ಇಸ್ರೇಲ್ ದಾಳಿಗೆ ಲೆಬನಾನ್ ತತ್ತರ ; 34 ಮಂದಿ ಸಾವು
ಪ್ರದೇಶ. ಗ
Attack


ಬೇರೂತ್/ತೆಲ್ ಅವೀವ್, 27 ಮೇ (ಹಿ.ಸ.) :

ಆ್ಯಂಕರ್ : ಲೆಬನಾನ್ ನಲ್ಲಿ ನಡೆಯುತ್ತಿರುವ ಯುದ್ಧ ವಿರಾಮದ ನಡುವೆಯೇ ಇಸ್ರೇಲ್ ತನ್ನ ದಾಳಿ ತೀವ್ರಗೊಳಿಸಿದ್ದು, ದಕ್ಷಿಣ ಲೆಬನಾನ್ ನಲ್ಲಿ ನಡೆದ ವಾಯು ಹಾಗೂ ಭೂ ದಾಳಿಗಳಲ್ಲಿ ಕನಿಷ್ಠ 34 ಮಂದಿ ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇಸ್ರೇಲ್ ಸೇನೆಯ ನಿರಂತರ ದಾಳಿಯಿಂದ ದಕ್ಷಿಣ ಲೆಬನಾನ್ ಭಾಗದಲ್ಲಿ ಆತಂಕದ ವಾತಾವರಣ ಉಂಟಾಗಿದೆ.

ಲೆಬನಾನ್ ಮೂಲದ ‘ಲೋರಿಯೆಂಟ್ ಟುಡೇ’ ವರದಿ ಪ್ರಕಾರ, ಹಿಜ್ಬುಲ್ಲಾ ಪ್ರಭಾವ ಹೊಂದಿರುವ ದಕ್ಷಿಣ ಲೆಬನಾನ್ ಪ್ರದೇಶಗಳ ಮೇಲೆ ಇಸ್ರೇಲ್ ದಾಳಿ ಮತ್ತಷ್ಟು ಹೆಚ್ಚಾಗಿದೆ.

ಜನರು ಜೀವಭಯದಿಂದ ತಮ್ಮ ನಿವಾಸಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ. ಇಸ್ರೇಲ್ ಭೂಸೇನೆ ದಾಳಿ ನಡೆಸುತ್ತಲೇ ಹಲವು ಪ್ರದೇಶಗಳಲ್ಲಿ ಮುಂದಕ್ಕೆ ಸಾಗುತ್ತಿದೆ ಎಂದು ತಿಳಿದು ಬಂದಿದೆ.

ಇಸ್ರೇಲ್ ಡಿಫೆನ್ಸ್ ಫೋರ್ಸಸ್ (ಐಡಿಎಫ್) ಪೂರ್ವ ಲೆಬನಾನ್ ನ ಬೆಕಾ ಪ್ರದೇಶದಲ್ಲಿರುವ ಮಶಘಾರಾ ಹಾಗೂ ಅದರ ಸಮೀಪದ ಕಾರೌನ್ ಅಣೆಕಟ್ಟಿನ ಸುತ್ತಮುತ್ತಲಿನ ಪ್ರದೇಶಗಳ ಮೇಲೂ ದಾಳಿ ನಡೆಸಿದೆ. ಈ ಪ್ರದೇಶಗಳು ತಂತ್ರಜ್ಞಾನದ ದೃಷ್ಟಿಯಿಂದ ಮಹತ್ವದ್ದಾಗಿವೆ ಎಂದು ಹೇಳಲಾಗಿದೆ.

ಇದರ ಜೊತೆಗೆ ದಕ್ಷಿಣ ಲೆಬನಾನ್ ನ ಪ್ರಮುಖ ನಗರ ನಬಾತಿಯೆ ಪ್ರದೇಶವನ್ನು ಖಾಲಿ ಮಾಡುವಂತೆ ಐಡಿಎಫ್ ಸ್ಥಳೀಯರನ್ನು ಬಲವಂತವಾಗಿ ತೆರವುಗೊಳಿಸಲು ಆರಂಭಿಸಿದೆ.

ಉತ್ತರ ಇಸ್ರೇಲ್ ಪ್ರದೇಶಗಳ ಭದ್ರತೆಯನ್ನು ಖಚಿತಪಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತ್ಯಾನಾಹು ತಿಳಿಸಿದ್ದಾರೆ.

ಇದೀಗ ಗಡಿಯುದ್ದಕ್ಕೂ ಗುಂಡಿನ ದಾಳಿ ಹಾಗೂ ಕ್ಷಿಪಣಿ ದಾಳಿಗಳು ಮುಂದುವರಿದಿದ್ದು, ಯುದ್ಧ ವಿರಾಮದ ಭರವಸೆ ಸಂಪೂರ್ಣ ಕುಸಿದಂತಾಗಿದೆ. ಇಸ್ರೇಲ್ ಸೇನೆ ಮಾಹಿತಿ ಪ್ರಕಾರ, ಉತ್ತರ ಇಸ್ರೇಲ್ ನ ಹಲವು ಪ್ರದೇಶಗಳಲ್ಲಿ ಹಿಜ್ಬುಲ್ಲಾ ದಾಳಿಯ ಎಚ್ಚರಿಕೆಯ ಹಿನ್ನೆಲೆಯಲ್ಲಿ ಸೈರನ್ ಗಳು ಮೊಳಗುತ್ತಿವೆ.

ಇದೇ ವೇಳೆ ಹಿಜ್ಬುಲ್ಲಾ ಸಂಘಟನೆ ದಕ್ಷಿಣ ಲೆಬನಾನ್ ಹಾಗೂ ಉತ್ತರ ಇಸ್ರೇಲ್ ನ ಇಸ್ರೇಲಿ ಸೇನಾ ನೆಲೆಗಳ ಮೇಲೆ 22 ದಾಳಿಗಳನ್ನು ನಡೆಸಿರುವುದಾಗಿ ಹೊಣೆ ಹೊತ್ತಿದೆ.

ಲೆಬನಾನ್ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಸೋಮವಾರ ಸಂಜೆ ಬೆಕಾ ಕಣಿವೆಯ ಮಶಘಾರಾ ಗ್ರಾಮದಲ್ಲಿನ ಕಟ್ಟಡದ ಮೇಲೆ ನಡೆದ ಇಸ್ರೇಲಿ ವಾಯುದಾಳಿಯಲ್ಲಿ ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande