ನೀಟ್ ಪೇಪರ್ ಲೀಕ್ ವಿರೋಧಿಸಿ ಪ್ರತಿಭಟನೆ
ಕೊಪ್ಪಳ, 14 ಮೇ (ಹಿ.ಸ.) : ಆ್ಯಂಕರ್ : ಚೌಕಿದಾರ್ ಚೋರ್ ಹೈ, ಆರ್.ಎಸ್.ಎಸ್. ಬಿಜೆಪಿ ಕಾರ್ಯಕರ್ತನೇ ಅಪರಾಧಿಯಾಗಿರುವ ಕಾರಣ ಪ್ರಧಾನಿ ಮೌನವಹಿಸಿದ್ದಾರೆ, ಇಲ್ಲವಾದಲ್ಲಿ ಇಷ್ಟೊತ್ತಿಗೆ ನಾಲ್ಕು ಮನ್ ಕೀ ಬಾತ್ ಪ್ರಸಾರ ಆಗುತ್ತಿದ್ದವು ಎಂದು ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಜ್ಯೋತಿ ಎಂ. ಗೊಂಡಬಾಳ
ಚೌಕಿದಾರ್ ಚೋರ್ ಹೈ, ಆರ್.ಎಸ್.ಎಸ್. ಬಿಜೆಪಿ ಕಾರ್ಯಕರ್ತನೇ ಅಪರಾಧಿ


ಚೌಕಿದಾರ್ ಚೋರ್ ಹೈ, ಆರ್.ಎಸ್.ಎಸ್. ಬಿಜೆಪಿ ಕಾರ್ಯಕರ್ತನೇ ಅಪರಾಧಿ


ಚೌಕಿದಾರ್ ಚೋರ್ ಹೈ, ಆರ್.ಎಸ್.ಎಸ್. ಬಿಜೆಪಿ ಕಾರ್ಯಕರ್ತನೇ ಅಪರಾಧಿ


ಕೊಪ್ಪಳ, 14 ಮೇ (ಹಿ.ಸ.) :

ಆ್ಯಂಕರ್ : ಚೌಕಿದಾರ್ ಚೋರ್ ಹೈ, ಆರ್.ಎಸ್.ಎಸ್. ಬಿಜೆಪಿ ಕಾರ್ಯಕರ್ತನೇ ಅಪರಾಧಿಯಾಗಿರುವ ಕಾರಣ ಪ್ರಧಾನಿ ಮೌನವಹಿಸಿದ್ದಾರೆ, ಇಲ್ಲವಾದಲ್ಲಿ ಇಷ್ಟೊತ್ತಿಗೆ ನಾಲ್ಕು ಮನ್ ಕೀ ಬಾತ್ ಪ್ರಸಾರ ಆಗುತ್ತಿದ್ದವು ಎಂದು ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಜ್ಯೋತಿ ಎಂ. ಗೊಂಡಬಾಳ ವ್ಯಂಗ್ಯವಾಡಿದರು. In

ಅವರು ನಗರದ ಅಶೋಕ ವೃತ್ತದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ನೀಟ್ ಪೇಪರ್ ಲೀಕ್ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕೆಲವರನ್ನು ಅರೆಸ್ಟ್ ಮಾಡಲಾಗಿದ್ದು, ಎನ್.ಟಿ.ಎ. ಮೂಲಕ ನೀಟ್ ಮಾಡುವುದನ್ನು ರದ್ದುಗೊಳಿಸಿ, ಇದೇ ಸಾಲಿನಿಂದ ಆಯಾ ರಾಜ್ಯಗಳಿಗೆ ಅವಕಾಶ ಕೊಡಿ, ಕನಿಷ್ಠ ಸಮಸ್ಯೆ ಆದರೂ ಅದು ಒಂದೇ ರಾಜ್ಯದಲ್ಲಿ ಆಗುತ್ತದೆ.

ಬಿಜೆಪಿಗರ ಮಕ್ಕಳೂ ಸಹ ನೀಟ್ ಬರೆದಿದ್ದು ಅವರಲ್ಲೂ ಅನೇಕರಿಗೆ ಅನ್ಯಾಯ ಆಗುವದನ್ನು ಬಿಜೆಪಿ ಸಂಸದರು ಮುಖಂಡರು ಗಮನಿಸಿ ನಮ ಹೋರಾಟಕ್ಕೆ ಕೈ ಜೋಡಿಸಿ ಮಬ್ಭಕ್ತರಲ್ಲ ಎಂದು ಸಾಬೀತು ಮಾಡಲಿ ಎಂದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಅಬ್ ಎನ್.ಟಿ.ಎ. ಕಾ ಮತಲಬ್ ಹಿ ಬದಲ್ ಗಯಾ ಹೈ, ಅದು ನೆವರ್ ಟ್ರಸ್ಟೆಡ್ ಎಜೆನ್ಸಿ ( ಎಂದಿಗೂ ನಂಬಿಕೆಗೆ ಅರ್ಹವಲ್ಲದ ಎಜೆನ್ಸಿ ) ಆಗಿದೆ.

ಸುಪ್ರೀಂ ಕೋರ್ಟ್ ಈಗ ಮದ್ಯಪ್ರವೇಶಿಸಿ ಕೂಡಲೇ ಮೊದಲಿನಂತೆ ನೀಟ್ ರದ್ದು ಮಾಡಿ ಆಯಾ ರಾಜ್ಯಗಳೇ ಸೀಟು ಹಂಚಿಕೆ ಪ್ರಕ್ರಿಯೆ ಮಾಡಲು ಅವಕಾಶ ಕೊಡಬೇಕು. ತನ್ನ ಉತ್ತರ ಭಾರತದ ಇಂತಹ ಹಲ್ಕಾ ಕಾರ್ಯಕರ್ತರ ಉದ್ಧಾರ ಮತ್ತು ದಕ್ಷಿಣ ಭಾರತದ ಮಕ್ಕಳಿಗೆ ಅನ್ಯಾಯ ಮಾಡಲು ಬಿಜೆಪಿಯ 10 ವರ್ಷ ಆಡಳಿಯದಲ್ಲಿ ಎನ್.ಟಿ.ಎ. 70 ಸಲ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪೇಪರ್ ಲೀಕ್ ಮಾಡಿ ಮಾರಾಟ ಮಾಡಿದ್ದು ನೋಡಿದರೆ ಇದೊಂದು ಕಾರ್ಪೊರೇಟ್ ಪರೀಕ್ಷಾ ವ್ಯವಹಾರ ಆಗಿದೆ. ಶಾಸನಸಭೆಯ ಶಾಸಕರನ್ನು ಹೆದರಿಸಿ ಬೆದರಿಸಿ ಕೊನೆಗೆ ಖರೀದಿ ಮಾಡುತ್ತಾರೆ, ಇಲ್ಲಿ ವಿದ್ಯಾರ್ಥಿಗಳ ಭವಿಷ್ಯ ನರಕ ಮಾಡಿದ್ದಾರೆ. ದೇಶದ 22.5 ಲಕ್ಷ ಮಕ್ಕಳ ಜೀವನದ ಜೊತೆಗೆ ಆಟ ಆಡಿದ್ದಾರೆ. ಇವರಿಗೆ ಕಠಿಣ ಶಿಕ್ಷೆ ಆಗಬೇಕು ಭಾಷಣ ಶೂರ ಪ್ರಧಾನಮಂತ್ರಿ ಮತ್ತು ಶಿಕ್ಷಣ ಸಚಿವರುಗಳು, ಗೃಹ ಮಂತ್ರಿ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಅಕ್ಬರ್ ಪಾಶಾ ಪಲ್ಟನ್, ಸೋಮಶೇಖರ್ ಹಿಟ್ನಾಳ, ಮಲ್ಲಿಕಾರ್ಜುನ ಪೂಜಾರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಿಂಗರಾಜ್ ಕಲ್ಗುಡಿ, ಹನುಮೇಶ ಬೆಣ್ಣಿ, ಕುರುಗೋಡ ರವಿ ಯಾದವ ಅನೇಕರಿದ್ದರು

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande