
ಬಳ್ಳಾರಿ, 20 ಜೂನ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-1 ರ ವ್ಯಾಪ್ತಿಗೆ ಬರುವ 110/11ಕೆವಿ ಸೌತ್ ವಿದ್ಯುತ್ ವಿತರಣ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಎಫ್-25 ಹಾಗೂ ಎಫ್-26 ಫೀಡರ್ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಹಾಗೂ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜೂ.21 ರಂದು ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ಈ ಕೆಳಗಿನ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ವ್ಯತ್ಯಯವಾಗುವ ಏರಿಯಾಗಳು :
ಬಾಪೂಜಿ ನಗರ, ಬಾಪೂಜಿ ನಗರ ಸರ್ಕಲ್, ರಾಣಿತೋಟ, ಕಣೆಕಲ್ ಬಸ್ ಸ್ಟ್ಯಾಂಡ್, ದೊಡ್ಡ ಮಾರ್ಕೆಟ್, ಟೋಪಿಗಲ್ಲಿ, ಮರಿಸ್ವಾಮಿ ಮಠ, ಕಂಬಳಿ ಬಜಾರ್, ಅಲ್ಲಂ ಕಾಂಪೌಂಡ್, ನಾಗಪ್ಪ ಕಟ್ಟೆ, ಹೂವಿನ ಮಾರುಕಟ್ಟೆ, ಇಂಡಸ್ಟ್ರಿಯಲ್ ಏರಿಯಾ ಹಂತ-1 ಸೇರಿದಂತೆ ಇನ್ನೂ ಮುಂತಾದ ಏರಿಯಾಗಳು.
ಹಾಗಾಗಿ ಸಾರ್ವಜನಿಕರು, ವಿದ್ಯುತ್ ಗ್ರಾಹಕರು ಜೆಸ್ಕಾಂ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್