
ಬೆಂಗಳೂರು, 21 ಮೇ (ಹಿ.ಸ.) :
ಆ್ಯಂಕರ್ : ನೈಋತ್ಯ ರೈಲ್ವೆ ವತಿಯಿಂದ ಕಾರ್ಯಾಚರಣೆಯ ನಿರ್ಬಂಧಗಳನ್ನು ಗಮನದಲ್ಲಿಟ್ಟು, ರೈಲು ಸಂಖ್ಯೆ 16525 ಕನ್ಯಾಕುಮಾರಿ – ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಈ ಪರಿಷ್ಕೃತ ವೇಳಾಪಟ್ಟಿ ಮೇ 26, 2026ರಿಂದ ಕನ್ಯಾಕುಮಾರಿ ನಿಲ್ದಾಣದಿಂದ ಪ್ರಯಾಣ ಆರಂಭಿಸುವ ರೈಲಿಗೆ ಅನ್ವಯವಾಗಲಿದೆ.
ಕನ್ಯಾಕುಮಾರಿಯಿಂದ ತಿರುಪತ್ತೂರುವರೆಗಿನ ರೈಲಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ. ಆದರೆ ತಿರುಪತ್ತೂರು ನಂತರದ ನಿಲ್ದಾಣಗಳ ಆಗಮನ ಮತ್ತು ನಿರ್ಗಮನ ಸಮಯಗಳಲ್ಲಿ ಬದಲಾವಣೆ ಮಾಡಲಾಗಿದೆ.
ಪರಿಷ್ಕೃತ ವೇಳಾಪಟ್ಟಿಯಂತೆ, ಕುಪ್ಪಂ ನಿಲ್ದಾಣದಲ್ಲಿ ರೈಲು ಬೆಳಿಗ್ಗೆ 4:28ಕ್ಕೆ ಆಗಮಿಸಿ 4:30ಕ್ಕೆ ಹೊರಡಲಿದೆ. ಈ ಮೊದಲು ರೈಲು 3:54/3:55 ವೇಳೆಗೆ ಸಂಚರಿಸುತ್ತಿತ್ತು.
ಬಂಗಾರಪೇಟೆ ನಿಲ್ದಾಣದಲ್ಲಿ ಹೊಸ ವೇಳಾಪಟ್ಟಿಯಂತೆ ರೈಲು 5:07ಕ್ಕೆ ಆಗಮಿಸಿ 5:09ಕ್ಕೆ ನಿರ್ಗಮಿಸಲಿದೆ. ಹಿಂದಿನ ವೇಳಾಪಟ್ಟಿ 4:19/4:21 ಆಗಿತ್ತು. ಮಾಲೂರು ನಿಲ್ದಾಣದಲ್ಲಿ 5:29/5:30 ವೇಳೆಗೆ ರೈಲು ಸಂಚರಿಸಲಿದ್ದು, ಹಿಂದಿನ ಸಮಯ 4:41/4:42 ಆಗಿತ್ತು.
ವೈಟ್ಫೀಲ್ಡ್ ನಿಲ್ದಾಣದಲ್ಲಿ ರೈಲು 5:59ಕ್ಕೆ ಆಗಮಿಸಿ 6:01ಕ್ಕೆ ಹೊರಡಲಿದೆ. ಕೃಷ್ಣರಾಜಪುರಂ ನಿಲ್ದಾಣದಲ್ಲಿ 6:10/6:12 ಹಾಗೂ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಲ್ಲಿ 6:29/6:31 ವೇಳೆಗೆ ರೈಲು ಸಂಚರಿಸಲಿದೆ.
ಆದರೆ, ಅಂತಿಮ ಗಮ್ಯಸ್ಥಾನವಾದ ಕೆಎಸ್ಆರ್ ಬೆಂಗಳೂರು ನಿಲ್ದಾಣಕ್ಕೆ ರೈಲು ಆಗಮನ ಸಮಯ ಬೆಳಿಗ್ಗೆ 7:00 ಗಂಟೆಯಾಗಿಯೇ ಮುಂದುವರಿಯಲಿದೆ ಎಂದು ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.