208ನೇ ದಿನದ ಬಲ್ಡೋಟ ತೊಲಗಿಸಿ ಕೊಪ್ಪಳ ಉಳಿಸಿ ಧರಣಿ ಯಶಸ್ವಿ
ಕೊಪ್ಪಳ, 26 ಮೇ (ಹಿ.ಸ.) : ಆ್ಯಂಕರ್ : ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯಿಂದ ನಡೆಸುತ್ತಿರುವ ಬಲ್ಟೋಟ ಹಟಾವೋ ಕೊಪ್ಪಳ-ಭಾಗ್ಯನಗರ ಬಚಾವೋ ಧರಣಿ 208ನೇ ದಿನ ಪೂರ್ಣಗೊಳಿಸಿತು. ವಿಪರೀತ ಮಾಲಿನ್ಯ ಮಾಡುತ್ತಿರುವ ಸ್ಪಾಂಜ್ ಐರನ್, ಪೆಲ್ಲೆಟ್, ಸ್ಟೀಲ್, ಸಿಮೆಂಟ್, ಆಸಿಡ್,
208ನೇ ದಿನದ ಬಲ್ಡೋಟ ತೊಲಗಿಸಿ ಕೊಪ್ಪಳ ಉಳಿಸಿ ಧರಣಿ ಯಶಸ್ವಿ


ಕೊಪ್ಪಳ, 26 ಮೇ (ಹಿ.ಸ.) :

ಆ್ಯಂಕರ್ : ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯಿಂದ ನಡೆಸುತ್ತಿರುವ ಬಲ್ಟೋಟ ಹಟಾವೋ ಕೊಪ್ಪಳ-ಭಾಗ್ಯನಗರ ಬಚಾವೋ ಧರಣಿ 208ನೇ ದಿನ ಪೂರ್ಣಗೊಳಿಸಿತು. ವಿಪರೀತ ಮಾಲಿನ್ಯ ಮಾಡುತ್ತಿರುವ ಸ್ಪಾಂಜ್ ಐರನ್, ಪೆಲ್ಲೆಟ್, ಸ್ಟೀಲ್, ಸಿಮೆಂಟ್, ಆಸಿಡ್, ಸುಣ್ಣ, ಕ್ರಿಮಿನಾಶಕ, ರಸಾಯನ ಗೊಬ್ಬರ, ಕಲ್ಲಿದ್ದಲು ಸುಟ್ಟು ವಿದ್ಯುತ್ ತಯಾರಿಸುವ 28 ಬೃಹತ್ ಕಾರ್ಖಾನೆಗಳು ಇಲ್ಲಿನ ತುಂಗಭದ್ರಾ ನೀರು, ರೈತರ ಫಲವತ್ತಾದ ಭೂಮಿ, ಅಂತರ್ಜಲ, ಕೃಷಿಭೂಮಿ-ಬೆಳೆ ಮುಖ್ಯವಾಗಿ 22 ಗ್ರಾಮಗಳಲ್ಲಿ ಮತ್ತು ನಗರದ ಅರ್ಧ ಭಾಗದಲ್ಲಿ ಕಪ್ಪು ಮತ್ತು ಕಂದು ಧೂಳು, ಕಪ್ಪು ಹೊಗೆ, ಕರಿ ಹಾರುಬೂದಿ ಆವರಿಸಿ ಮಾಲಿನ್ಯವಾಗುತ್ತಿದೆ.

ಈ ಕಾರ್ಖಾನೆಗಳ ವಿಷ ರಸಾಯನಯುಕ್ತ ದ್ರವತ್ಯಾಜ್ಯ ಮತ್ತು ಘನತ್ಯಾಜ್ಯವನ್ನು ಖಾಲಿ ಬೋರವೆಲ್ ಮೂಲಕ ಭೂಗರ್ಭಕ್ಕೆ ಸೇರುತ್ತದೆ. ಹಳ್ಳ, ಕೊಳ್ಳಗಳ ಮೂಲಕ ತುಂಗಭದ್ರಾ ಜಲಾಶಯ ಮತ್ತು ನದಿ ಸೇರುತ್ತದೆ. ನಾವೆಲ್ಲ ಕುಡಿಯುವ ತುಂಗಭದ್ರಾ ನೀರನ್ನು ಸಂಪೂರ್ಣ ವಿಷಗೊಳಿಸಲಾಗಿದೆ.

ಇಲ್ಲಿಂದ ಈ ಕಾರ್ಖಾನೆಗಳು ತೊಲಗಿದರೆ ಮಾತ್ರ 22 ಗ್ರಾಮ ಮತ್ತು ಕೊಪ್ಪಳ-ಭಾಗ್ಯನಗರಕ್ಕೆ ಭವಿಷ್ಯ ಇರಲಿದೆ. ಇಲ್ಲದಿದ್ದರೆ ನಗರದ ಒಂದೂವರೆ ಲಕ್ಷ ಜನರು ಮತ್ತು 22 ಹಳ್ಳಿಗಳ 50 ಸಾವಿರ ಜನರು ಅನಾರೋಗ್ಯದ ದುಷ್ಪರಿಣಾಮ ಎದುರಿಸಬೇಕಾಗುತ್ತದೆ.

ಅವಳಿ ನಗರದ ಜನರ ಆರೋಗ್ಯ ಹಾನಿ ಮಾಡಲು 54 ಸಾವಿರ ಕೋಟಿ ಹೂಡಿಕೆಗೆ ಮುಂದಾದ ಬಲ್ಡೋಟ ಕಾರ್ಖಾನೆ ಕುರಿತು ಗವಿಶ್ರೀಗಳು ಧರ್ಮಾದೇಶ ಮಾಡಿರುವಂತೆ ವಿಸ್ತರಣೆ ತಡೆದ ಆದೇಶ ಪತ್ರವನ್ನು ಜನಪ್ರತಿನಿಧಿಗಳು ತರಬೇಕೆಂದು, ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡು 2011ರಿಂದ ಬಲ್ಡೋಟ ಎಂಎಸ್ಪಿಎಲ್ ಪೆಲ್ಲೆಟ್ ಘಟಕದಿಂದ ನಗರದ ಅರ್ಧ ವಾರ್ಡಗಳಿಗೆ ಮಾಲಿನ್ಯವಾಗುತ್ತಿದ್ದು, ನಗರದ ಜನರ ಆರೋಗ್ಯದ ದುಷ್ಪರಿಣಾಮ ತಡೆಯಲು ಈ ಘಟಕ ಬಂದ್ ಮಾಡಿ, ಜನರ ಆರೋಗ್ಯ ಖಾತ್ರಿ ಪಡಿಸಬೇಕೆಂದು, ಬಲ್ಡೋಟ ಕಂಪನಿಯು ಬಸಾಪುರ ಗ್ರಾಮದ ಕೆರೆಯನ್ನು ಅನಧಿಕೃತವಾಗಿ ಮಂಜೂರಿ ಹೆಸರಿನಲ್ಲಿ ವಶಪಡಿಸಿಕೊಂಡಿದ್ದು ಸುತ್ತಲಿನ ಸಾವಿರಾರು ಜಾನುವಾರುಗಳ ನೀರಿಗೆ ಅಭಾವವಾಗಿದ್ದು, ಕಂಪನಿ ಹಾಕಿದ ಕಾಂಪೌಂಡ್ ತೆರವು ಮಾಡಿ ಜಾನುವಾರು ನೀರು ಕುಡಿಯಲು ಅವಕಾಶ ಮಾಡಿಕೊಡಬೇಕೆಂದು, ತುಂಗಭದ್ರ ನೀರು ವಿಷಗೊಳಿಸುತ್ತಿರುವ ಮಾಲಿನ್ಯಕಾರಿ ಕಾರ್ಖಾನೆಗಳನ್ನು ಮುಚ್ಚಬೇಕೆಂದು, ಹಿರೇಬಗನಾಳ, ಅಲ್ಲಾನಗರ ಪಕ್ಕದ ಸ್ಪಾಂಜ್ ಐರನ್ ಕಾರ್ಖಾನೆಗಳನ್ನು ಕೇಂದ್ರ ಪರಿಸರ ಇಲಾಖೆ ವರದಿಯ ಶಿಫಾರಸಿನಂತೆ ನಿರ್ಜನ ಪ್ರದೇಶಕ್ಕೆ ಸ್ಥಳಾಂತರಿಸಬೇಕೆಂದು, ಕಾರ್ಖಾನೆ ಧೂಳು ಬಾಧಿತ 22 ಹಳ್ಳಿಗಳ ಪುನರುಜ್ಜೀವನ ಮಾಡಲು ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು, ಎ.ಐ.ಐ.ಎಂ.ಎಸ್ ಸಂಸ್ಥೆ ಮತ್ತು ಐ.ಐ.ಎಸ್.ಸಿ ಸಂಸ್ಥೆಯಿಂದ ಜನರ ಆರೋಗ್ಯ ಮತ್ತು ಪರಿಸರ ಹಾನಿಯ ಸಮೀಕ್ಷೆ ನಡೆಸಬೇಕೆಂದು ನಗರಸಭೆ ಆವರಣದಲ್ಲಿ ಧರಣಿ ನಡೆಯುತ್ತಿದೆ.

ಧರಣಿಯಲ್ಲಿ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಗೋನಾಳ, ಸಂಚಾಲಕ ಮಂಜುನಾಥ ಜಿ. ಗೊಂಡಬಾಳ, ನಿವೃತ್ತ ಉಪನ್ಯಾಸಕರಾದ ಡಾ. ಬಸವರಾಜ ಪೂಜಾರ, ಶಂಭುಲಿಂಗಪ್ಪ ಹರಗೇರಿ, ಶಿವಾನಂದಯ್ಯ ಬೀಳಗಿಮಠ, ಸರೋಜಾ ಬಾಕಳೆ, ರವಿ ಕಾಂತನವರ, ಮೂಕಪ್ಪ ಮೇಸ್ತ್ರಿ ಬಸಾಪುರ, ಬಸವರಾಜ ಪೂಜಾರ ಕಾಸನಕಂಡಿ, ಅಬ್ದುಲ್ ಗಫಾರ್ ಹೊಸಪೇಟೆ, ಎಸ್.ಮಹಾದೇವಪ್ಪ ಮಾವಿನಮಡು, ಮಂಜುನಾಥ ಕವಲೂರು, ಶಿವಪ್ಪ ಜಲ್ಲಿ ಇತರರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande