
ಧಾರವಾಡ, 28 ಮೇ (ಹಿ.ಸ.) :
ಆ್ಯಂಕರ್ : ಹುಬ್ಬಳ್ಳಿ ಶಹರದ ವಿವಿಧ ಬಡಾವಣೆಗಳ ರಸ್ತೆ ಬದಿ ಹಾಗೂ ವಿವಿಧ ಕಚೇರಿ ಆವರಣದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ 113 ಮರಗಳು ಮತ್ತು 90 ಟೊಂಗೆಗಳನ್ನು ತೆರುವುಗೊಳಿಸಲು ಹುಬ್ಬಳ್ಳಿ ವಲಯ ಅರಣ್ಯ ಅಧಿಕಾರಿ ಕಛೇರಿಯಲ್ಲಿ ಜೂನ್ 04 ಮತ್ತು ಜೂನ್ 20, 2026 ರಂದು ಮಧ್ಯಾಹ್ನ 3 ಗಂಟೆಗೆ ಹಾಗೂ ಧಾರವಾಡ ಶಹರದ ವಿವಿಧ ಬಡಾವಣೆಗಳ ರಸ್ತೆ ಬದಿ ಹಾಗೂ ವಿವಿಧ ಕಚೇರಿ ಆವರಣದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ 29 ಮರಗಳು ಮತ್ತು 60 ಟೊಂಗೆಗಳನ್ನು ತೆರುವುಗೊಳಿಸಲು ಧಾರವಾಡ ವಲಯ ಅರಣ್ಯ ಅಧಿಕಾರಿ ಕಛೇರಿಯಲ್ಲಿ ಜೂನ್ 04, 2026 ರಂದು ಮಧ್ಯಾಹ್ನ 3 ಗಂಟೆಗೆ ಬಹಿರಂಗ ಹರಾಜು ಮಾಡಲಾಗುವುದು.
ಮರ ಸಂರಕ್ಷಣಾ ಕಾಯ್ದೆ 1976 ರ ಸೆಕ್ಷನ್ 8 (3) (ಗಿII) ರ ಸೆಕ್ಷನ್ಗಳಲ್ಲಿ ಅಗತ್ಯ ಪಡಿಸಿರುವಂತೆ ಈ ಬಗ್ಗೆ ತಕರಾರು ಸಲ್ಲಿಸ ಬಯಸುವವರು ತಮ್ಮ ತಕರಾರನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಧಾರವಾಡ ಉಪ ವಿಭಾಗ, ಧಾರವಾಡ ಹಾಗೂ ಧಾರವಾಡದ ಕೆ.ಸಿ.ಪಾರ್ಕ ಎದುರು ಅರಣ್ಯ ಸಂಕೀರ್ಣದಲ್ಲಿರುವ ಮರ ಅಧಿಕಾರಿಯವರಿಗೆ ಲಿಖಿತ ರೂಪದಲ್ಲಿ ಜೂನ್ 02, 2026 ರ ಒಳಗಾಗಿ ಸಲ್ಲಿಸಬಹುದಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.