ಬಳ್ಳಾರಿ : ಎರಡು ತಾಸು ನಿರಂತರ ಮಳೆ
ಬಳ್ಳಾರಿ, 02 ಜೂನ್ (ಹಿ.ಸ.) : ಆ್ಯಂಕರ್ : ಮಂಗಳವಾರ ಸಂಜೆ 5 ಗಂಟೆಗೆ ಬಳ್ಳಾರಿ ನಗರದಲ್ಲಿ ಗುಡುಗು - ಸಿಡಿಲಿನಿಂದ ಪ್ರಾರಂಭವಾದ ಮಳೆಯು 2 ತಾಸುಗಳ ಕಾಲ ನಿರಂತರ ಸುರಿದು, ಅಲ್ಲಲ್ಲಿ ಗಿಡಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ನಗರಾದ್ಯಂತ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಮಳೆ ನೀರು ತಗ್ಗು
ಬಳ್ಳಾರಿ : ಎರಡು ತಾಸು ನಿರಂತರ ಮಳೆ


ಬಳ್ಳಾರಿ, 02 ಜೂನ್ (ಹಿ.ಸ.) :

ಆ್ಯಂಕರ್ : ಮಂಗಳವಾರ ಸಂಜೆ 5 ಗಂಟೆಗೆ ಬಳ್ಳಾರಿ ನಗರದಲ್ಲಿ ಗುಡುಗು - ಸಿಡಿಲಿನಿಂದ ಪ್ರಾರಂಭವಾದ ಮಳೆಯು 2 ತಾಸುಗಳ ಕಾಲ ನಿರಂತರ ಸುರಿದು, ಅಲ್ಲಲ್ಲಿ ಗಿಡಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.

ನಗರಾದ್ಯಂತ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಮಳೆ ನೀರು ತಗ್ಗು ಪ್ರದೇಶದಲ್ಲಿ ಸೇರಿ ಅನೇಕರ ಮನೆಗಳಿಗೆ ನೀರು ನುಗ್ಗಿದೆ. ಈವರೆಗೆ ಯಾವುದೇ ಅನಾಹುತಗಳು - ಅಪಾಯಗಳು ಸಂಭವಿಸಿದ ವರದಿಯಾಗಿಲ್ಲ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande