




ಕೊಪ್ಪಳ, 15 ಮೇ (ಹಿ.ಸ.) :
ಆ್ಯಂಕರ್ : ಕೊಪ್ಪಳ ಸಂಸ್ಥಾನ ಗವಿಮಠದಲ್ಲಿ ಶುಕ್ರವಾರ ಬೆಳಗಿನ ಜಾವ ಅಯ್ಯಾಚಾರ (ಲಿಂಗದೀಕ್ಷೆ) ಹಾಗೂ ಮಕ್ಕಳಿಗೆ ಅಕ್ಷರಾಭ್ಯಾಸ ಯಶಸ್ವಿಯಾಗಿ ನೆರವೇರಿದವು.
ಶ್ರೀ ಗವಿಮಠದ ಆವರಣದಲ್ಲಿ ಬೆಳಗಿನ ಜಾವ ಅಯ್ಯಾಚಾರ (ಲಿಂಗದೀಕ್ಷೆ) ಹಾಗೂ ಅಕ್ಷರಾಭ್ಯಾಸ ನಡೆದವು. ಸಾವಿರಾರು ಭಕ್ತರು ತಮ್ಮ ಮಕ್ಕಳೊಂದಿಗೆ ಮಠಕ್ಕೆ ಆಗಮಿಸಿ ಕತೃ ಗದ್ದುಗೆಯ ದರ್ಶನ ಪಡೆದರು. ಪೂಜ್ಯ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳವರು ಅಕ್ಷರಾಭ್ಯಾಸಕ್ಕೆ ಆಗಮಿಸಿದ್ದ ಎಲ್ಲ ಮಕ್ಕಳಿಗೆ ತಮ್ಮ ಅಮೃತ ಹಸ್ತದಿಂದ ಪಾಟಿ, ನೋಟಬುಕ್ ಮೇಲೆ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್