ತಮಿಳು ನಾಡಿನ ಸಚಿವ ಸಂಪುಟ ವಿಸ್ತರಣೆ
ಮುಖ್ಯಮಂತ್ರಿ ವಿಜಯ್ ಸರ್ಕಾರಕ್ಕೆ 23 ನೂತನ ಸಚಿವರ ಸೇರ್ಪಡೆ
Tn cabinet


ಚೆನೈ, 21 ಮೇ (ಹಿ.ಸ.) :

ಆ್ಯಂಕರ್ : ತಮಿಳು ನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ ನೇತೃತ್ವದ ಸರ್ಕಾರದ ಸಚಿವ ಸಂಪುಟವನ್ನು ವಿಸ್ತರಿಸಲಾಗಿದ್ದು, ಗುರುವಾರ 23 ಮಂದಿ ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ವಿಜಯ್ ಅವರ ಪಕ್ಷದ 21 ಮಂದಿ ಶಾಸಕರು ಹಾಗೂ ಕಾಂಗ್ರೆಸ್ನ ಇಬ್ಬರು ಶಾಸಕರು ಸಚಿವ ಸಂಪುಟಕ್ಕೆ ಸೇರ್ಪಡೆಯಾದರು. ಇದರೊಂದಿಗೆ ಸಚಿವರ ಒಟ್ಟು ಸಂಖ್ಯೆ 32ಕ್ಕೆ ಏರಿಕೆಯಾಗಿದೆ. ವಿಧಾನ ಸಭೆಯ ಬಲದ ಆಧಾರದ ಮೇಲೆ ತಮಿಳು ನಾಡು ಸರ್ಕಾರದಲ್ಲಿ ಗರಿಷ್ಠ 35 ಮಂದಿ ಸಚಿವರನ್ನು ಹೊಂದಲು ಅವಕಾಶವಿದೆ.

ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದವರಲ್ಲಿ ಶ್ರೀನಾಥ್, ಕಮಲಿ, ವಿಜಯಲಕ್ಷ್ಮಿ, ರಂಜಿತ್ ಕುಮಾರ್, ವಿನೋತ್, ರಾಜೀವ್, ರಾಜ್ಕುಮಾರ್, ಗಂಧಿರಾಜ್, ಮಧನ್ ರಾಜಾ, ಜಗದೇಶ್ವರಿ, ರಾಜೇಶ್ ಕುಮಾರ್, ವಿಜಯ್ ಬಾಲಾಜಿ, ಲೋಗೇಶ್ ತಮಿಳ್ಸೆಲ್ವನ್, ವಿಜಯ್ ತಮಿಳನ್ ಪಾರ್ಥಿಬನ್, ರಮೇಶ್, ವಿಶ್ವನಾಥನ್, ಕುಮಾರ್, ತೆನ್ನರಸು, ಸಂಪತ್ ಕುಮಾರ್, ಮೊಹಮ್ಮದ್ ಫರ್ವಾಸ್, ಶರತ್ ಕುಮಾರ್, ಮೇರಿ ವಿಲ್ಸನ್ ಹಾಗೂ ವಿಗ್ನೇಶ್ ಸೇರಿದ್ದಾರೆ.

ಕಾಂಗ್ರೆಸ್ ಪಕ್ಷದ ರಾಜೇಶ್ ಕುಮಾರ್ ಹಾಗೂ ಪಿ. ವಿಶ್ವನಾಥನ್ ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸುಮಾರು ಆರು ದಶಕಗಳ ಬಳಿಕ ತಮಿಳುನಾಡು ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಸಚಿವ ಸಂಪುಟದ ಭಾಗವಾಗಿರುವುದು ವಿಶೇಷವಾಗಿದೆ. 1967ರಲ್ಲಿ ಎಂ. ಭಕ್ತವತ್ಸಲಂ ನೇತೃತ್ವದ ಕಾಂಗ್ರೆಸ್ ಸರ್ಕಾರದ ಬಳಿಕ ಪಕ್ಷಕ್ಕೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿರಲಿಲ್ಲ.

ಇದೇ ವೇಳೆ ಮೈತ್ರಿ ಪಕ್ಷಗಳಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮತ್ತು ವಿದುತಲೈ ಚಿರುತೈಗಲ್ ಕಚ್ಚಿ ಪಕ್ಷಗಳಿಗೆ ತಲಾ ಒಂದು ಸಚಿವ ಸ್ಥಾನ ಮೀಸಲಿಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಪಕ್ಷಗಳು ಇನ್ನೂ ತಮ್ಮ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿಲ್ಲ. ಮುಂದಿನ ಹಂತದಲ್ಲಿ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande