ಬಡ್ಡಿ ರಹಿತ ಸಾಲ ; ಬಲ್ಡೋಟ ಭ್ರಷ್ಟಾಚಾರ - ವೇದಿಕೆ ಖಂಡನೆ
ಕೊಪ್ಪಳ, 18 ಮೇ (ಹಿ.ಸ.) : ಆ್ಯಂಕರ್ : ದೊಡ್ಡ ಮೊತ್ತದ ಸರಕಾರಿ ಬ್ಯಾಂಕುಗಳ ಸಾಲದಿಂದ ಸಾವಿರ ಎಕರೆ ರೈತರಿಂದ ಭೂಮಿಯನ್ನು ಒತ್ತಾಯಪೂರ್ವಕವಾಗಿ ಕಬಳಿಸಿಕೊಂಡು ಸರ್ವೋಚ್ಚ ನ್ಯಾಯಾಲಯದಲ್ಲೂ ಕೂಡ ಭ್ರಷ್ಟಾಚಾರ ನಡೆಸಿ ತಮ್ಮ ಪರವಾಗಿ ತೀರ್ಪು ಬರುವಂತೆ ಮಾಡಿಕೊಂಡ ಕಡು ಭ್ರಷ್ಟ ಬಳ್ದೋಟ ಗ್ರೂಪ್ ಈಗ ಇಲ್ಲದ ಆಮ
ಬಡ್ಡಿ ರಹಿತ ಸಾಲ ; ಬಲ್ಡೋಟ ಭ್ರಷ್ಟಾಚಾರ - ವೇದಿಕೆ ಖಂಡನೆ


ಕೊಪ್ಪಳ, 18 ಮೇ (ಹಿ.ಸ.) :

ಆ್ಯಂಕರ್ : ದೊಡ್ಡ ಮೊತ್ತದ ಸರಕಾರಿ ಬ್ಯಾಂಕುಗಳ ಸಾಲದಿಂದ ಸಾವಿರ ಎಕರೆ ರೈತರಿಂದ ಭೂಮಿಯನ್ನು ಒತ್ತಾಯಪೂರ್ವಕವಾಗಿ ಕಬಳಿಸಿಕೊಂಡು ಸರ್ವೋಚ್ಚ ನ್ಯಾಯಾಲಯದಲ್ಲೂ ಕೂಡ ಭ್ರಷ್ಟಾಚಾರ ನಡೆಸಿ ತಮ್ಮ ಪರವಾಗಿ ತೀರ್ಪು ಬರುವಂತೆ ಮಾಡಿಕೊಂಡ ಕಡು ಭ್ರಷ್ಟ ಬಳ್ದೋಟ ಗ್ರೂಪ್ ಈಗ ಇಲ್ಲದ ಆಮಿಷಗಳನ್ನು ಒಡ್ಡಿ 12 ವರ್ಷದಿಂದ ಮಾಯವಾಗಿದ್ದ ಅವರ ಸಾಮಾಜಿಕ ಸೇವೆ ದಿಡೀರ ಪ್ರತ್ಯಕ್ಷವಾಗಿದೆ ಅವರ ವಿರುದ್ಧದ ಹೋರಾಟ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜನರನ್ನು ಭ್ರಷ್ಟಾಚಾರಕ್ಕೆ ತಳ್ಳುವ ಬಡ್ಡಿ ರೈತ ಸಾಲದ ಆಮಿಷ ಒಡ್ಡುತ್ತಿರುವುದನ್ನು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ತೀವ್ರವಾಗಿ ಖಂಡಿಸುತ್ತದೆ ಅಲ್ಲದೇ ಈ ಕುರಿತು ಕರ್ನಾಟಕ ಲೋಕಾಯುಕ್ತ ಸುಮೋಟೋ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.

ಅಧಿಕಾರಿಗಳು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳಿಗೆ ಹಣ ಕೊಟ್ಟು ತಮ್ಮ ಪರವಾಗಿ ಕೆಲಸ ಮಾಡುವಂತಹ ಕುಕೃತ್ಯದಲ್ಲಿ ತೊಡಗಿದ್ದು ಅವರು ಸಿದ್ಧಪಡಿಸಿರುವ ಅನೇಕ ದಾಖಲೆಗಳು ಸಹ ಇದೇ ರೀತಿ ಕೂಡಿದ್ದು ಸಮಗ್ರ ತನಿಖೆ ಒಳಪಡಿಸಿ ಬಲ್ದೋಟ ಸಮೂಹದ ಮಾಲೀಕರು ಮತ್ತು ಆಡಳಿತ ಮಂಡಳಿಯನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸುತ್ತೇವೆ ಎಂದು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಒತ್ತಾಯಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande