ನಾನಾ ಸಹಾಯಧನ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ನಾನಾ
ನಾನಾ ಸಹಾಯಧನ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ


ಧಾರವಾಡ, 28 ಮೇ (ಹಿ.ಸ.) :

ಆ್ಯಂಕರ್ : 2026-27 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ವರ್ಗದ ರೈತರಿಂದ ಹೊಸ ಪ್ರದೇಶ ವಿಸ್ತರಣೆಯಡಿ (ಮಾವು, ಬಾಳೆ, ಪಪ್ಪಾಯ, ಕರಿಮೆಣಸು, ಹಾಗೂ ಗೊಡಂಬಿ), ಹೂ ಬೆಳೆ ಪ್ರದೇಶ ವಿಸ್ತರಣೆಯಡಿ (ಸುಗಂಧ ರಾಜ, ಸೆವಂತಿಗೆ, ಹಾಗೂ ಚೆಂಡೂ ಹೂ ಬೆಳೆಗೆ), ತರಕಾರಿ ಬೆಳೆಗಳ ಪ್ರದೇಶ ವಿಸ್ತರಣೆ, ಮಾವು ಪುನಶ್ಚೇತನ, ಟ್ರ್ಯಾಕ್ಟರ್ (20 ಪಿಟಿಓ, ಎಚ್ಪಿ), ವಯಕ್ತಿಕ ನೀರು ಸಂಗ್ರಹಣ ಘಟಕ, ಪ್ಲಾಸ್ಟಿಕ್ ಮಲ್ಚಿಂಗ್, ತಳ್ಳುವಗಾಡಿ ಮತ್ತು ಇತ್ಯಾದಿ ಘಟಕಗಳಿಗೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತಿಯುಳ್ಳ ರೈತರು ಜೂನ್ 10. 2026 ರೊಳಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ಕಲಘಟಗಿ ಕಛೇರಿಗೆ ಅರ್ಜಿಯನ್ನು ಸಲ್ಲಿಸಬೇಕು. ಮೊದಲು ಬಂದ ರೈತರಿಗೆ ಆದ್ಯತೆ ಮೇರೆಗೆ ಜೇಷ್ಟತೆ ಅನುಸಾರವಾಗಿ ಸಹಾಯಧನಕ್ಕೆ ಪರಿಗಣಿಸಲಾಗುವುದು. ರೈತರು ಸದರಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕೆಂದು ಕಲಘಟಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande