ಬ್ರಿಮ್ಸ್ ಡಿ ಗ್ರೂಪ್ ನೌಕರರ ಸಂಖ್ಯೆ ಹೆಚ್ಚಿಸಿ
ಬಳ್ಳಾರಿ, 14 ಮೇ (ಹಿ.ಸ.) : ಆ್ಯಂಕರ್ : ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರದಲ್ಲಿ ಡಿ ಗ್ರೂಪ್ ನೌಕರರ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಸಾರ್ವಜನಿಕರಿಗೆ ಮತ್ತಷ್ಟು ಉತ್ತಮ ಸೇವೆ ಸಲ್ಲಿಸಬೇಕು ಎಂದು ಎಐಯುಟಿಯುಸಿ ಸಂಯೋಜಿತ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಗುತ್ತಿಗೆ ನ
ಬ್ರಿಮ್ಸ್ : ಡಿ ಗ್ರೂಪ್ ನೌಕರರ ಸಂಖ್ಯೆ ಹೆಚ್ಚಿಸಿ


ಬಳ್ಳಾರಿ, 14 ಮೇ (ಹಿ.ಸ.) :

ಆ್ಯಂಕರ್ : ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರದಲ್ಲಿ ಡಿ ಗ್ರೂಪ್ ನೌಕರರ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಸಾರ್ವಜನಿಕರಿಗೆ ಮತ್ತಷ್ಟು ಉತ್ತಮ ಸೇವೆ ಸಲ್ಲಿಸಬೇಕು ಎಂದು ಎಐಯುಟಿಯುಸಿ ಸಂಯೋಜಿತ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಗುತ್ತಿಗೆ ನೌಕರರ ಸಂಘವು ಮನವಿ ಸಲ್ಲಿಸಿದೆ.

ಈ ಕುರಿತು ಎ. ದೇವದಾಸ್, ಡಾ. ಪ್ರಮೋದ್.ಎನ್ ಅವರು ಜಂಟಿಯಾಗಿ ನಿರ್ದೇಶಕರಾದ ಡಾ. ಬಿ. ಗಂಗಾಧರಗೌಡ ಅವರಿಗೆ ಮನವಿ ಸಲ್ಲಿಸಿದ್ದು, ಅಗತ್ಯವಿರುವ ಸ್ಕ್ಯಾವೆಂಜರ್ ಹಾಗೂ ಡಿ ಗ್ರೂಪ್ ಕಾರ್ಮಿಕರನ್ನು ಈ ಕೂಡಲೆ ನೇಮಕ ಮಾಡಬೇಕು. ಈಗಿರುವ ಕಾರ್ಮಿಕರ ಮೇಲಿನ ಹೆಚ್ಚಿನ ಹೊರೆಯನ್ನು ತಪ್ಪಿಸಬೇಕು. ಎಲ್ಲಾ ಶಾಸನಬದ್ಧ ಸೌಲಭ್ಯಗಳನ್ನು ಒದಗಿಸಲು ಕ್ರಮಕೈಗೊಳ್ಳಬೇಕು. ಗುತ್ತಿಗೆದಾರರ ಜೊತೆ ಸಭೆ ನಿಗದಿಪಡಿಸಬೇಕು. ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಹಿಳೆಯರಿಗೆ ವಿಶ್ರಾಂತಿ ಕೊಠಡಿ ಸೌಲಭ್ಯವನ್ನು ಒದಗಿಸಬೇಕು ಎಂದು ಅವರು ಕೋರಿದ್ದಾರೆ.

ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯವು ಟ್ರಾಮಾ ಕೇರ್, ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಕೂಡ ಪ್ರಾರಂಭವಾಗಿವೆ. ದಿನಕ್ಕೆ ಸುಮಾರು 2000 ಹೊರ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಾರೆ. ನೆರೆಯ ಆಂಧ್ರಪ್ರದೇಶದಿಂದ ಕೂಡ ರೋಗಿಗಳು ಬರುತ್ತಾರೆ. ಈ ಪ್ರಮಾಣದ ರೋಗಿಗಳಿಗೆ 750-900 ಡಿ ಗ್ರೂಪ್ ನೌಕರರ ಅವಶ್ಯಕತೆಯಿದೆ. ಆದರೆ, ಪ್ರಸ್ತುತ ಕೇವಲ 450-500 ಡಿ ಗ್ರೂಪ್ ನೌಕರರಿದ್ದಾರೆ. ಅದೂ, ಕೂಡ ಹೊರಗುತ್ತಿಗೆ ಆಧಾರದ ಕಾರ್ಮಿಕರಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕಾರ್ಮಿಕರು ನೇಮಕಾತಿ ಪತ್ರ ಸಿಗದೆ, ಪಿಎಫ್ ಸೌಲಭ್ಯ ಸಿಗದೇ ಅಭದ್ರತೆಯನ್ನು ಎದುರಿಸುತ್ತಿದ್ದಾರೆ. ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಹಿಳಾ ಕಾರ್ಮಿಕರಿಗೆ ವಿಶ್ರಾಂತಿ ಕೊಠಡಿಯಿಲ್ಲದೆ. ಊಟ ಮಾಡಲು, ವಸ್ತ್ರ ಬದಲಿಸಲು ತೀವ್ರ ತೊಂದರೆಯನ್ನು ಇವರು ಅನುಭವಿಸುತ್ತಿದ್ದಾರೆ. ಕಾರಣ ಕಾರ್ಮಿಕರಿಗಾಗಿ ವಿಶ್ರಾಂತಿ ಕೊಠಡಿ ಸೌಲಭ್ಯ ನೀಡಬೇಕು ಎಂದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande