ಕೆಸಿಇಟಿ ಕೃಷಿ ಪ್ರಾಯೋಗಿಕ ಪರೀಕ್ಷೆಯಲ್ಲಿ ಅಕ್ರಮ ಶಂಕೆ : ತನಿಖೆಗೆ ಆಗ್ರಹ
ಗದಗ, 15 ಮೇ (ಹಿ.ಸ.) : ಆ್ಯಂಕರ್ : ರಾಜ್ಯದಲ್ಲಿ ಇತ್ತೀಚೆಗೆ ರೈತರ ಮಕ್ಕಳಿಗಾಗಿ ನಡೆದ ಕೆಸಿಇಟಿ ಕೃಷಿ ಪ್ರಾಯೋಗಿಕ ಪರೀಕ್ಷೆಯಲ್ಲಿ ಬಾರಿ ಅಕ್ರಮ ನಡೆದಿರುವ ಬಗ್ಗೆ ಶಂಕೆ ವ್ಯೆಕ್ತವಾಗಿದ್ದು ಕೂಡಲೇ ರಾಜ್ಯ ಸರ್ಕಾರ ತನಿಖೆ ಕೈಗೊಳ್ಳಬೇಕು ಎಂದು ಗದಗ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀ
ಫೋಟೋ


ಗದಗ, 15 ಮೇ (ಹಿ.ಸ.) :

ಆ್ಯಂಕರ್ : ರಾಜ್ಯದಲ್ಲಿ ಇತ್ತೀಚೆಗೆ ರೈತರ ಮಕ್ಕಳಿಗಾಗಿ ನಡೆದ ಕೆಸಿಇಟಿ ಕೃಷಿ ಪ್ರಾಯೋಗಿಕ ಪರೀಕ್ಷೆಯಲ್ಲಿ ಬಾರಿ ಅಕ್ರಮ ನಡೆದಿರುವ ಬಗ್ಗೆ ಶಂಕೆ ವ್ಯೆಕ್ತವಾಗಿದ್ದು ಕೂಡಲೇ ರಾಜ್ಯ ಸರ್ಕಾರ ತನಿಖೆ ಕೈಗೊಳ್ಳಬೇಕು ಎಂದು ಗದಗ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಲ್ಲಾಪೂರ ಆಗ್ರಹಿಸಿದ್ದಾರೆ.

ಕೃಷಿ ಕೋಟಾದಡಿ ಬಿ ಎಸ್ಸಿ ಕೃಷಿ, ತೋಟಗಾರಿಕೆ, ಅರಣ್ಯ ಹಾಗು ಪಶು ವೈದ್ಯಕೀಯ ತರಗತಿಗೆ ಪ್ರವೇಶ ಬಯಸಿದ ರೈತರ ಮಕ್ಕಳು ರಾಜ್ಯದ 17 ಕೇಂದ್ರಗಳಲ್ಲಿ ಪ್ರಾಯೋಗಿಕ ಪರೀಕ್ಷೆ ಬರೆದಿದ್ದರು. ರಾಜ್ಯದ 16 ಕೇಂದ್ರಗಳ ಸರಾಸರಿ ಫಲಿತಾಂಶ 30 % ರಷ್ಟಿದ್ದರೆ, ಕಾಲೇಜ ಆಫ್ ಹಾರ್ಟಿಕಲ್ಚರ್ ಚಿತ್ರದುರ್ಗದ ಹಿರಿಯೂರು ಕೇಂದ್ರ ಒಂದರಲ್ಲೇ ಪ್ರತಿಶೆತ 70 ರಷ್ಟು ಫಲಿತಾಂಶ ಬಂದಿದ್ದು ಜನರ ಅಚ್ಚರಿಗೆ ಕಾರಣವಾಗಿದೆ. ಹಿರಿಯೂರ ಕಾಲೇಜಲ್ಲಿ ಪರೀಕ್ಷೆ ಬರೆದ 2143 ವಿದ್ಯಾರ್ಥಿಗಳಲ್ಲಿ 200/200 ಅಂಕ ಪಡೆದವರು 74 ಜನ ಇದ್ದರೆ, ರಾಜ್ಯದ ಉಳಿದ 16 ಕೇಂದ್ರಗಳಲ್ಲಿ ಪರೀಕ್ಷೆ ಬರೆದ 22211 ರಲ್ಲಿ ಕೇವಲ 21 ವಿದ್ಯಾರ್ಥಿಗಳು 200/200 ಅಂಕ ಪಡೆದಿದ್ದಾರೆ.

ಬೆಂಗಳೂರಿನ ಜಿಕೆವಿಕೆ ಕಾಲೇಜ ಆಫ್ ಅಗ್ರಿಕಲ್ಚರ್ ಹಾಗು ಕೋಲಾರದ ಕಾಲೇಜ ಆಫ್ ಹಾರ್ಟಿಕಲ್ಚರ್ ನಲ್ಲಿ ತಲಾ 1, ಕಾಲೇಜ ಆಫ್ ಅಗ್ರಿಕಲ್ಚರ್ ಧಾರವಾಡ 2, ಕಾಲೇಜ ಆಫ್ ಅಗ್ರಿಕಲ್ಚರ್ ಕಲಬುರ್ಗಿ 3, ಕಾಲೇಜ ಆಫ್ ಅಗ್ರಿಕಲ್ಚರ್ ಮಂಡ್ಯ 5, ಕಾಲೇಜ ಆಫ್ ಹಾರ್ಟಿಕಲ್ಚರ್ ಬಾಗಲಕೋಟ 9 ವಿದ್ಯಾರ್ಥಿಗಳು ಮಾತ್ರ 200/200 ಅಂಕ ಪಡೆದಿದ್ದರೆ, ಹಾಸನ, ವಿಜಯಪುರ, ರಾಯಚೂರ, ಶಿವಮೊಗ್ಗ, ಬೀದರ್, ಹೆಬ್ಬಾಳ, ಮಂಗಳೂರು, ಮೈಸೂರು, ಮುನಿರಾಬಾದ, ಅರಭಾವಿ ವಿಶ್ವವಿದ್ಯಾಲಯದಲ್ಲಿ ಯಾವೊಬ್ಬ ವಿದ್ಯಾರ್ಥಿಯು 200/200 ಅಂಕ ಪಡೆದಿಲ್ಲ.

ಹಿರಿಯೂರು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದ 2143 ವಿದ್ಯಾರ್ಥಿಗಳಲ್ಲಿ 200 ಅಂಕ ಪಡೆದವರು 74, 196 ಅಂಕ ಪಡೆದ 190, 192 ಅಂಕ ಪಡೆದ 238, 188 ಅಂಕ ಪಡೆದ 243, 184 ಅಂಕ ಪಡೆದ 213, 180 ಅಂಕ ಪಡೆದ 181, 176 ಅಂಕ ಪಡೆದ 188, 172 ಅಂಕ ಪಡೆದ 135 ವಿದ್ಯಾರ್ಥಿಗಲಿದ್ದಾರೆ.

ರಾಜ್ಯದ 16 ಕೇಂದ್ರಗಲ್ಲಿ ಪರೀಕ್ಷೆ ಬರೆದ 22211 ವಿದ್ಯಾರ್ಥಿಗಳಲ್ಲಿ 170 ಕ್ಕಿಂತ ಹೆಚ್ಚು ಅಂಕ ಪಡೆದವರು 3408 ವಿದ್ಯಾರ್ಥಿಗಳಿದ್ದರೆ, ಹಿರಿಯೂರು ಕೇಂದ್ರವೊಂದರಲ್ಲಿಯೇ 1462 ವಿದ್ಯಾರ್ಥಿಗಳಿದ್ದಾರೆ, ರಾಜ್ಯದ ಕೃಷಿ ಕಾಲೇಜುಗಳಲ್ಲಿ ರೈತರ ಮಕ್ಕಳಿಗೆ ಸರಿಸುಮಾರು 3000 ಸಾವಿರದಷ್ಟು ಸೀಟುಗಳು ಮಾತ್ರ ಇದ್ದು ಅದರ ಅರ್ಧಷ್ಟು ಸೀಟುಗಳು ಹಿರಿಯೂರು ಕೇಂದ್ರದಲ್ಲಿ ಬರೆದವರಿಗೆ ಲಭ್ಯವಾದರೆ ರಾಜ್ಯದ ಉಳಿದ ರೈತರ ಮಕ್ಕಳಿಗೆ ಅನ್ಯಾಯವಾಗುತ್ತದೆ. ಕೂಡಲೇ ಈ ಫಲಿತಾಂಶವನ್ನ ರದ್ದುಗೊಳಿಸಿ ಅಕ್ರಮದ ತನಿಖೆ ಕೈಗೊಂಡು ತಪ್ಪಿತಸ್ತರಿಗೆ ಶಿಕ್ಷೆಯಾಗಬೇಕು.

ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾಲಗಳಲ್ಲಿ ಬೇರೆ ಬೇರೆ ನಮೂನೆಯ ಪ್ರಶ್ನೆ ಪತ್ರಿಕೆ ಮೂಲಕ ಪ್ರಾಯೋಗಿಕ ಪರೀಕ್ಷೆ ನಡೆಸದೆ ಇಡೀ ರಾಜ್ಯಕ್ಕೆ ಅನ್ವಯ ಆಗುವಂತೆ ಒಂದೇ ನಮೂನೆಯ ಪ್ರಶ್ನೆ ಪತ್ರಿಕೆಯ ಪರೀಕ್ಷೆ ನಡೆಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸರ್ಕಾರ ಆದೇಶ ಹೊರಡಿಸಬೇಕು ಅಂದಾಗ ಮಾತ್ರ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ಸಾಧ್ಯ. ತನಿಖೆಯಲ್ಲಿ ಅಕ್ರಮ ಕಂಡುಬoದಲ್ಲಿ ರಾಜ್ಯಕ್ಕೆ ಅನ್ವಯ ಆಗುವಂತೆ ಏಕ ಪ್ರಕಾರದ ಪ್ರಾಯೋಗಿಕ ಪರೀಕ್ಷೆಯನ್ನು ಪುನಃ ನಡೆಸಬೇಕು ಎಂದು ಲಿಂಗರಾಜ ಪಾಟೀಲ ಆಗ್ರಹಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande