
ಶಿವಮೊಗ್ಗ, 21 ಜೂನ್ (ಹಿ.ಸ.):
ಆ್ಯಂಕರ್:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ,ಶಿವಮೊಗ್ಗ ವಿಭಾಗದಲ್ಲಿ ಶಿಶಿಕ್ಷು ತರಬೇತಿಗೆ ಖಾಲಿಯಿರುವ ತಾಂತ್ರಿಕ ವೃತ್ತಿಗಳಿಗೆ ಐಟಿಐ, ಫಿಟ್ಟರ್, ಎಲೆಕ್ಟ್ರಿಷಿಯನ್, ಮೆಕ್ಯಾನಿಕಲ್ (ಡಿಸೇಲ್), ವೆಲ್ಡರ್, ಕೋಪಾ (ಪಾಸಾ)/ ಡಿ.ಟಿ.ಪಿ.ಓ. ಒಂದು ವರ್ಷದ ತರಬೇತಿ ಮೇಲೆ ನಿಯೋಜಿಸಿಕೊಳ್ಳಲು ಐ.ಟಿ.ಐ. ನಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ವಿಭಾಗೀಯ ಕಚೇರಿ, ಕ.ರಾ.ರ.ಸಾ.ನಿಗಮ, ಶಿವಮೊಗ್ಗ ಬಸ್ ನಿಲ್ದಾಣ ಇಲ್ಲಿ ಜು.05 ರೊಳಗೆ ಹಾಜರಾಗಿ ದಾಖಲಾತಿಗಳನ್ನು ಸಲ್ಲಿಸುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ನಿಗಮದ ಸಂಬಂಧಪಟ್ಟ ಅಧಿಕಾರಿ/ಘಟಕ ವ್ಯವಸ್ಥಾಪಕರನ್ನು ಕಚೇರಿ ಸಮಯದಲ್ಲಿ ಸಂಪರ್ಕಿಸುವುದು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.