`ಹೆಲ್ಮೆಟ್ ಕಡ್ಡಾಯ' ; 3 ಲಕ್ಷ 5 ಸಾವಿರ ರೂ. ದಂಡ ಸಂಗ್ರಹ
ಬಳ್ಳಾರಿ, 02 ಜೂನ್ (ಹಿ.ಸ.) : ಆ್ಯಂಕರ್ : ಬಳ್ಳಾರಿ ಜಿಲ್ಲೆಯಾದ್ಯಂತ ಜೂನ್ 1 ರ ಸೋಮವಾರದಿಂದ ದ್ವಿಚಕ್ರ ವಾಹನ ಸವಾರರು `ಕಡ್ಡಾಯವಾಗಿ ಹೆಲ್ಮೆಟ್'' ಧರಿಸಬೇಕು ಎಂದು ಜಿಲ್ಲಾ ಪೊಲೀಸರು ಆದೇಶ ಜಾರಿ ಮಾಡಿರುವ ಕಾರಣ ಸೋಮವಾರ ಒಟ್ಟು 611 ಪ್ರಕರಣಗಳು ದಾಖಲಾಗಿ, 3,05,500 ರೂಪಾಯಿ ದಂಡ ಸಂಗ್ರಹವಾಗಿದೆ.
`ಹೆಲ್ಮೆಟ್ ಕಡ್ಡಾಯ' ; 3 ಲಕ್ಷ 5 ಸಾವಿರ ರೂ. ದಂಡ ಸಂಗ್ರಹ


ಬಳ್ಳಾರಿ, 02 ಜೂನ್ (ಹಿ.ಸ.) :

ಆ್ಯಂಕರ್ : ಬಳ್ಳಾರಿ ಜಿಲ್ಲೆಯಾದ್ಯಂತ ಜೂನ್ 1 ರ ಸೋಮವಾರದಿಂದ ದ್ವಿಚಕ್ರ ವಾಹನ ಸವಾರರು `ಕಡ್ಡಾಯವಾಗಿ ಹೆಲ್ಮೆಟ್' ಧರಿಸಬೇಕು ಎಂದು ಜಿಲ್ಲಾ ಪೊಲೀಸರು ಆದೇಶ ಜಾರಿ ಮಾಡಿರುವ ಕಾರಣ ಸೋಮವಾರ ಒಟ್ಟು 611 ಪ್ರಕರಣಗಳು ದಾಖಲಾಗಿ, 3,05,500 ರೂಪಾಯಿ ದಂಡ ಸಂಗ್ರಹವಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್ ಅವರು ಪತ್ರಿಕಾ ಪ್ರಕಟಣೆ ನೀಡಿದ್ದು, ಬಳ್ಳಾರಿ ನಗರ ಉಪ ವಿಭಾಗದಲ್ಲಿ 300 ಪ್ರಕರಣಗಳು ದಾಖಲಾಗಿ, 1,50,000 ರೂ ದಂಡವನ್ನು, ಸಿರುಗುಪ್ಪ ಉಪ ವಿಭಾಗದಲ್ಲಿ 172 ಪ್ರಕರಣಗಳು ದಾಖಲಾಗಿ, 86,000 ರೂ ದಂಡವನ್ನು ಮತ್ತು ತೋರಣಗಲ್ಲು ಉಪ ವಿಭಾಗದಲ್ಲಿ 139 ಪ್ರಕರಣಗಳು ದಾಖಲಾಗಿ 69,500 ರೂಪಾಯಿ ದಂಡವನ್ನು ಸಂಗ್ರಹ ಮಾಡಲಾಗಿದೆ. ಒಟ್ಟು 611 ಪ್ರಕರಣಗಳು ದಾಖಲಾಗಿ, 3,05,500 ರೂಪಾಯಿ ದಂಡ ಸಂಗ್ರಹವಾಗಿದೆ ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande