
ನವದೆಹಲಿ, 26 ಮೇ (ಹಿ.ಸ.) :
ಆ್ಯಂಕರ್ : ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 12 ವರ್ಷಗಳನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಳ ನಾಯಕರು ಅಭಿನಂದನೆಗಳು ಮತ್ತು ಶುಭಾಶಯಗಳನ್ನು ತಿಳಿಸಿದ್ದಾರೆ.
ಕಳೆದ 12 ವರ್ಷಗಳನ್ನು ರಾಷ್ಟ್ರಸೇವೆ, ಆಡಳಿತ, ಆತ್ಮನಿರ್ಭರತೆ, ಬಡವರ ಕಲ್ಯಾಣ ಹಾಗೂ ಜಾಗತಿಕ ಮಟ್ಟದಲ್ಲಿ ಭಾರತದ ಗೌರವವನ್ನು ಹೆಚ್ಚಿಸಿದ ಅವಧಿ ಎಂದು ಅವರು ಬಣ್ಣಿಸಿದ್ದಾರೆ.
ಪ್ರಧಾನ ಮಂತ್ರಿ ಮೋದಿ ಅವರ ನಾಯಕತ್ವದಲ್ಲಿ ಭಾರತವು ನಿರಂತರ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದೆ ಎಂದು ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ ಅರ್ಜುನರಾಮ ಮೇಘವಾಲ್ ಮಾತನಾಡಿ, 2014ರ ಮೇ 26ರಂದು ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ರಾಷ್ಟ್ರಸೇವೆ ಮತ್ತು ಜನಕಲ್ಯಾಣದ ಹೊಸ ಯುಗ ಆರಂಭವಾಯಿತು ಎಂದು ಹೇಳಿದರು.
ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತವು ಅಭಿವೃದ್ಧಿ, ಡಿಜಿಟಲ್ ಕ್ರಾಂತಿ, ಮೂಲಸೌಕರ್ಯ, ಆತ್ಮನಿರ್ಭರತೆ ಹಾಗೂ ಜಾಗತಿಕ ಪ್ರತಿಷ್ಠೆಯ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದೆ ಎಂದು ತಿಳಿಸಿದರು.
ಹರಿಯಾಣ ಮುಖ್ಯಮಂತ್ರಿ ನಾಯಬ್ ಸಿಂಗ್ ಸೈನಿ ಅವರು ಮೋದಿ ಸರ್ಕಾರದ 12 ವರ್ಷಗಳನ್ನು ಐತಿಹಾಸಿಕ ಮತ್ತು ಗೌರವದ ಅವಧಿ ಎಂದು ಬಣ್ಣಿಸಿದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆ, ಜನಧನ್ ಯೋಜನೆ, ಆಯುಷ್ಮಾನ್ ಭಾರತ್, ಉಜ್ವಲಾ ಯೋಜನೆ ಹಾಗೂ ಪಿಎಂ ಸ್ವನಿಧಿ ಯೋಜನೆಗಳ ಮೂಲಕ ಕೋಟ್ಯಾಂತರ ಜನರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರಲಾಗಿದೆ ಎಂದು ಹೇಳಿದರು. ಮೋದಿ ನಾಯಕತ್ವದಲ್ಲಿ ಭಾರತವು ಅಭಿವೃದ್ಧಿ, ಆತ್ಮವಿಶ್ವಾಸ ಮತ್ತು ಆತ್ಮನಿರ್ಭರತೆಯ ಹೊಸ ಶಿಖರಗಳನ್ನು ತಲುಪಿದೆ ಎಂದರು.
ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು, ಪ್ರಧಾನಿ ಮೋದಿ 140 ಕೋಟಿ ಭಾರತೀಯರ ಆಶಾಭರವಸೆಯ ಪ್ರತೀಕವಾಗಿದ್ದಾರೆ ಎಂದು ಹೇಳಿದರು.
ಕಳೆದ 12 ವರ್ಷಗಳಲ್ಲಿ ಭಾರತವು ಆತ್ಮನಿರ್ಭರತೆ, ಭದ್ರತೆ, ಸಾಂಸ್ಕೃತಿಕ ಗೌರವ ಮತ್ತು ಡಿಜಿಟಲ್ ಕ್ರಾಂತಿಯ ಹೊಸ ಆಯಾಮಗಳನ್ನು ಸ್ಥಾಪಿಸಿದೆ ಎಂದು ಹೇಳಿದರು. ಭಾರತ ಇಂದು ಜಾಗತಿಕ ವೇದಿಕೆಯಲ್ಲಿ ನಿರ್ಣಾಯಕ ನಾಯಕತ್ವ ವಹಿಸುತ್ತಿದೆ ಎಂದರು.
ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು, ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ದೇಶವು “ರಾಷ್ಟ್ರ ಮೊದಲು” ಎಂಬ ಧ್ಯೇಯದೊಂದಿಗೆ ಸುಶಾಸನ ಮತ್ತು ಜನವಿಶ್ವಾಸದ ಹೊಸ ಕಾರ್ಯಸಂಸ್ಕೃತಿಯನ್ನು ಅಳವಡಿಸಿಕೊಂಡಿದೆ ಎಂದು ಹೇಳಿದರು.
ಸ್ವಚ್ಛ ಭಾರತ ಅಭಿಯಾನ, ಮನೆಮನೆಗೆ ನೀರು ಯೋಜನೆ, ಡಿಜಿಟಲ್ ಇಂಡಿಯಾ ಮತ್ತು ಮಹಿಳಾ ಸಬಲೀಕರಣ ಯೋಜನೆಗಳು ದೇಶಕ್ಕೆ ಹೊಸ ದಿಕ್ಕು ನೀಡಿವೆ ಎಂದು ಹೇಳಿದರು.
ದೆಹಲಿ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಅವರು, ಮೋದಿ ನಾಯಕತ್ವದಲ್ಲಿ ಭಾರತವು ಸಂಕಲ್ಪದಿಂದ ಸಾಧನೆವರೆಗೆ ಯಶಸ್ವಿ ಪಯಣ ನಡೆಸಿದೆ ಎಂದು ಹೇಳಿದರು.
ಉಜ್ವಲಾ, ಜನಧನ್, ಆಯುಷ್ಮಾನ್ ಭಾರತ್ ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆಗಳ ಮೂಲಕ ಸಮಾಜದ ಕೊನೆಯ ವ್ಯಕ್ತಿಗೂ ಅಭಿವೃದ್ಧಿಯ ಲಾಭ ತಲುಪಿಸಲಾಗಿದೆ ಎಂದು ಹೇಳಿದರು.
ಬಿಜೆಪಿ ದೆಹಲಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್ದೇವಾ ಅವರು, ಮೋದಿ ಸರ್ಕಾರದ 12 ವರ್ಷಗಳನ್ನು “ಹೊಸ ಭಾರತದ ನಿರ್ಮಾಣದ ಸುವರ್ಣಯುಗ” ಎಂದು ಬಣ್ಣಿಸಿದರು. ಅಭಿವೃದ್ಧಿ, ಆತ್ಮನಿರ್ಭರತೆ, ಡಿಜಿಟಲ್ ಕ್ರಾಂತಿ ಮತ್ತು ಜಾಗತಿಕ ಗುರುತಿನ ಕ್ಷೇತ್ರಗಳಲ್ಲಿ ಭಾರತವು ಐತಿಹಾಸಿಕ ಸಾಧನೆ ಮಾಡಿದೆ ಎಂದು ಹೇಳಿದರು.
ಬಿಜೆಪಿ ಸಂಸದೆ ಕಮಲಜೀತ್ ಸಹ್ರಾವತ್ ಅವರು, 2014ರ ಮೇ 26 ಭಾರತೀಯ ರಾಜಕೀಯ ಮತ್ತು ರಾಷ್ಟ್ರ ನಿರ್ಮಾಣದ ಇತಿಹಾಸದಲ್ಲಿ ಮಹತ್ವದ ದಿನ ಎಂದು ಹೇಳಿದರು. ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಭಾರತವು ಮೂಲಸೌಕರ್ಯ ಅಭಿವೃದ್ಧಿ, ಡಿಜಿಟಲ್ ಇಂಡಿಯಾ, ಬಡವರ ಕಲ್ಯಾಣ ಹಾಗೂ ಜಾಗತಿಕ ರಾಜತಾಂತ್ರಿಕ ಕ್ಷೇತ್ರಗಳಲ್ಲಿ ಹೊಸ ಯಶಸ್ಸು ಕಂಡಿದೆ ಎಂದು ಹೇಳಿದರು.
ಉಲ್ಲೇಖನೀಯವಾಗಿ, 2014ರ ಮೇ 26ರಂದು ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಭಾರತದ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.