
ಕುಡತಿನಿ, 21 ಜೂನ್ (ಹಿ.ಸ.):
ಆ್ಯಂಕರ್ : ಕುಡತಿನಿಯಲ್ಲಿ ನಿರ್ಮಾಣ ಆಗುತ್ತಿರುವ ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ನ ನಿರ್ಮಾಣ ಸ್ಥಳದಲ್ಲಿ ಲಿಫ್ಟ್ ನ ಬಕೆಟ್ 60 ಅಡಿ ಎತ್ತರದಿಂದ ಬಿದ್ದ ಕಾರಣ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ.
ಮೃತರು ಕುರುಗೋಡು ತಾಲೂಕಿನ ತಿಮ್ಲಾಪುರ ಗ್ರಾಮ ನಿವಾಸಿ ತಂಡ ಮಲ್ಲಪ್ಪ (52) ಮತ್ತು ಗೆಣಿಕೆಹಾಳ್ ಗ್ರಾಮ ನಿವಾಸಿ ನೀಲಮ್ಮ (35) ಎಂದು ಪೊಲೀಸರು ತಿಳಿಸಿದ್ದಾರೆ.
ಕುಡತಿನಿ ಪಟ್ಟಣದ ಹೆಚ್.ಎಲ್.ಸಿ ಕಾಲೋನಿ ಬಳಿ ನಿರ್ಮಾಣವಾಗುತ್ತಿರುವ ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ಕಾಮಗಾರಿ ಸ್ಥಳದಲ್ಲಿ ಬಾನುವಾರ ಬೆಳಿಗ್ಗೆ ಈ ದುರ್ಘಟನೆ ನಡೆದಿದೆ.
ನೀರಿನ ಟ್ಯಾಂಕ್ನ ಮೇಲೆ ಮರಳು, ಸಿಮೆಂಟ್ ಹಾಗೂ ಇತರೆ ಸಾಮಾಗ್ರಿಗಳನ್ನು ಲಿಫ್ಟ್ ಮೂಲಕ ಸಾಗಿಸುವಾಗ, ಕಾಂಕ್ರೀಟ್ ಲಿಫ್ಟ್ ಬಕೆಟ್ನ ವೈರ್ ತುಂಡಾಗಿ ಸುಮಾರು 60 ಅಡಿ ಎತ್ತರದಿಂದ ಕೆಳಗೆ ಬಿದ್ದಿದೆ. ಈ ವೇಳೆ ಕೆಲಸ ಮಾಡುತ್ತಿದ್ದ ತಂಡ ಮಲ್ಲಪ್ಪ ಮತ್ತು ನೀಲಪ್ಪ ಅವರ ಮೇಲೆ ಬಕೆಟ್ ಬಿದ್ದ ಪರಿಣಾಮ ಇಬ್ಬರೂ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕುಡತಿನಿ ಪೊಲೀಸ್ ಠಾಣೆಯಲ್ಲಿ ಕಾಮಗಾರಿಯ ಗುತ್ತಿಗೆದಾರ ಬಸವರಾಜ್ ಹಾಗೂ ಸೂಪರ್ವೈಸರ್ ಖಾದರ್ ಭಾಷಾ ವಿರುದ್ಧ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್