ಪತ್ನಿಯನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾದ ಆರೋಪಿ
ಪತ್ನಿಯನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾದ ಆರೋಪ
ಕೊಲೆ ಆರೋಪಿ ಗೋಪಿನಾಥ್ ಮತ್ತು ಮೃತ ಈಶ್ವರಮ್ಮ


ಕೋಲಾರ,೨೩ ಏಪ್ರಿಲ್ (ಹಿ.ಸ) :

ಆ್ಯಂಕರ್ : ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ಉರಿಗಾಂ ಪೊಲೀಸ್ ಠಾಣಾ ವ್ಯಾಪ್ತಿ ಐ.ಆರ್.ಬಿ ಸ್ಥಳದಲ್ಲಿ ನೆನ್ನೆಯ ದಿನ ರಾತ್ರಿ ಸಮಯದಲ್ಲಿ ಗೋಪಿನಾಥ್ ಎಂಬಾತನು ತನ್ನ ಪತ್ನಿಯಾದ ಈಶ್ವರಮ್ಮ ಎಂಬಾಕೆಯನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ

ಮೃತಳ ಅಣ್ಣ ಅಶ್ವತ್ಥ್ ನಾರಾಯಣ ರವರು ಉರಿಗಾಂ ಪೊಲೀಸ್ ಠಾಣೆಯಲ್ಲಿ ತನ್ನ ತಂಗಿ ಈಶ್ವರಮ್ಮ (೪೬ ವರ್ಷ) ರವರ ಗಂಡ ಗೋಪಿನಾಥ್ ಎಂಬಾತನು ಹೆಂಡತಿಯನ್ನು ಅನುಮಾನಪಡುತ್ತಿದ್ದು, ಉರಿಗಾಂ ನಿಂದ ದೊಡ್ಡವಲಗಮಾದಿ ಗ್ರಾಮಕ್ಕೆ ಹೋಗುವ ರಸ್ತೆಯ ಬಳಿ ಐ,ಆರ್.ಬಿ ಸ್ಥಳದಲ್ಲಿ ಹರಿತವಾದ ಆಯುಧದಿಂದ ಕೊಲೆ ಮಾಡಿರುವುದಾಗಿ ಉರಿಗಾಂ ಪೊಲೀಸರಿಗೆ ದೂರು ನೀಡಿದ್ದ.

ಆರೋಪಿ ಗೋಪಿನಾಥ್ ವೃತ್ತಿಯಲ್ಲಿ ಟೈಲರ್ ಆಗಿದ್ದು, ಆಂದ್ರ ಪ್ರದೇಶದ ಕುಪ್ಪಂ ತಾಲ್ಲೂಕಿನ ರಾಳ್ಳಬೂದಗೂರು ಪೊಲೀಸ್ ಠಾಣೆಯಲ್ಲಿ ಶರಣಾಗತಿಯಾಗಿದ್ದು, ಆರೋಪಿಯನ್ನು ಆಂಡ್ರಸನ್ಪೇಟೆ ಪೊಲೀಸ್ ಠಾಣೆಯ ಪಿ.ಎಸ್.ಐ ಮಂಜುನಾಥ, ಬಿ ವಶಕ್ಕೆ ಪಡೆದು ಕರೆತಂದಿದ್ದಾರೆ. ಆರೋಪಿಯಿಂದ ಒಂದು ದ್ವಿಚಕ್ರ ವಾಹನ ಹಾಗೂ ಹರಿತವಾದ ಆಯುಧವನ್ನು ವಶಕ್ಕೆ ಪಡೆಯಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande