ಅಬಕಾರಿ ನಿಯಮ ಉಲ್ಲಂಘನೆ, 268 ಪ್ರಕರಣ : ರು. 40,51,000 ದಂಡ ವಸೂಲಿ
ಗದಗ, 15 ಮೇ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆಯಲ್ಲಿ ಜುಲೈ -2025 ರಿಂದ ಏಪ್ರಿಲ್ -2026 ರವರೆಗೆ ಕಾರ್ಯನಿರ್ವಹಿಸುತ್ತಿರುವ ವಿವಿಧ ಬಗೆಯ ಅಬಕಾರಿ ಸನ್ನದುಗಳು ಅಬಕಾರಿ ನಿಯಮ ಉಲ್ಲಂಘನೆಗಳ ಬಗ್ಗೆ ( ಸನ್ನದು ಷರತ್ತು ಉಲ್ಲಂಘನೆಗಳ ಕುರಿತು) ( ಬಿಎಲ್ಸಿ) ಒಟ್ಟು 268 ಪ್ರಕರಣಗಳನ್ನು ದಾಖಲಿಸಿಕೊಂಡು ,
ಫೋಟೋ


ಗದಗ, 15 ಮೇ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆಯಲ್ಲಿ ಜುಲೈ -2025 ರಿಂದ ಏಪ್ರಿಲ್ -2026 ರವರೆಗೆ ಕಾರ್ಯನಿರ್ವಹಿಸುತ್ತಿರುವ ವಿವಿಧ ಬಗೆಯ ಅಬಕಾರಿ ಸನ್ನದುಗಳು ಅಬಕಾರಿ ನಿಯಮ ಉಲ್ಲಂಘನೆಗಳ ಬಗ್ಗೆ ( ಸನ್ನದು ಷರತ್ತು ಉಲ್ಲಂಘನೆಗಳ ಕುರಿತು) ( ಬಿಎಲ್ಸಿ) ಒಟ್ಟು 268 ಪ್ರಕರಣಗಳನ್ನು ದಾಖಲಿಸಿಕೊಂಡು , ರು. 40,51,000 ದಂಡವನ್ನು ವಸೂಲಿಸಲಾಗಿರುತ್ತದೆ. ಈ ಅವಧಿಯಲ್ಲಿ ಒಟ್ಟು 04 ಸನ್ನದುಗಳನ್ನು ಅಮಾನತ್ತುಪಡಿಸಲಾಗಿರುತ್ತದೆ.

ಅಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಮದ್ಯ ಸೇವನೆಯ ( 15 ( ಎ) ) ಕುರಿತು ಒಟ್ಟು 636 ಪ್ರಕರಣಗಳನ್ನು ದಾಖಲಿಸಿಕೊಂಡು ರೂ, 11,17,000 ದಂಡವನ್ನು ವಸೂಲಿಸಲಾಗಿರುತ್ತದೆ.

ಅಕ್ರಮ ಮಾರಾಟದ ಕುರಿತು ಒಟ್ಟು 28 ಘೋರ ಪ್ರಕರಣಗಳು, ಕಳ್ಳಭಟ್ಟಿ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಒಟ್ಟು 23 ಮತ್ತು ಎನ್ಡಿಪಿಎಸ್ ಒಟ್ಟು 09 ಪ್ರಕರಣಗಳನ್ನು ದಾಖಲಿಸಿಕೊಂಡು ನಿಯಮಗಳನ್ವಯ ಕ್ರಮ ವಹಿಸಲಾಗಿರುತ್ತದೆ.

ಪ್ರಸುತ ಮೇ -2026 ಮಾಹೆಯಲ್ಲಿ 15 ( ಎ ) – 34, ಬಿ ಎಲ್ ಸಿ-13 ಹಾಘೂ ಘೋರ-6 & ಎನ್ ಡಿ ಪಿ ಎಸ್ -1 ಪ್ರಕರಣಗಳನ್ನು ದಾಖಲಿಸಿಕೊಂಡು ನಿಯಮಗಳನ್ವಯ ಕ್ರಮ ವಹಿಸಲಾಗಿರುತ್ತದೆ. ಅಬಕಾರಿ ಅಕ್ರಮಗಳನ್ನು ತಡೆಗಟ್ಟುವ ಕ್ರಮ ಜಾರಿಯಲ್ಲಿದೆ ಎಂದು ಗದಗ ಜಿಲ್ಲೆ ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande