
ಬಳ್ಳಾರಿ, 20 ಜೂನ್ (ಹಿ.ಸ.) :
ಆ್ಯಂಕರ್ : ನಗರದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಹೊಸದಾಗಿ ಮಂಜೂರಾಗಿರುವ ಮೆಟ್ರಿಕ್ ನಂತರದ ಪುರುಷ ಹಾಗೂ ಮಹಿಳಾ ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸಲು ಬಾಡಿಗೆ ಆಧಾರದ ಮೇಲೆ ಖಾಸಗಿ ಕಟ್ಟಡಗಳ ಅವಶ್ಯಕತೆ ಇದ್ದು, ಆಸಕ್ತ ಮಾಲೀಕರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಬಳ್ಳಾರಿ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯವರು ತಿಳಿಸಿದ್ದಾರೆ.
ಸರ್ಕಾರದ ಆದೇಶ ಹಾಗೂ ಸುತ್ತೋಲೆಯ ಮಾನದಂಡಗಳ ಪ್ರಕಾರ, ಲೋಕೋಪಯೋಗಿ ಇಲಾಖೆಯು ನಿಗದಿಪಡಿಸುವ ಬಾಡಿಗೆ ದರಕ್ಕನುಗುಣವಾಗಿ ತಮ್ಮ ಕಟ್ಟಡಗಳನ್ನು ಬಾಡಿಗೆಗೆ ನೀಡಲು ಇಚ್ಛಿಸುವ ಮಾಲೀಕರು ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ.
ಬಳ್ಳಾರಿ ನಗರದಲ್ಲಿ ಹೊಸದಾಗಿ ಒಟ್ಟು 02 (ಪುರುಷ ಹಾಗೂ ಮಹಿಳಾ) ವಿದ್ಯಾರ್ಥಿನಿಲಯಗಳನ್ನು ಆರಂಭಿಸಲಾಗುತ್ತಿದ್ದು, ಅದಕ್ಕೆ ಸೂಕ್ತವಾದ ಖಾಸಗಿ ಕಟ್ಟಡ ಬೇಕಾಗಿದೆ. ಮಾಲೀಕರು ಕಚೇರಿ ವೇಳೆಯಲ್ಲಿ ಈ ಕೆಳಗಿನ ವಿಳಾಸಕ್ಕೆ ಭೇಟಿ ನೀಡಬಹುದಾಗಿದೆ.
ಸಂಪರ್ಕಿಸಬೇಕಾದ ಕಚೇರಿ ವಿಳಾಸ:
ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, 1ನೇ ಮಹಡಿ, ಡಿಸ್ನಿ ಫಂಕ್ಷನ್ ಹಾಲ್ ಎದುರುಗಡೆ, ಎಲ್.ಎಲ್.ಸಿ ಕಾಲೋನಿ, ಓ.ಪಿ. ಸರ್ಕಲ್ ಹತ್ತಿರ, ಕಂಟೋನ್ಮೆಂಟ್, ಬಳ್ಳಾರಿ – 583104.
ಹೆಚ್ಚಿನ ಮಾಹಿತಿ ಹಾಗೂ ವಿವರಗಳಿಗಾಗಿ ದೂ.08392-294492 ಗೆ ಸಂಪರ್ಕಿಸಬಹುದಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್