
ಬಳ್ಳಾರಿ, 18 ಮೇ (ಹಿ.ಸ.) :
ಆ್ಯಂಕರ್ : ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ಮೋಹನ್ದಾಸ್ ಕೆ. (37) ಅವರು ಮೇ 13 ರಿಂದ ನಾಪತ್ತೆಯಾಗಿದ್ದಾರೆ ಎಂದು ಅವರ ಪತ್ನಿ ಶಕುಂತಲ ಅವರು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಳ್ಳಾರಿಯ ಕುವೆಂಪು ನಗರದ 3ನೇ ವಾರ್ಡ್ ನಿವಾಸಿಯಾದ ಮೋಹನ್ ದಾಸ್ ಅವರು ಮೇ 13ರಂದು ವಿಶ್ವವಿದ್ಯಾಲಯಕ್ಕೆ ತೆರಳಿದ್ದರು. ಅಂದು ಮಧ್ಯಾಹ್ನದ ನಂತರ ಅವರು ಮನೆಗೆ ಮರಳಿ ಬಂದಿಲ್ಲ. ಮೊಬೈಲ್ ಹಾಗೂ ಡೈರಿಯನ್ನು ಕಚೇರಿಯಲ್ಲೇ ಬಿಟ್ಟು ಹೊರಟು ಹೋಗಿರುವುದು ತಿಳಿದುಬಂದಿದೆ.
ಎತ್ತರ 6 ಅಡಿ, ದುಂಡು ಮುಖ, ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು, ಕಪ್ಪು ಕೂದಲು ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ಬಿಳಿ ಬಣ್ಣದ ಗೆರೆಗಳಿರುವ ಆಫ್ ಶರ್ಟ್ (ಅರ್ಧ ತೋಳಿನ ಚುಕ್ಕೆ ಮತ್ತು ನೀಲಿ ಬಣ್ಣದ ಗೆರೆಗಳುಳ್ಳ ಅಂಗಿ) ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ. ಕನ್ನಡ, ತೆಲುಗು, ಇಂಗ್ಲೀಷ್ ಮತ್ತು ತಮಿಳು ಭಾಷೆ ಮಾತನಾಡುತ್ತಾರೆ.
ಈ ಚಹರೆಯುಳ್ಳ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾದಲ್ಲಿ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ದೂ.08392-276461, ಮೊ.9480803049 ಅಥವಾ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್