ಬಳ್ಳಾರಿ : ದೇವದಾಸಿಯರಿಗೆ ಸ್ಥಗಿತಗೊಂಡಿರುವ ಪೆನ್ಶನ್ ಪಾವತಿಸಲು ಆಗ್ರಹಿ ಮನವಿ
ಬಳ್ಳಾರಿ, 02 ಜೂನ್ (ಹಿ.ಸ.) : ಆ್ಯಂಕರ್ : ಕರ್ನಾಟಕ ರಾಜ್ಯದಲ್ಲಿ ದೇವದಾಸಿಯರಿಗೆ ಸ್ಥಗಿತಗೊಂಡಿರುವ ಪೆನ್ಶನ್ ಅನ್ನು ಕೂಡಲೇ ಬಿಡುಗಡೆ ಮಾಡಿ, ಪ್ರತಿ ತಿಂಗಳು ಆರು ಸಾವಿರ ರೂಪಾಯಿ ಪೆನ್ಶನ್ ಪಾವತಿಸಬೇಕು ಹಾಗೂ 2007ರಲ್ಲಿ ಸರ್ಕಾರವೇ ಸರ್ವೆ ಮಾಡಿದ ದೇವದಾಸಿ ಮಹಿಳೆಯರನ್ನು ವಯೋಮಿ ಹೇರಿ ಸರ್ವೇಯಿಂದ ಹ
ಬಳ್ಳಾರಿ : ದೇವದಾಸಿಯರಿಗೆ ಸ್ಥಗಿತಗೊಂಡಿರುವ ಪೆನ್ಶನ್ ಪಾವತಿಸಲು ಆಗ್ರಹಿ ಮನವಿ


ಬಳ್ಳಾರಿ : ದೇವದಾಸಿಯರಿಗೆ ಸ್ಥಗಿತಗೊಂಡಿರುವ ಪೆನ್ಶನ್ ಪಾವತಿಸಲು ಆಗ್ರಹಿ ಮನವಿ


ಬಳ್ಳಾರಿ, 02 ಜೂನ್ (ಹಿ.ಸ.) :

ಆ್ಯಂಕರ್ : ಕರ್ನಾಟಕ ರಾಜ್ಯದಲ್ಲಿ ದೇವದಾಸಿಯರಿಗೆ ಸ್ಥಗಿತಗೊಂಡಿರುವ ಪೆನ್ಶನ್ ಅನ್ನು ಕೂಡಲೇ ಬಿಡುಗಡೆ ಮಾಡಿ, ಪ್ರತಿ ತಿಂಗಳು ಆರು ಸಾವಿರ ರೂಪಾಯಿ ಪೆನ್ಶನ್ ಪಾವತಿಸಬೇಕು ಹಾಗೂ 2007ರಲ್ಲಿ ಸರ್ಕಾರವೇ ಸರ್ವೆ ಮಾಡಿದ ದೇವದಾಸಿ ಮಹಿಳೆಯರನ್ನು ವಯೋಮಿ ಹೇರಿ ಸರ್ವೇಯಿಂದ ಹೊರಗಿಟ್ಟಿರುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಆಗ್ರಹಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಬಳ್ಳಾರಿ ಜಿಲ್ಲೆ ಘಟಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.

