಪಿ ನಾಯಕರು ಯೋಗ ದಿನವನ್ನು ವಿಭಿನ್ನವಾಗಿ ಆಚರಿಸಿದರು.
ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ದೇವರಾಯಸಮುದ್ರ ಗ್ರಾಮದ ಏಕಶಿಲಾ ಬೆಟ್ಟ ಎಂಬ ಖ್ಯಾತಿ ಗಳಿಸಿರುವ ಪೌರಾಣಿಕ ಹಿನ್ನಲೆಯುಳ್ಳ, ವೃಷಬಾದ್ರಿ ಬೆಟ್ಟದಲ್ಲಿ, ಬೆಳಗ್ಗೆ ೮ ಗಂಟೆ ಯೋಗಾಭ್ಯಾಸಕ್ಕೆ ಚಾಲನೆ ನೀಡಲಾಯಿತು. ಯೋಗಾಭ್ಯಾಸದಲ್ಲಿ ಕೋಲಾರದ ಸೈನಿಕ್ ಪಬ್ಲಿಕ್ ಶಾಲೆ ಹಾಗು ಆಚಾರ್ಯ ಶಾಲೆಯ ಮಕ್ಕಳು, ಮುಳಬಾಗಿಲು ಹಾಗು ಕೋಲಾರದ ಬಿಜೆಪಿ ಮುಖಂಡರು ಸೇರಿ ೩೦೦ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಯೋಗ ಪಟುಗಳು ಭಾಗಿಯಾಗಿದ್ದರು.
ಸುಮಾರು ೧ ಸಾವಿರ ಅಡಿಗಳಷ್ಟು ಎತ್ತರದ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ಯೋಗಭ್ಯಾಸದಲ್ಲಿ ವಿಧ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದು ಕಂಡುಬAತು, ಬೆಳಗ್ಗೆ ೮ ರಿಂದ ೧೦ ಗಂಟೆಯ ವರೆಗೂ ೨ ಗಂಟೆಗಳ ಕಾಲ, ವಿವಿಧ ಭಂಗಿಗಳಲ್ಲಿ ಯೋಗಾಭ್ಯಾಸ ಮಾಡಲಾಯಿತು.
ಯೋಗಾಭ್ಯಾಸದ ಭಾಗವಾಗಿ ಶಾಲಾ ವಿಧ್ಯಾರ್ಥಿಗಳು ದೇಶಭಕ್ತಿ ಗೀತೆಗಳಿಗೆ ಯೋಗವನ್ನು ಪ್ರದರ್ಶಿಸುವ ಮೂಲಕ ಸಾಹಸಮಯ ಪ್ರದರ್ಶನ ನೀಡಿದರು. ಸುಂದರವಾದ ಪ್ರಕೃತಿಯ ಸೊಬಗಿನಲ್ಲಿ ಹಮ್ಮಿಕೊಂಡಿದ್ದ ಯೋಗಾಭ್ಯಾಸದಲ್ಲಿ ಭಾಗಿಯಾದ ವಿಧ್ಯಾರ್ಥಿಗಳು ಎತ್ತರ ಪ್ರದೇಶವನ್ನ ಕಂಡು ಪುಳಕಿತರಾದರು.
ಈ ಸಂದರ್ಭದಲ್ಲಿ ಯೋಗ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಮಾಜಿ ಸಂಸದ ಮುನಿಸ್ವಾಮಿ,ಪ್ರಪಂಚದಾದ್ಯAತ ಯೋಗ್ಯಾಭ್ಯಾಸ ಇಂದು ನಡೆಯಲು, ಪ್ರಧಾನಿ ಮೋದಿ ಕಾರಣರು ಎಂದರು.
೨೦೧೫ ರಲ್ಲಿ ಪ್ರಧಾನ ಮಂತ್ರಿ ನರೇಂದ್ರಮೋದಿಯವರು ಜೂನ್ ೨೧ ನ್ನು ವಿಶ್ವ ಯೋಗ ದಿನವಾಗಿ ಆಚರಣೆ ಮಾಡಬೇಕು ಎಂದು ವಿಶ್ವ ಸಂಸ್ಥೆಯಲ್ಲಿ ಮಂಡಿಸಿದರು. ಬಹುತೇಕ ರಾಷ್ಟçಗಳು ಒಪ್ಪಿಗೆ ಸೂಚಿಸಿದವು. ಅಂದಿನಿAದ ವಿಶ್ವ ಯೋಗ ದಿನಾಚರಣೆ ಮಾಡಲಾಗುತ್ತಿದೆ ಎಂದರು.
ದೈಹಿಕವಾಗಿ, ಮಾನಸಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಸದೃಢರಾಗಲು ಯೋಗ ಅತ್ಯಂತ ಮಹತ್ವವಾಗಿದೆ. ಜಾಗತಿಕ ಮಟ್ಟದಲ್ಲಿ ಯೋಗ ಮನ್ನಣೆ ಪಡೆದಿದೆ. ಎಲ್ಲರಲ್ಲೂ ಶಾಂತಿ, ಸಾಮರಸ್ಯ, ಪರಸ್ಪರ ಗೌರವವನ್ನು ಬೆಸೆಯಲು ಯೋಗ ಸಹಕಾರಿಯಾಗಿದೆ ಎಂದರು.
ಸಮಾಜದಲ್ಲಿ ಒತ್ತಡವಿಲ್ಲದ ಮನೆ, ವ್ಯಕ್ತಿ ನೋಡಲು ಸಾಧ್ಯವಿಲ್ಲ. ಒತ್ತಡವನ್ನು ನಿವಾರಿಸುವುದು ದೊಡ್ಡ ಸವಾಲಾಗಿದೆ. ಈ ಒತ್ತಡವನ್ನು ನಿಭಾಯಿಸಲು, ಶಾಶ್ವತ ಪರಿಹಾರ ಯೋಗ. ಯೋಗವನ್ನು ಅಂತರ್ಗತ ಮಾಡಿಕೊಳ್ಳುವುದಷ್ಟೇ ಅಲ್ಲ ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲು ಪರಿಣಾಮಕಾರಿ ಸಾಧನವಾಗಿದೆ ಎಂದು ತಿಳಿಸಿದರು.
ಯೋಗಾಭ್ಯಾಸದ ನಂತರ ಶಾಲಾ ಮಕ್ಕಳಿಗೆ ತಿಂಡಿಯ ವ್ಯವಸ್ಥೆ ಮಾಡಲಾಗಿತ್ತು. ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಕೋಲಾರದ ಸೈನಿಕ್ ಹಾಗು ಆಚಾರ್ಯ ಶಾಲೆ ಶಿಕ್ಷಕರು, ಕೋಲಾರದ ಮುಖಂಡರಾದ ನಾಗಭೂಷಣ್, ಮುನೇಗೌಡ, ಅಪ್ಪಿ ನಾರಾಯಣಸ್ವಾಮಿ, ಹಾಗೂ ಮುಳಬಾಗಿಲು ತಾಲೂಕಿನ ಬಿಜೆಪಿ ಮುಖಂಡರಾದ ಮಾಜಿ ಅಧ್ಯಕ್ಷ÷್ಯ ಅಶೋಕ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಸೋಮಶೇಖರ್, ತಾಲೂಕು ಉಪಾಧ್ಯಕ್ಷ÷್ಯ ಪ್ರಕಾಶ್, ಮೈಕ್ ಶಂಕರ್, ಯುವ ಮೋರ್ಚಾ ಅಧ್ಯಕ್ಷ÷್ಯ ಆವಣಿ ಶರಣ್ ಹಾಗು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್