232ನೇ ದಿನದಲ್ಲಿ ಬಲ್ಡೋಟ ತೊಲಗಿಸಿ ಕೊಪ್ಪಳ ಉಳಿಸಿ ಧರಣಿ
ಕೊಪ್ಪಳ, 19 ಜೂನ್ (ಹಿ.ಸ.) : ಆ್ಯಂಕರ್ : ನಗರಸಭೆ ವಾಣಿಜ್ಯ ಸಂಕೀರ್ಣ ಮುಂದೆ ಬಲ್ಡೋಟ ಹಟಾವೋ ಕೊಪ್ಪಳ ಬಚಾವೋ ಹಾಗೂ ತುಂಗಭದ್ರಾ ತಟದ ಸ್ಪಾಂಜ್ ಐರನ್ ಕಬ್ಬಿಣ, ಪೆಲ್ಲೆಟೈಜೇಶನ್ ಕಬ್ಬಿಣ, ಕೆಮಿಕಲ್ ಗೊಬ್ಬರ, ಕ್ರಿಮಿನಾಶಕ, ಸಿಮೆಂಟ್, ಉಕ್ಕು, ಕ್ಯಾಷ್ಟಿಂಗ್ಸ್, ಉಕ್ಕು, ಸುಣ್ಣ, ಕಲ್ಲಿದ್ದಲು ಸುಟ್ಟು ವಿ
ಬಲ್ಡೋಟ ತೊಲಗಿಸಿ ಕೊಪ್ಪಳ ಉಳಿಸಿ! 232ನೇ ದಿನದಲ್ಲಿ ಮುಂದುವರಿದ ಧರಣಿ


ಬಲ್ಡೋಟ ತೊಲಗಿಸಿ ಕೊಪ್ಪಳ ಉಳಿಸಿ! 232ನೇ ದಿನದಲ್ಲಿ ಮುಂದುವರಿದ ಧರಣಿ


ಕೊಪ್ಪಳ, 19 ಜೂನ್ (ಹಿ.ಸ.) :

ಆ್ಯಂಕರ್ : ನಗರಸಭೆ ವಾಣಿಜ್ಯ ಸಂಕೀರ್ಣ ಮುಂದೆ ಬಲ್ಡೋಟ ಹಟಾವೋ ಕೊಪ್ಪಳ ಬಚಾವೋ ಹಾಗೂ ತುಂಗಭದ್ರಾ ತಟದ ಸ್ಪಾಂಜ್ ಐರನ್ ಕಬ್ಬಿಣ, ಪೆಲ್ಲೆಟೈಜೇಶನ್ ಕಬ್ಬಿಣ, ಕೆಮಿಕಲ್ ಗೊಬ್ಬರ, ಕ್ರಿಮಿನಾಶಕ, ಸಿಮೆಂಟ್, ಉಕ್ಕು, ಕ್ಯಾಷ್ಟಿಂಗ್ಸ್, ಉಕ್ಕು, ಸುಣ್ಣ, ಕಲ್ಲಿದ್ದಲು ಸುಟ್ಟು ವಿದ್ಯುತ್, ದೊಡ್ಲ ಹಾಲು ಘಟಕ ಮುಂತಾದ 28 ಮಾಲಿನ್ಯಕಾರಿ ಕಾರ್ಖಾನೆಗಳನ್ನು ವಿರೋಧಿಸಿ 232ನೇ ದಿನದ ಧರಣಿ ಪೂರ್ಣಗೊಂಡಿತು.

ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನೇತೃತ್ವದಲ್ಲಿ ಬಲ್ಡೋಟ ಬಿ.ಎಸ್.ಪಿ.ಎಲ್. ಕಂಪನಿಯ ಬೃಹತ್ ಹೂಡಿಕೆ ವಿರೋಧಿಸಿ, ಗಿಣಿಗೇರಿ, ಅಲ್ಲಾನರ, ಹಿರೇಬಗನಾಳ, ಕಾಸನಕಂಡಿ, ಕುಣಿಕೇರಿ, ಕುಣಿಕೇರಿ ತಾಂಡ, ಹಾಲವರ್ತಿ, ಬಸಾಪುರ, ಕನಕಾಪುರ, ಬೇವಿನಹಳ್ಳಿ ಮುಂತಾದ 22 ಹಳ್ಳಿಗಳನ್ನು ಸುತ್ತುವರಿದ 28 ಬೃಹತ್, ನೋಂದಣಿ ದಾಖಲೆಯಂತೆ 202 ಮಾಲಿನ್ಯಕಾರಿ ಘಟಕಗಳನ್ನು ಗ್ರಾಮಸ್ಥರ ಆರೋಗ್ಯ, ಜೀವ ಉಳಿಸಲು ಶಾಶ್ವತವಾಗಿ ಬಂದ್ ಮಾಡಬೇಕು. ಬಲ್ಡೋಟ ಅಕ್ರಮವಾಗಿ ವಶಪಡಿಸಿಕೊಂಡ ಬಸಾಪುರ ಕೆರೆಯನ್ನು ಹೈಕೋರ್ಟ್ ಆದೇಶದಂತೆ ಜನ, ಜಾನುವಾರು ನೀರು ಕುಡಿಯಲು ಕಂಪನಿಯವರು ಹಾಕಿದ ಕಾಂಪೌಂಡ್ ತೆರವುಗೊಳಿಸಬೇಕು.

ನಗರದ ಗವಿಮಠ ಮುಂತಾದ ಏರಿಯಾಗಳಲ್ಲಿ 2011ರಿಂದ ಬಲ್ಡೋಟ ಎಂಎಸ್ಪಿಎಲ್ ಪೆಲ್ಲೆಟೈಜೇಶನ್ ಕಬ್ಬಿಣ ಘಟಕ ಹೊರಸೂಸುವ ಕಂದು ಧೂಳು ನಗರ ಜನರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತಿದ್ದು ಈ ಘಟಕ ಬಂದ್ ಮಾಡಿ ಜನರ ಆರೋಗ್ಯ ಕಾಪಾಡಬೇಕು. ತುಂಗಭದ್ರಾ ನದಿ ನೀರು ಮಲಿನಗೊಳಿಸುತ್ತಿರುವ ಮಾಲಿನ್ಯಕಾರಿ ಘಟಕಗಳು ಬಂದಾಗಬೇಕು. ಹಿರೇಬಗನಾಳ, ಅಲ್ಲಾನಗರ ಪಕ್ಕದ ಸ್ಪಾಂಜ್ ಐರನ್ ಕಾರ್ಖಾನೆಗಳನ್ನು ಕೇಂದ್ರ ಪರಿಸರ ಇಲಾಖೆ ವರದಿಯ ಶಿಫಾರಸಿನಂತೆ ನಿರ್ಜನ ಪ್ರದೇಶಕ್ಕೆ ಸ್ಥಳಾಂತರಿಸಬೇಕು.

ಕಾರ್ಖಾನೆ ಧೂಳು ಬಾಧಿತ 22 ಹಳ್ಳಿಗಳ ಪುನರುಜ್ಜೀವನ ಮಾಡಲು ವಿಶೇಷ ಪ್ಯಾಕೇಜ್ ಘೋಷಿಸಬೇಕು. ಎ.ಐ.ಐ.ಎಂ.ಎಸ್ ಸಂಸ್ಥೆ ಮತ್ತು ಐ.ಐ.ಎಸ್.ಸಿ ಸಂಸ್ಥೆಯಿಂದ ಜನರ ಆರೋಗ್ಯ ಮತ್ತು ಪರಿಸರ ಹಾನಿಯ ಸಮೀಕ್ಷೆ ನಡೆಸಬೇಕೆಂದು ಸರ್ಕಾರವನ್ನು ಆಗ್ರಹಿಸಿ ಧರಣಿಗೆ 33ನೇ ವಾರ್ಡ್ ಗಾಂಧಿನಗರದ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಬೆಂಬಲಿಸಿದರು.

ಮಹಿಳಾ ಮುಂದಾಳು ಸರೋಜಾ ಬಾಕಳೆ ಮಾತನಾಡಿ, ಭಾಗ್ಯನಗರ-ಕೊಪ್ಪಳ ಅವಳಿ ನಗರದ ಪ್ರತಿಯೊಂದು ವಾರ್ಡ್, ಏರಿಯಾಗಳ ಮಹಿಳೆಯರು ಹೀಗೆ ಬಂದು ಸಹಕಾರ ಮಾಡಿದರೆ ಕೊಪ್ಪಳ ಪರಿಸರ ಉಳಿಯುತ್ತದೆ. ಮುಂದಿನ ಪೀಳಿಗೆ ಶಪಿಸಬಾರದು ಎಂದರೆ ಮಹಿಳೆಯರು ಮುಂದೆ ಬಂದು ಹೋರಾಡಬೇಕು ಎಂದರು.

ಈ ಸಂದರ್ಭದಲ್ಲಿ ಪ್ರಕಾಶಕ ಡಿ.ಎಂ. ಬಡಿಗೇರ, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ನಿವೃತ್ತ ಉಪನ್ಯಾಸಕ ಶಂಭುಲಿಂಗಪ್ಪ ಹರಗೇರಿ, ನಿವೃತ್ತ ಅಂಚೆ ಅಧಿಕಾರಿ ರವಿ ಕಾಂತನವರ, ರಾಜಶೇಖರ ಏಳುಭಾವಿ, ಮಹಾದೇವಪ್ಪ ಮಾವಿನಮಡು, ಮೂಕಪ್ಪ ಮೇಸ್ತ್ರಿ ಬಸಾಪುರ, ಕಾಶಪ್ಪ ಚಲುವಾದಿ, ಮಂಜುನಾಥ ಕವಲೂರು, ದುರುಗಪ್ಪ ಕನಕಮನಿ, ಈರಪ್ಪ ನರಸಲ್ ಸಿದ್ದೇಶ್ವರನಗರ, ಸಂಗಮ್ಮ ರ್ಯಾವಣಕಿ, ರಾಮಮ್ಮ ಸಿರವಾರ, ಮಖಬೂಲ್ ರಾಯಚೂರು, ಶಿವಪ್ಪ ಜಲ್ಲಿ, ಸುಂಕಮ್ಮ ಪಡಚಿಂತಿ, ರಣದಪ್ಪ ಕವಲೂರು, ರೇಣುಕಾ ಜಕ್ಕಲಿ, ದುರುಗಮ್ಮ ಕುರುಗೋಡು, ಭೀಮಪ್ಪ ಯಲಬುರ್ಗಾ, ಸಂಜೀವಪ್ಪ ದೊಡ್ಡಮನಿ, ಕನಕಪ್ಪ ಹಲಗೇರಿ, ಸುನಿತಾ ಸಿಗ್ಗಾಂವಿ, ಶಾಂತಮ್ಮ ಪೂಜಾರ, ಮೇರಿ ಗುಡೆಕಲ್, ಶಿವರಾಜ, ರಾಜೆಶ್ವರಿ ಸಿರಾಳಕೊಪ್ಪ, ದೇವಿ ಶ್ರೀರಾಮ್ ಅನೇಕ ಮಹಿಳೆಯರು ಪಾಲ್ಗೊಂಡರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande