
ಕೋಲಾರ, 18 ಮೇ (ಹಿ.ಸ.) :
ಆ್ಯಂಕರ್ : ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ 94ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ನೇತೃತ್ವದಲ್ಲಿ ಸೋಮವಾರ ನಗರದ ಸಾಯಿಬಾಬಾ ಮಂದಿರ ದೇವೇಗೌಡರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ ಕಾರ್ಯಕರ್ತರೊಂದಿಗೆ ಕೇಕ್ ಕತ್ತರಿಸಿ ಜಿಲ್ಲಾ ಎಸ್.ಎನ್.ಆರ್ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು ಹಂಪಲ ವಿತರಿಸಿದರು.
ನಂತರ ಮಾಧ್ಯಮಗಳೊಂದಿಗೆ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ ದೇಶದಲ್ಲಿ ಪ್ರಧಾನಿಯಾಗಿ ರೈತ ನಾಯಕರಾಗಿ ರಾಷ್ಟ್ರಕ್ಕೆ ನೀಡಿದ ಕೊಡುಗೆ ಅಪಾರವಾದದ್ದು ರಾಜಕೀಯ ವಲಯದಲ್ಲಿ ಎಲ್ಲಾ ಪಕ್ಷಗಳ ಗೌರವಕ್ಕೆ ಅವರು ಪಾತ್ರರಾಗಿದ್ದಾರೆ ಕೃಷಿ ನೀರಾವರಿ, ಗ್ರಾಮೀಣ ವಲಯಕ್ಕೆ ಅವರ ಕೊಡುಗೆ ಅಪಾರ ತಮ್ಮ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು
ದೇವೇಗೌಡರ ಗರಡಿಯಲ್ಲಿ ಬೆಳದ ಎಷ್ಟೋ ನಾಯಕರು ಇವತ್ತು ರಾಜಕಾರಣದಲ್ಲಿ ಬೇರೆ ಬೇರೆ ಪಕ್ಷಗಳಲ್ಲಿ ಇದ್ದಾರೆ ದೇಶದ ಹಿತಾಸಕ್ತಿ ಹಾಗೂ ರೈತರ ಹಿತಾಸಕ್ತಿಯಲ್ಲಿ ಇವತ್ತು ಕೂಡ ರಾಜ್ಯಸಭೆಯಲ್ಲಿ ಇದ್ದು ಪ್ರಶ್ನೆ ಮಾಡಿದ್ದಾರೆ ಅವರ ವ್ಯಕ್ತಿತ್ವ ಹಾಗೂ ಮೌಲ್ಯಾಧಾರಿತ ಸಿದ್ದಾಂತವು ಇವತ್ತಿನ ಯುವ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ ಮುಂದಿನ ದಿನಗಳಲ್ಲಿ ದೇವೇಗೌಡರು ಮತ್ತು ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ನಿಖಿಲ್ ಕುಮಾರಸ್ವಾಮಿ ನಾಯಕತ್ವದಲ್ಲಿ ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಯಾಗಲಿದ್ದು ಜನಪರ, ರೈತ ಪರ ಆಡಳಿತ ಬರಲಿದೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಮಾತನಾಡಿ ಮಾಜಿ ಪ್ರಧಾನಿ ದೇವೇಗೌಡರು ದೇಶದ ರಾಜಕೀಯ ಇತಿಹಾಸದಲ್ಲಿ ವಿಶಿಷ್ಟ ಛಾಪು ಮೂಡಿಸಿದ ನಾಯಕ. ರೈತರ ಸಮಸ್ಯೆ, ಗ್ರಾಮೀಣಾಭಿವೃದ್ಧಿ ಹಾಗೂ ಜನಸಾಮಾನ್ಯರ ಪರ ಹೋರಾಟದ ಮೂಲಕ ಅವರು ಜನಮನ ಗೆದ್ದಿದ್ದಾರೆ. ಅವರ ಸರಳತೆ ಮತ್ತು ಜನಪರ ಆಡಳಿತ ಇಂದಿಗೂ ಅನೇಕರಿಗೆ ಪ್ರೇರಣೆ. ಅವರ ಜನ್ಮದಿನವನ್ನು ಹಬ್ಬದಂತೆ ದೇಶಾದ್ಯಂತ ಆಚರಿಸುತ್ತಿದ್ದಾರೆ ಎಂದರು.
ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್ ಮಾತನಾಡಿ ರಾಜ್ಯದಿಂದ ಹೋಗಿ ದೆಹಲಿ ಕೆಂಪುಕೋಟೆ ಮೇಲೆ ಧ್ವಜಾರೋಹಣ ಮಾಡಿದ ಮೊದಲಿಗರು ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಕಟ್ಟಿ ಅದರ ಆಸಿತ್ವವನ್ನು ಉಳಿಸಿದ್ದಾರೆ ಎಂದರೆ ಅದಕ್ಕೆ ಕಾರಣ ದೇವೇಗೌಡರು ಕಾರಣ ಅವರಿಗೆ ದೇವರು ಆರೋಗ್ಯ ಆಯಸ್ಸು ಹೆಚ್ಚಾಗಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ವೇಮಗಲ್ ಕುರುಗಲ್ ಪಟ್ಟಣ ಪಂಚಾಯತಿ ಅಧ್ಯಕ್ಷೆ ಅನುಷ, ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಡಾ ಡಿ.ಕೆ ರಮೇಶ್, ಮಾಜಿ ನಿರ್ದೇಶಕ ವಕ್ಕಲೇರಿ ರಾಮು, ಕೋಮುಲ್ ನಿರ್ದೇಶಕ ವಡಗೂರು ಹರೀಷ್, ಜೆಡಿಎಸ್ ತಾಲೂಕು ಅಧ್ಯಕ್ಷ ಬಾಬು ಮೌನಿ ಮುಖಂಡರಾದ ಯಲವಾರ ಸೊಣ್ಣೇಗೌಡ, ಮೂರಾಂಡಹಳ್ಳಿ ಬಾಬು, ವಡಗೂರು ರಾಮು, ಲಕ್ಷ್ಮಣ್ ಗೌಡ, ಲೋಕೇಶ್ ಮರಿಯಪ್ಪ, ಕುರಗಲ್ ರಮೇಶ್, ಯಲುವಗುಳಿ ನಾಗರಾಜ್, ಬಲಿಜ ಸಂಘದ ತೋಟಗಳ ಅಶೋಕ್, ಚಂಬೆ ರಾಜೇಶ್, ದಿಂಬ ನಾಗರಾಜ್ ಗೌಡ, ಮುದುವಾಡಿ ಮಂಜುನಾಥ್, ಛತ್ರಕೋಡಿಹಳ್ಳಿ ಕುಮಾರ್, ಅಮ್ಮನಲ್ಲೂರು ರಮೇಶ್, ಹೋಲೇರಹಳ್ಳಿ ಅಶೋಕ್, ಜಯನಗರ ಕಾರ್ತಿಕ್, ಜನಪನಹಳ್ಳಿ ಆನಂದ್, ವಿಜಯ್ ಗೌಡ, ವಿಕೆ ರಾಜೇಶ್, ಮುಂತಾದವರು ಇದ್ದರು
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್