ಮೈಸೂರಿನಲ್ಲಿ ರಾಜ್ಯ ಮಟ್ಟದ ಸಮುರಾಯ್ ಸೆಮಿನಾರ್ ಯಶಸ್ವಿ- ಕೋಲಾರ ತಂಡಕ್ಕೆ ಮೆಚ್ಚುಗೆ ಮೈಸೂರು,
ಮೈಸೂರಿನಲ್ಲಿ ರಾಜ್ಯ ಮಟ್ಟದ ಸಮುರಾಯ್ ಸೆಮಿನಾರ್ ಯಶಸ್ವಿ- ಕೋಲಾರ ತಂಡಕ್ಕೆ ಮೆಚ್ಚುಗೆ ಮೈಸೂರು,
ಮೈಸೂರಿನಲ್ಲಿ ರಾಜ್ಯ ಮಟ್ಟದ ಸಮುರಾಯ್ ಸೆಮಿನಾರ್ ಯಶಸ್ವಿ- ಕೋಲಾರ ತಂಡಕ್ಕೆ ಮೆಚ್ಚುಗೆ  ಮೈಸೂರು,

ಕೋಲಾರ, 18 ಮೇ (ಹಿ.ಸ.) :

ಆ್ಯಂಕರ್ : ಮೇ 17 ಮತ್ತು 18ರಂದು ಮೈಸೂರಿನ ಹಿಣಕಲ್ ನಗರದ ರಾಯಲ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಕರ್ನಾಟಕ ರಾಜ್ಯ ಸಮುರಾಯ್ ಫೆಡರೇಶನ್ ವತಿಯಿಂದ ಎರಡು ದಿನಗಳ ರಾಜ್ಯ ಮಟ್ಟದ ಸಮುರಾಯ್ ಸೆಮಿನಾರ್ ಯಶಸ್ವಿಯಾಗಿ ನಡೆಯಿತು.

ಈ ಸೆಮಿನಾರ್ ನಲ್ಲಿ ಕೋಲಾರದ ರಾಮ ಮಾರ್ಷಲ್ ಆರ್ಟ್ಸ್ ಸಂಸ್ಥೆಯ ಮುಖ್ಯಸ್ಥರು ಹಾಗೂ ಸಮುರಾಯ್ ಜಿಲ್ಲಾ ಅಧ್ಯಕ್ಷರಾದ ಕರಾಟೆ ರಾಮರವರು ತಮ್ಮ ವಿದ್ಯಾರ್ಥಿಗಳಾದ ಅಂಜನ್ ಕುಮಾರ್, ಯಶ್ವಂತ್ ಕುಮಾರ್ ಹಾಗೂ ಮೈದಿಲಿ ರವರ ತಂಡದೊಂದಿಗೆ ಭಾಗವಹಿಸಿ ಉನ್ನತ ಮಟ್ಟದ ತರಬೇತಿ ಪಡೆದರು.

ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಸಮುರಾಯ್ ಫೆಡರೇಶನ್ ರಾಜ್ಯ ಅಧ್ಯಕ್ಷರಾದ ಜಯಂತ್ ಅವರು, ಸೆಮಿನಾರ್ ನಲ್ಲಿ ಭಾಗವಹಿಸಿ ಉತ್ಸಾಹದಿಂದ ತರಬೇತಿ ಪಡೆದ ಎಲ್ಲ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಅವರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್

 rajesh pande