ಬಳ್ಳಾರಿ ಜಿಲ್ಲಾಡಳಿತದ ಮೂಲಕ ಕರ್ನಾಟಕ ಸರ್ಕಾರಕ್ಕೆ ಮಂಗಳವಾರ ಮನವಿ ಸಲ್ಲಿಸಿದ ದೇವದಾಸಿ ಮಹಿಳೆಯರು, ನಮೂನೆ-1, ನಮೂನೆ-2, ನಮೂನೆ-3, ಸಮರ್ಪಕವಾಗಿ ಸರ್ವೇ ಮಾಡಿಲ್ಲ. ನಮೂನೆ-2ರಲ್ಲಿ ಅರ್ಜಿ ಹಾಕಿದ ದೇವದಾಸಿ ಮಹಿಳೆಯರಿಗೆ ವಯೋಮಿತಿ ಇಲ್ಲದೆ ಸಮರ್ಪಕವಾಗಿ ಸರ್ವೆ ಮಾಡಬೇಕು. ಸರ್ವೇ ಪಟ್ಟಿಯಿಂದ ಬಿಟ್ಟು ಹೋದ ದೇವದಾಸಿ ಮಹಿಳೆಯರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತಾಯಿಯ ದೇವದಾಸಿ ದೃಢೀಕರಣ ಪತ್ರ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಎಲ್ಲಾ ದೇವದಾಸಿಯರಿಗೆ 2 ಲಕ್ಷ ರೂಪಾಯಿ ಸಾಲ ಸೌಲಭ್ಯ ಸಹಾಯಧನ ನೀಡಬೇಕು. ದೇವದಾಸಿ ಮಕ್ಕಳಿಗೆ ವಿದ್ಯಾಭ್ಯಾಸ ಅನುಸಾರ ಉದ್ಯೋಗ ನೀಡಬೇಕು ಅಥವಾ ನಿರುದ್ಯೋಗ ಭತ್ಯೆಯಾಗಿ ಪ್ರತೀ ತಿಂಗಳು ಹತ್ತು ಸಾವಿರ ರೂಪಾಯಿಯನ್ನು ಪಾವತಿ ಮಾಡಬೇಕು. ಕೈಗಾರಿಕೆಗಳಿಗೆ ಭೂ ಸ್ಟಾಧೀನ ಮಾಡಿದ ರೀತಿಯಲ್ಲಿ ಸ್ಟಾಧೀನ ಮಾಡಿ ಮತ್ತು ಹೆಚ್ಚು ಜಮೀನನ್ನು ಹೊಂದಿರುವ ಮಾಲೀಕರಿಂದ ಭೂಮಿ ವಶಕ್ಕೆ ಪಡೆದು ದೇವದಾಸಿ ಮಹಿಳೆಯರಿಗೆ ಐದು ಎಕರೆ ಭೂಮಿಯನ್ನು ನೀಡಬೇಕು ಎಂದರು.

ಎಲ್ಲಾ ದೇವದಾಸಿ ಮಹಿಳೆಯರಿಗೆ ಕೆಎಂಆರ್ಸಿ ಹಣದಿಂದ ನಿವೇಶನ ಹಾಗೂ 12 ಲಕ್ಷ ರೂಪಾಯಿಗಳ ಮನೆಯನ್ನು ಉಚಿತವಾಗಿ ಕಟ್ಟಿಸಿಕೊಡಬೇಕು. ಮದುವೆ ಸಹಾಯದನಕ್ಕೆ ಅರ್ಜಿ ಹಾಕಿದ ದೇವದಾಸಿ ಮಕ್ಕಳಿಗೆ ಒಂದು ವರ್ಷದಲ್ಲಿ ಹಣ ಬಿಡುಗಡೆ ಮಾಡಬೇಕು. ಎಲ್ಲಾ ದೇವದಾಸಿ ಮಹಿಳೆಯರಿಗೆ ಒಂದು ಬಾರಿ ದೇವದಾಸಿ ದೃಢೀಕರಣ ಪತ್ರವನ್ನು ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಪ್ರತಿಭಟನೆಯಲ್ಲಿ ಹೆಚ್. ದುರುಗಮ್ಮ, ಭಾರತಿ, ಲಕ್ಷ್ಮೀದೇವಿ, ದೊಡ್ಡ ಹುಲಿಗೆಮ್ಮ, ಶಿಲ್ಪ ರುದ್ರಮ್ಮ, ಶೇಖಮ್ಮ, ರಂಗಮ್ಮ, ಗಂಗಮ್ಮ, ಕಾಡಮ್ಮ, ಗೋವಿಂದಮ್ಮ, ರೇಣುಕಮ್ಮ, ದುರುಗಮ್ಮ, ಹಂಪಮ್ಮ, ಪಾರ್ವತಿ ಮತ್ತು ಮಾರೆಮ್ಮ ಅವರು ಪಾಲ್ಗೊಂಡಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande