
ಬಳ್ಳಾರಿ, 11 ಮೇ (ಹಿ.ಸ.) :
ಆ್ಯಂಕರ್ : ಮಲೇಶಿಯಾ ದೇಶದ ಸುಲ್ತಾನ್ ಅಜಿಯಾನ್ ಶಾ ಸಂಸ್ಥೆ, ಮಲೇಶಿಯಾ ಆರೋಗ್ಯ ಸಚಿವಾಲಯದನಜುಂಗರಮ ಭೂತಾನ್ ಇಪಾನ್ ಸಿಟಿ ಮಲೇಷಿಯಾದಲ್ಲಿ ನಡೆದ 22ನೇ ಅಂತಾರಾಷ್ಟೀಯ ಓಕಿನವ ಗುಜುರಾಯ್ ಇಪಾನ್ ಸಿಟಿ ಮುಕ್ತ ಕರಾಟೆ ಸ್ಪರ್ಧೆ - 2026ರಲ್ಲಿ ಬಳ್ಳಾರಿಯ ಶ್ರೀ ಪಂಚಾಕ್ಷರಿ ಮಾರ್ಷಿಯಲ್ ಆಟ್ರ್ಸ ಟ್ರಸ್ಟ್ ಕರಾಟೆ ವಿಧ್ಯಾರ್ಥಿಗಳಿಗೆ ಒಂದು ಚಿನ್ನ, ಎರಡು ಬೆಳ್ಳಿ, ಮೂರು ಕಂಚಿನ ಪದಕಗಳು ಲಭಿಸಿವೆ.
ಮಲೇಶಿಯ ದೇಶದ ಕ್ರೀಡಾ ಸಚಿವರಾದ ಡಾ. ಮಹಮದ್ ತೌಫಿಕ್ ಜೋಹಾರಿ ಅವರು ಸ್ಪರ್ಧೆಗಳನ್ನು ಉದ್ಘಾಟಿಸಿದರು.
ಮಲೇಶಿಯಾ ದೇಶದದ ಒಕಿನ ಗೋಜುರಾಯ್ ಕರಾಟೆ ಅಕಾಡಮಿಯ ಸ್ಥಾಪಕ ಅಧ್ಯಕ್ಷರಾದ ಗ್ರಾಂಡ್ ಮಾಸ್ಟರ್ ಅನಂತನ್ ಅವರು ಸ್ಪರ್ಧೆಯ ಮುಖ್ಯಸ್ಥರಾಗಿದ್ದರು. ಈ ಸ್ಪರ್ಧೆಯಲ್ಲಿ ಮಲೇಶಿಯಾ ದೇಶ ಸೇರಿ ಭಾರತ, ಇಂಡೋನೇಷಿಯಾ, ತಜಕೀಸ್ತಾನ್, ಶ್ರೀಲಂಕಾ, ಬಂಗ್ಲಾ ದೇಶದ 1000 ಹೆಚ್ಚು ಸ್ಪರ್ಧಾಳುಗಳು ಪಾಲ್ಗೊಂಡಿದ್ದರು.
15 ವರ್ಷದ ಒಳಗಿನ ವಯಸ್ಸಿನ ವಿಭಾಗದಲ್ಲಿ ನಯೋನಿಕ ಮಂಗಳಂ ಅವರು -ಕುಮುಟೆ ವಿಭಾಗದಲ್ಲಿ ಬಂಗಾರದ ಪದಕ ಮತ್ತು ಕುಮುಟೆ ವಿಭಾಗದಲ್ಲಿ ಬೆಳ್ಳಿ ಪದಕ, ಕುಮಾರಿ ನಕ್ಷತ್ರ ವರ್ಣ ಮಂಗಳಂ ಕುಮಿಟೆ ವಿಭಾಗದಲ್ಲಿ ಕಂಚು ಮತ್ತು ಕಟಾ ವಿಭಾಗದಲ್ಲಿ ಕಂಚಿನ ಪದಕವನ್ನು ಪಡೆದಿದ್ದಾಳೆ. 15 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಪ್ರಜ್ವಲ್ ಗಣೇಶ ಕಟಾ ವಿಭಾಗದಲ್ಲಿ ಬೆಳ್ಳಿ ಪದಕ ಮತ್ತು ಮುದಿಯಮಂ ದೇವಗನ್ ಶ್ರೀವತ್ಸ, ಕುಮಟೆ ವಿಭಾಗದಲ್ಲಿ ಕಂಚಿನ ಪದಕವನ್ನು ಪಡೆದಿದ್ದಾನೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್