(ಪೋಟೋ ಪರಿಷ್ಕೃತ) ಮಠಾಧೀಶರರ ಆಶೀರ್ವಾದ, 105 ಟ್ರ್ಯಾಕ್ಟರ್, 2 ಜೆಸಿಬಿಗಳಿಂದ ತುಂಗಭದ್ರ ಹಿನ್ನೀರಲ್ಲಿ `ಹೂಳಿನ ಜಾತ್ರೆ'
ಬಳ್ಳಾರಿ, 02 ಜೂನ್ (ಹಿ.ಸ.) : ಆ್ಯಂಕರ್ : ತುಂಗಭದ್ರ ಜಲಾಯಶದಲ್ಲಿ ಸಂಗ್ರಹವಾಗಿರುವ 35 ಟಿಎಂಸಿಗೂ ಹೆಚ್ಚಿನ ಪ್ರಮಾಣದ ಹೂಳನ್ನು ತೆಗೆದು ಕರ್ನಾಟಕ ಸರ್ಕಾರದ ಗಮನ ಸೆಳೆಯಲಿಕ್ಕಾಗಿ ತುಂಗಭದ್ರ ರೈತ ಸಂಘದ ನೇತೃತ್ವದಲ್ಲಿ ವಿವಿಧ ಮಠಾಧೀಶ್ವರರ ಆಶೀರ್ವಾದಗಳೊಂದಿಗೆ `ತುಂಗಭದ್ರ ಹೂಳೆತ್ತುವ ಜಾತ್ರೆ''ಯು ಮಂಗ
ಹೂಳೆತ್ತುವ ಕಾರ್ಯ


ಬಳ್ಳಾರಿ, 02 ಜೂನ್ (ಹಿ.ಸ.) :

ಆ್ಯಂಕರ್ : ತುಂಗಭದ್ರ ಜಲಾಯಶದಲ್ಲಿ ಸಂಗ್ರಹವಾಗಿರುವ 35 ಟಿಎಂಸಿಗೂ ಹೆಚ್ಚಿನ ಪ್ರಮಾಣದ ಹೂಳನ್ನು ತೆಗೆದು ಕರ್ನಾಟಕ ಸರ್ಕಾರದ ಗಮನ ಸೆಳೆಯಲಿಕ್ಕಾಗಿ ತುಂಗಭದ್ರ ರೈತ ಸಂಘದ ನೇತೃತ್ವದಲ್ಲಿ ವಿವಿಧ ಮಠಾಧೀಶ್ವರರ ಆಶೀರ್ವಾದಗಳೊಂದಿಗೆ `ತುಂಗಭದ್ರ ಹೂಳೆತ್ತುವ ಜಾತ್ರೆ'ಯು ಮಂಗಳವಾರ ನಡೆಯಿತು.

ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು, ನಿರಂಜನ ಪ್ರಭುದೇವ ಮಹಾಸ್ವಾಮಿಗಳು, ನಾಗನಾಥ ಮಹಾಸ್ವಾಮಿಗಳು ಹಾಗೂ ವಿವಿಧ ಮಠಾಧೀಶ್ವರರರು ಗಂಗಾಪೂಜೆಯನ್ನು ನೆರವೇರಿಸಿ `ಹೂಳಿನ ಜಾತ್ರೆ'ಗೆ ಚಾಲನೆ ನೀಡಿ, ಶುಭ ಹಾರೈಸಿದ್ದಾರೆ.

ತುಂಗಭದ್ರ ರೈತ ಸಂಘದ ರಾಜ್ಯಾಧ್ಯಕ್ಷ ಡಾ. ಪುರುಷೋತ್ತಮಗೌಡ ದರೂರು ಅವರು, ಜಲಾಶಯದಲ್ಲಿ 35 ಟಿಎಂಸಿ ಪ್ರಮಾಣದ ಹೂಳು ಸಂಗ್ರಹವಾಗಿದೆ. ಹೂಳಿನ ಪ್ರಮಾಣದಷ್ಟೇ ನೀರು ಸಂಗ್ರಹದಲ್ಲಿ ಕೊರತೆ ಉಂಟಾಗಲಿದೆ. ವಿಜಯನಗರ, ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳು ಸೇರಿ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ರೈತರಿಗೆ ನೀರಿನ ತೀವ್ರ ಕೊರತೆ ಉಂಟಾಗುತ್ತಿದೆ. ಅದರಲ್ಲೂ ನಮ್ಮ ರಾಜ್ಯದ ರೈತರು ತೀವ್ರ ಆತಂಕದಲ್ಲಿದ್ದಾರೆ ಎಂದರು.

`ಹೂಳಿನ ಜಾತ್ರೆ'ಯಲ್ಲಿ ಪಾಲ್ಗೊಂಡಿದ್ದ ರೈತರು ಮತ್ತು ಟ್ರ್ಯಾಕ್ಟರ್ಗಳವರಿಗೆ, ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಕೃತಜ್ಞತೆಗಳನ್ನು ಸಲ್ಲಿಸಿದ ಡಾ. ದರೂರು ಪುರುಷೋತ್ತಮಗೌಡ ಅವರು, ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ತುಂಗಭದ್ರ ಜಲಾಶಯದಲ್ಲಿ ಸಂಗ್ರಹವಾಗಿರುವ ಹೂಳನ್ನು ತೆಗೆಯಲು ಯೋಜನೆ ರೂಪಿಸಬೇಕು. ಇಲ್ಲವಾದಲ್ಲಿ ರೈತರು ತೀವ್ರವಾದ ಪ್ರತಿಭಟನೆ ನಡೆಸಲಿದ್ದಾರೆ ಎಂದರು.

`

ಹೂಳಿನ ಜಾತ್ರೆ'ಯ ಕುರಿತು ಡಾ. ಪುರುಷೋತ್ತಮಗೌಡ ದರೂರು, ಮೊಬೈಲ್ :99457 73393 ಗೆ ಕರೆ ಮಾಡಿ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande