22ನೇ ದಿನ ಪೂರ್ಣಗೊಳಿಸಿದ ಬಸಾಪುರ ಕೆರೆ ಹೋರಾಟ
ಕೊಪ್ಪಳ, 26 ಮೇ (ಹಿ.ಸ.) : ಆ್ಯಂಕರ್ : ತಾಲೂಕಿನ ಬಸಾಪುರ ಗ್ರಾಮದ 44.35ಎಕರೆ ಗ್ರಾಮದ ಕೆರೆಯನ್ನು ಬಲ್ಡೋಟ ಕಂಪನಿ ಅತಿಕ್ರಮಣ ಮಾಡಿದ್ದನ್ನು ಮುಕ್ತಗೊಳಿಸಬೇಕೆಂದು 22ನೇ ದಿನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಕಾರ್ಖಾನೆ ಮುಖ್ಯದ್ವಾರದ ಎದುರು ಜಾನುವಾರು ಸಹಿತ ಧರಣಿ ಹೋರಾಟ ನಡೆಯುತ್ತಿ
22ನೇ ದಿನ ಪೂರ್ಣಗೊಳಿಸಿದ ಬಸಾಪುರ ಕೆರೆ ಹೋರಾಟ


22ನೇ ದಿನ ಪೂರ್ಣಗೊಳಿಸಿದ ಬಸಾಪುರ ಕೆರೆ ಹೋರಾಟ


ಕೊಪ್ಪಳ, 26 ಮೇ (ಹಿ.ಸ.) :

ಆ್ಯಂಕರ್ : ತಾಲೂಕಿನ ಬಸಾಪುರ ಗ್ರಾಮದ 44.35ಎಕರೆ ಗ್ರಾಮದ ಕೆರೆಯನ್ನು ಬಲ್ಡೋಟ ಕಂಪನಿ ಅತಿಕ್ರಮಣ ಮಾಡಿದ್ದನ್ನು ಮುಕ್ತಗೊಳಿಸಬೇಕೆಂದು 22ನೇ ದಿನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಕಾರ್ಖಾನೆ ಮುಖ್ಯದ್ವಾರದ ಎದುರು ಜಾನುವಾರು ಸಹಿತ ಧರಣಿ ಹೋರಾಟ ನಡೆಯುತ್ತಿದೆ.

ಇಲ್ಲಿ ಹತ್ತಾರು ಸಾವಿರ ಜಾನುವಾರುಗಳನ್ನು ರೈತರು ಸಾಕುತ್ತಾರೆ. ಜಿಲ್ಲಾಧಿಕಾರಿಗಳು ಬಸಾಪುರ ಕೆರೆ ರಸ್ತೆ ಬಂದ್ ಮಾಡಿ ಕಾಂಪೌಂಡ್ ಕಟ್ಟಿದ್ದನ್ನು ತೆರವು ಮಾಡಿ ಕೊಡುತ್ತಿಲ್ಲ ಎಂದು ಬಸಾಪುರ ಗ್ರಾಮದ ಹೋರಾಟಗಾರ ಮೂಕಪ್ಪ ಮೇಸ್ತ್ರಿ ಅಸಮಾಧಾನ ಹೊರಹಾಕಿದರು.

ದಿ:06.05.2026ರಂದು ಬೆಂಗಳೂರಿನಲ್ಲಿ ಕೆರೆ ಪ್ರಾಧಿಕಾರದಲ್ಲಿ ವಿಚಾರಣೆ ನಡೆಸಿ, ಕೆರೆ ಮಂಜೂರಿ ಷರತ್ತು ಉಲ್ಲಂಘನೆ ಆಗಿದ್ದರ ಮೇಲೆ ಕೆರೆ ಬಿಡಿಸಿಕೊಡಲು ನಿರ್ದೇಶನ ಕೋರಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದು ಬಿಟ್ಟರೆ ಇದುವರೆಗೆ ಕೆರೆ ಅಡ್ಡಗಟ್ಟಿದ ರಸ್ತೆ ತೆರವು ಮಾಡಿ ಕೊಡುತ್ತಿಲ್ಲ. ಸರ್ಕಾರ, ಜಿಲ್ಲಾಡಳಿತ ಮತ್ತು ಜನಪ್ರತಿನಿದಿನಗಳು ನಮ್ಮ ನೆರವಿಗೆ ಬಂದು ಕೆರೆ ಮುಕ್ತಗೊಳಿಸಬೇಕು ಎಂದರು.

ಧರಣಿ ನೇತೃತ್ವವನ್ನು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಭೀಮಸೇನ ಕಲಕೇರಿ, ನಿಂಗಪ್ಪ ಕೊಪ್ಪದ ಬಸಾಪುರ, ನಿವೃತ್ತ ಇಂಜಿನೀಯರ್ ನೂರಂದಪ್ಪ ಉಪ್ಪಿನ, ರೈತ ಮುಖಂಡ ಕನಕಪ್ಪ ಪೂಜಾರ ಇಂದರಗಿ, ಯಂಕಪ್ಪ ಬಿಸರಹಳ್ಳಿ ಕಾಸನಕಂಡಿ, ಬಸವರಾಜ ಪೂಜಾರ ಕಾಸನಕಂಡಿ, ಯಮನೂರಪ್ಪ ಹಾಲಳ್ಳಿ ಬಸಾಪುರ, ಹನುಮಂತ ತಳವಾರ ಬಸಾಪುರ, ಕನಕಗಿರಿ ತಾಲೂಕ ಅಧ್ಯಕ್ಷ ಮಹೇಶ, ಉಪಾಧ್ಯಕ್ಷ ಕೆ. ಕೃಷ್ಣಪ್ಪ, ಗೌರವಾಧ್ಯಕ್ಷ ನಾಗಪ್ಪ, ಮಲ್ಲಪ್ಪ ಗಾಂಜಿ ಬಸಾಪುರ, ಅಂಜಪ್ಪ ಇಟಗಿ ಬಸಾಪುರ, ಉಮೇಶ ಡನಕನಕೇರಿ ಬಸಾಪುರ, ತಿಮ್ಮಣ್ಣ ಕಲಕೇರಿ ಮುಂತಾದವರು ವಹಿಸಿಕೊಂಡರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande