
ಬೆಂಗಳೂರು, 01 ಮೇ (ಹಿ.ಸ.) :
ಆ್ಯಂಕರ್ : ಕೆಲಸಕ್ಕೆ ತಕ್ಕ ಕೂಲಿ ಹಾಗೂ ಸಮಾನ ಗೌರವ ಪ್ರತಿಯೊಬ್ಬ ಕಾರ್ಮಿಕನ ಮೂಲಭೂತ ಹಕ್ಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಹಕ್ಕಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ನಾವು ಎಲ್ಲರೂ ದನಿಗೂಡಿಸಬೇಕೆಂದು ಅವರು ಕರೆ ನೀಡಿದ್ದಾರೆ.
ಅಂತಾರಾಷ್ಟ್ರೀಯ ಕಾರ್ಮಿಕ ದಿನದ ಅಂಗವಾಗಿ ಎಕ್ಸ್ ನಲ್ಲಿ ಸಂದೇಶ ಹಂಚಿಕೊಂಡ ಅವರು, “ದುಡಿಯುವ ಕೈಗಳೇ ದೇಶದ ಬೆನ್ನೆಲುಬು ಮತ್ತು ಭವಿಷ್ಯ. ರಾಷ್ಟ್ರ ನಿರ್ಮಾಣದಲ್ಲಿ ಹಗಲು-ರಾತ್ರಿ ಎನ್ನದೆ ಶ್ರಮಿಸುತ್ತಿರುವ ಕಾರ್ಮಿಕ ವರ್ಗದ ಸೇವೆ, ಸಮರ್ಪಣೆ ಮತ್ತು ತ್ಯಾಗವನ್ನು ಈ ದಿನ ಸ್ಮರಿಸುತ್ತೇನೆ. ಅವರ ಪ್ರತಿಯೊಬ್ಬರಿಗೂ ನನ್ನ ಕೃತಜ್ಞತೆಗಳು,” ಎಂದು ತಿಳಿಸಿದ್ದಾರೆ.
ಇದೇ ವೇಳೆ, ದೇಶದ ಪ್ರಗತಿಗೆ ಕಾರ್ಮಿಕರ ಪಾತ್ರ ಅಪಾರವಾಗಿದ್ದು, ಅವರ ಕಲ್ಯಾಣ ಮತ್ತು ಹಕ್ಕುಗಳ ರಕ್ಷಣೆ ಅತ್ಯಂತ ಮುಖ್ಯ ಎಂದು ಒತ್ತಿ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa