`ಜನಪ್ರತಿನಿಧಿ' ಬೆಳ್ಳಿ ಸಂಭ್ರಮದಲ್ಲಿ ವಿಶ್ವ ಕುಂದಾಪುರಗೆ ಗೌರವಾರ್ಪಣೆ
`ಜನಪ್ರತಿನಿಧಿ' ಬೆಳ್ಳಿ ಸಂಭ್ರಮದಲ್ಲಿ ವಿಶ್ವ ಕುಂದಾಪುರಗೆ ಗೌರವಾರ್ಪಣೆ
ಉಡುಪಿ ಜಿಲ್ಲೆ ಕುಂದಾಪುರದಲ್ಲಿ ನಡೆದ ಜನಪ್ರತಿನಿಧಿ ವಾರಪತ್ರಿಕೆ ಬೆಳ್ಳಿ ಹಬ್ಬದಲ್ಲಿ ವಿಶ್ವ ಕುಂದಾಪುರ ರವರನ್ನು ಗೌರವಿಸಲಾಯಿತು.


ಕೋಲಾರ, ೨೧ ಮೇ (ಹಿ.ಸ) :

ಆ್ಯಂಕರ್ : ಉಡುಪಿ ಜಿಲ್ಲೆ ಕುಂದಾಪುರದ `ಜನಪ್ರತಿನಿಧಿ' ವಾರಪತ್ರಿಕೆಯ ಬೆಳ್ಳಿ ಹಬ್ಬದ ಪ್ರಯುಕ್ತ ಕುಂದಾಪುರದಲ್ಲಿ ಮೇ ೧೭ರ ಭಾನುವಾರ ನಡೆದ `ಅಕ್ಷರ ೨೦೨೬' ರಜತ ಸವಿ ನೆನಪು ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಹಾಗೂ ಲೇಖಕ ವಿಶ್ವ ಕುಂದಾಪುರ ಇವರನ್ನು ಸನ್ಮಾನಿಸಲಾಯಿತು. ಬೈಂದೂರು ಶಾಸಕ ಗುರುರಾಜ ಗಂಟಿಹೊಳಿ ಅವರು ಶಾಲು ಹೊದಿಸಿ ಸ್ಮರಣಿಕೆ ನೀಡಿ ವಿಶ್ವರಿಗೆ ಗೌರವ ಸಮರ್ಪಿಸಿದರು.

ಖ್ಯಾತ ವಾಗ್ಮಿ ಪ್ರೊ. ಕೃಷ್ಣೇಗೌಡ ಅವರು, ತಿಂಗಳಿಗೊ0ದರ0ತೆ ಆರು ತಿಂಗಳ ಕಾಲ ವೈವಿಧ್ಯಮಯವಾಗಿ ನಡೆಯಲಿರುವ ಅಕ್ಷರ ೨೦೨೬ಕ್ಕೆ ಚಾಲನೆ ನೀಡಿದರು. ೨೫ ವರ್ಷಗಳಿಂದ ಸತತವಾಗಿ ಪ್ರಕಟವಾಗುತ್ತಿರುವ ವಿಶಾಲ ವ್ಯಾಪ್ತಿಯ ಸ್ಥಳೀಯ ಸಾಪ್ತಾಹಿಕವನ್ನು ಅಭಿನಂದಿಸಿದರು.

ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, `ಜನಪ್ರತಿನಿಧಿ' ಸಂಪಾದಕ ಸುಬ್ರಹ್ಮಣ್ಯ ಪಡುಕೋಣೆ ಮೊದಲಾದವರು ಇದ್ದರು.

ಮನಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮ

ಅಕ್ಷರ ೨೦೨೬ ಉದ್ಘಾಟನೆ ಕಾರ್ಯಕ್ರಮದಲ್ಲಿ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ತಂಡದವರು ಅದ್ಭುತವಾದ ನೃತ್ಯಗಳನ್ನು ಪ್ರಸ್ತುತ ಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande