ಕೆಜಿಎಫ್ ಪೊಲೀಸರಿಂದ ಇಬ್ಬರು ಗಾಂಜಾ ಮಾರಾಟಗಾರರ ಬಂಧನ
ಕೆಜಿಎಫ್ ಪೊಲೀಸರಿಂದ ಇಬ್ಬರು ಗಾಂಜಾ ಮಾರಾಟಗಾರರ ಬಂಧನ
ಕೆಜಿಎಫ್ ರಾಬರ್ಟ್ಸನ್ಪೇಟೆ ಪೊಲೀಸರು ಗಾಂಜಾ ವಶಪಡಿಸಿಕೊಂಡಿದ್ದಾರೆ.


ಕೋಲಾರ, ೦೪ ಮೇ (ಹಿ.ಸ) :

ಆ್ಯಂಕರ್ : ಕೆಜಿಎಫ್ ಪೊಲೀಸ್ ಜಿಲ್ಲೆಯ ರಾಬರ್ಟ್ಸನ್ಪೇಟೆ ಪೊಲೀಸರು ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬAಧಿಸಿದAತೆ ಇಬ್ಬರು ಆರೋಪಿಗಳನ್ನು ಬಂಧಿಸಿ, ರೂ. ೧೨೦೦೦/- ಮೌಲ್ಯದ ೧೪೪ ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ರಾಬರ್ಟ್ಸನ್ಪೇಟೆ ಸರಹದ್ದಿನ ಉರಿಗಾಂಪೇಟೆಯ ಹೊರವಲಯದ ಯರನಾಗನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಬಂದAತಹ ಖಚಿತ ಮಾಹಿತಿಯನ್ನು ಆಧರಿಸಿ, ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಮಹೇಶ್ ಮಾಳಿ, ಮತ್ತು ಸಿಬ್ಬಂದಿಗಳು ಕೂಡಲೆ ದಾಳಿ ನಡೆಸಿ, ಆರೋಪಿ-೧ ಗಗನ್ ಬಿನ್ ಮುನಿರಾಜು ವಯಸ್ಸು ೨೧ ವರ್ಷ. ಚಿಕ್ಕತಿರುಪತಿ ಗ್ರಾಮ. ಮಾಲೂರು ತಾಲ್ಲೂಕು ಕೋಲಾರ ಜಿಲ್ಲೆ. ಮತ್ತು ಆರೋಪಿ-೨ ಅಜಯ್ ಬಿನ್ ಕುಮರೇಶ್ ವಯಸ್ಸು ೨೩ ವರ್ಷ. ೩ನೇ ಕ್ರಾಸ್. ನ್ಯೂ ಪಟೇಲ್ ಸ್ಟಿçÃಟ್. ಉರಿಗಾಂಪೇಟೆ. ರವರನ್ನು ಬಂಧಿಸಿ, ಅವರಿಂದ ರೂ.೧೨೦೦೦/- ಮೌಲ್ಯದ ೧೪೪ ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ.

ಡಿವೈಎಸ್ಪಿ ವಿ.ಲಕ್ಷö್ಮಯ್ಯ ಮತ್ತು ರಾಬರ್ಟ್ಸನ್ಪೇಟೆ ವೃತ್ತದ ಪ್ರಭಾರ ನಿರೀಕ್ಷಕರಾದ ಲಕ್ಷಿ÷್ಮನಾರಾಯಣ ರವರ ಮಾರ್ಗದರ್ಶನದಲ್ಲಿ ಆರೋಪಿಗಳನ್ನು ಬಂಧಿಸಿ, ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಮಹೇಶ್ ಮಾಳಿ, ಸಿಬ್ಬಂದಿಗಳಾದ ಪ್ರಕಾಶ್, ಗೋಪಿನಾಥ್, ಬಾಬು, ಬಸವರಾಜ್ ಕಾಂಬಳೆ, ಪವನ್ ಕುಮಾರ್ ಮತ್ತು ಚಾಲಕರಾದ ತಿಪ್ಪೇಸ್ವಾಮಿ ರವರುಗಳನ್ನೊಳಗೊಂಡ ತಂಡವು ಯಶಸ್ವಿಯಾಗಿದ್ದು, ತಂಡವನ್ನು ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ರವರು ಶ್ಲಾಘಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande