ಕಲಾವಿದರ ಸಂಕಷ್ಟಗಳಿಗೆ ನೆರವಾಗೋಣ : ಕಲ್ಯಾಣ ಶ್ರೀಗಳು
ಬಳ್ಳಾರಿ, 19 ಜೂನ್ (ಹಿ.ಸ.) : ಆ್ಯಂಕರ್ : ಕಲಾವಿದರ ಸಂಕಷ್ಟಗಳಿಗೆ ಕಲಾಪೋಷಕರು ಮತ್ತು ಸಮಾಜದಲ್ಲಿರುವ ಪ್ರತಿಯೊಬ್ಬರೂ ಸ್ಪಂದಿಸಬೇಕು ಎಂದು ಕಲ್ಯಾಣ ಸ್ವಾಮಿ ಮಠದ ಶ್ರೀಗಳು ತಿಳಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಬಳ್ಳಾರಿ ಜಿಲ್ಲಾ ಘಟಕ ಹಾಗೂ ಬಳ್ಳಾರಿ ಜಿಲ್ಲಾ ಚಿತ್ರ ಕಲಾವಿದರ ಸಂಘ ಕನ್ನಡ ಭವ
ಕಲಾವಿದರ ಸಂಕಷ್ಟಗಳಿಗೆ ನೆರವಾಗೋಣ : ಕಲ್ಯಾಣ ಶ್ರೀಗಳು


ಕಲಾವಿದರ ಸಂಕಷ್ಟಗಳಿಗೆ ನೆರವಾಗೋಣ : ಕಲ್ಯಾಣ ಶ್ರೀಗಳು


ಕಲಾವಿದರ ಸಂಕಷ್ಟಗಳಿಗೆ ನೆರವಾಗೋಣ : ಕಲ್ಯಾಣ ಶ್ರೀಗಳು


ಬಳ್ಳಾರಿ, 19 ಜೂನ್ (ಹಿ.ಸ.) :

ಆ್ಯಂಕರ್ : ಕಲಾವಿದರ ಸಂಕಷ್ಟಗಳಿಗೆ ಕಲಾಪೋಷಕರು ಮತ್ತು ಸಮಾಜದಲ್ಲಿರುವ ಪ್ರತಿಯೊಬ್ಬರೂ ಸ್ಪಂದಿಸಬೇಕು ಎಂದು ಕಲ್ಯಾಣ ಸ್ವಾಮಿ ಮಠದ ಶ್ರೀಗಳು ತಿಳಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಬಳ್ಳಾರಿ ಜಿಲ್ಲಾ ಘಟಕ ಹಾಗೂ ಬಳ್ಳಾರಿ ಜಿಲ್ಲಾ ಚಿತ್ರ ಕಲಾವಿದರ ಸಂಘ ಕನ್ನಡ ಭವನದಲ್ಲಿ ಏರ್ಪಡಿಸಿದ್ದ `ಕಲಾವಿದ ದಿ. ಮಂಜುನಾಥ ಗೋವಿಂದವಾಡ ಅವರ 'ನುಡಿ ನಮನ'ದಲ್ಲಿ ಅವರು ಮಾತನಾಡಿದರು.

ಕಲಾವಿದರು ಕಲೆಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಕಲಾಪೋಷಕರೇ ಅವರ ಜೀವನದ ಮೂಲ. ಈ ನಿಟ್ಟಿನಲ್ಲಿ ಕಲಾವಿದ ಮಂಜುನಾಥ ಗೋವಿಂದವಾಡ ಅವರ ಸರಳತೆ, ಮುಗ್ದತೆ, ನೋವನ್ನು ನುಂಗಿ ನಗುವನ್ನೇ ನಂಬಿಕೊಂಡಿದ್ದರು. ಮಂಜುನಾಥ ಅವರ ಅಕಾಲಿಕ ನಿಧನದಿಂದಾಗಿ ಅವರ ಕುಟುಂಬ ತೀವ್ರ ಆಘಾತಕ್ಕೆ ಒಳಗಾಗಿದೆ. ಆರ್ಥಿಕವಾಗಿ ನಾವೆಲ್ಲರೂ ನೆರವಾಗಬೇಕಿದೆ ಎಂದರು.

ಕನ್ನಡ ಸಂಸ್ಕೃತಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕರಾದ ಚೋರನೂರು ಟಿ. ಕೊಟ್ರಪ್ಪ ಅವರು, ಮಂಜುನಾಥ್ ಅವರ ಅಲಿಕೆಯು ಕಲಾ ಪ್ರಪಂಚಕ್ಕೇ ದೊಡ್ಡ ನಷ್ಟವನ್ನುಂಟು ಮಾಡಿದೆ. ಮಂಜುನಾಥ ಅವರ ಕೈಚಳಕದಲ್ಲಿದ್ದ ನೈಪುಣ್ಯತೆ, ಸಮಯ ಪ್ರಜ್ಞೆ, ಪರಿಕಲ್ಪನೆಗಳು, ಚಾಕಚಕ್ಯತೆ, ತಾಳ್ಮೆ, ಪ್ರತಿಯೊಂದು ಆದರ್ಶನೀಯವಾಗಿದ್ದವು. ಇಂದು ನಾವೆಲ್ಲರೂ ಅವರ ಕುಟುಂಬಕ್ಕೆ ನೆರವಾಗಬೇಕು. ಅವರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ಪತ್ರಕರ್ತ ಎಂ. ಅಹಿರಾಜ್ ಅವರು, ಕಲಾವಿದ ಮಂಜುನಾಥ ಗೋವಿಂದವಾಡ ಅವರ ಮುಗ್ಧ ಹಾಗೂ ಹಾಸ್ಯ ಪ್ರಜ್ಞೆಯ ಸ್ವಭಾವವನ್ನು ಸ್ಮರಿಸಿದರು.

ಮಂಜುನಾಥ್ ಅವರ ಸಂಬಂಧಿ ಎಸ್.ಎಂ. ಷಡಕ್ಷರಯ್ಯ ಅವರು, ಮಂಜುನಾಥ್ ಅವರ ಬಾಲ್ಯದ ಜೀವನ ಹಾಗೂ ಅವರ ಕಲಾ ಜೀವನದ ವಿವಿಧ ಘಟ್ಟಗಳನ್ನು ಸ್ಮರಿಸಿರು.

ಪತ್ರಕರ್ತರಾದ ಕೆ.ಎಂ. ಮಂಜುನಾಥ, ಎನ್. ವೀರಭದ್ರಗೌಡ, ಸನ್ಮಾರ್ಗ ಗೆಳೆಯರ ಬಳಗದ ಕಪ್ಪಗಲ್ಲು ಬಿ. ಚಂದ್ರಶೇಖರ ಆಚಾರ್,

ಡಾ. ತಿಪ್ಪೇರುದ್ರ ಸಂಡೂರು, ಶ್ರೀಮತಿ ಎನ್.ಡಿ. ವೆಂಕಮ್ಮ, ಶ್ರೀಮತಿ ಸುಶೀಲಾ ಶಿರೂರ, ಶ್ರೀಮತಿ ಸುರೇಖಾ ಮಲ್ಲನಗೌಡ, ಕು. ವಸುಧಾ, ಡಾ. ಯು. ಶ್ರೀನಿವಾಸಮೂರ್ತಿ, ಬಂಡ್ರಾಳು ಮೃತ್ಯುಂಜಯ ಸ್ವಾಮಿ, ಡಾ. ಎಸ್. ಮಂಜುನಾಥ, ಅಮಾತಿ ಬಸವರಾಜ, ಅಲ್ಲಂ ಸುಮಂಗಳಮ್ಮ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗೋವಿಂದರಾಜು, ಎ. ಎರಿಸ್ವಾಮಿ, ಎಸ್.ಎಂ. ಸಿದ್ದೇಶ್ವರ ಇನ್ನಿತರರು ಕಲಾವಿದ ಮಂಜುನಾಥ್ ಗೋವಿಂದವಾಡ ಅವರಿಗೆ ನುಡಿ ನಮನಗಳನ್ನು ಸಲ್ಲಿಸಿ, ನಾವೆಲ್ಲರೂ ಅವರ ಕುಟುಂಬಕ್ಕೆ ಆಸರೆ ಆಗಬೇಕು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ ನಾಗರಾಜ್, ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಜಾನಪದ ಗಾಯಕ ಎಲ್ಲನಗೌಡ ಶಂಕರಬಂಡೆ, ಕಸಾಪ ಜಿಲ್ಲಾಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ, ಕೆ.ವಿ. ನಾಗರೆಡ್ಡಿ, ಶಸಾಪ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ, ರಂಗ ತೋರಣದ ಪ್ರಭುದೇವ ಕಪ್ಪಗಲ್ಲು, ಅಲಾಪ್ ಸಂಗೀತ ಕಲಾ ಟ್ರಸ್ಟ್ ಅಧ್ಯಕ್ಷ ಬಿ. ರಮಣಪ್ಪ, ಕತೆಗಾರ ವೀರೇಂದ್ರ ರಾವಿಹಾಳ, ಸಾಹಿತಿಗಳಾದ ಅಬ್ದುಲ್ ಹೈ ತೋರಣಗಲ್ಲು, ದಸ್ತಗಿರಿ ಸಾಬ್ ದಿನ್ನಿ, ಚಾಂದ್ ಪಾಷಾ, ಜೆ. ಹುಸೇನ್ ಭಾಷಾ, ಡಾ. ಅಣ್ಣಾಜಿ ಕೃಷ್ಣಾರೆಡ್ಡಿ, ವಿಷ್ಣು ಹಡಪದ, ಉಪನ್ಯಾಸಕ ಹಾಗೂ ರಂಗ ಕಲಾವಿದ ಕಾಸಿಂ ಸಾಬ್, ನಿವೃತ್ತ ಪೆÇಲೀಸ್ ಅಧಿಕಾರಿ ಹುಸೇನ್ ಸಾಬ್, ತೆಂಗಿನಕಾಯಿ ಮಲ್ಲಿಕಾರ್ಜುನ, ಬಿ. ಹನುಮಂತರಾವ್ ಛಾಯಾಗ್ರಹಕರಾದ ಬಿ.ಎಂ. ರುದ್ರಮುನಿ ಸ್ವಾಮಿ, ಬಸವರಾಜ ಬಿಸಲಹಳ್ಳಿ ಮತ್ತಿತರರು, ಮಂಜುನಾಥ್ ಗೋವಿಂದವಾಡ ಅವರ ಕುಟುಂಬಕ್ಕೆ ನಾವೆಲ್ಲರೂ ಆಸರೆ ಆಗುವ ಮೂಲಕ ಅವರ ಕಲೆ, ಅವರಲ್ಲಿದ್ದ ಕಲಾವಿದನನ್ನು ಸ್ಮರಿಸೋಣ ಎಂದರು.

ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಡಾ. ಕೆ. ಶಿವಲಿಂಗಪ್ಪ ಹಂದಿಹಾಳು ಅವರು ಕಾರ್ಯಕ್ರಮ ನಿರೂಪಿಸಿದರು. ಶಿವಾನಂದ ಪಿ ಹೊಂಬಳ ಅವರು ಪ್ರಾರ್ಥನೆ ಸಲ್ಲಿಸಿದರು. ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಕಾರ್ಯದರ್ಶಿ ತಿಪ್ಪೇಸ್ವಾಮಿ ಅವರು ವಂದನಾರ್ಪಣೆ ಸಲ್ಲಿಸಿದರು.

ಆಸಕ್ತ ಕಲಾಪೋಷಕರು ಮತ್ತು ದಾನಿಗಳು ಈ ಸಂಖ್ಯೆಗೆ ಕರೆ ಮಾಡಿ ನೆರವಾಗಿ : 8217076696.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande