ಐಸಿಎಸ್ಸಿ (ICSE) ರೆಡ್ಡಿ ವೀರಣ್ಣ ಶಾಲೆಗೆ ನೂರಕ್ಕೆ ನೂರು ಫಲಿತಾಂಶ
ಕಾರಟಗಿ (ನವನಗರ), 01 ಮೇ (ಹಿ.ಸ.) : ಆ್ಯಂಕರ್ : ಪ್ರತಿಷ್ಠಿತ ಕಮ್ಮವಾರಿ ಶಿಕ್ಷಣ ಸಂಸ್ಥೆಯ ರೆಡ್ಡಿ ವೀರಣ್ಣ ಸಂಜೀವಪ್ಪ ವಸತಿ ಶಾಲೆಯು 2025-26ನೇ ಸಾಲಿನ ಐಸಿಎಸ್ಸಿ ಪರೀಕ್ಷೆಯಲ್ಲಿ ಅಭೂತಪೂರ್ವ ಸಾಧನೆ ಮಾಡಿದೆ. ಶಾಲೆಯು ಸತತವಾಗಿ ಶೇ. 100ರಷ್ಟು ಫಲಿತಾಂಶವನ್ನು ದಾಖಲಿಸುವ ಮೂಲಕ ಶೈಕ್ಷಣಿಕ ಕ್ಷೇತ್ರದ
ICSE Reddy Veeranna School achieves 100% results


ಕಾರಟಗಿ (ನವನಗರ), 01 ಮೇ (ಹಿ.ಸ.) :

ಆ್ಯಂಕರ್ : ಪ್ರತಿಷ್ಠಿತ ಕಮ್ಮವಾರಿ ಶಿಕ್ಷಣ ಸಂಸ್ಥೆಯ ರೆಡ್ಡಿ ವೀರಣ್ಣ ಸಂಜೀವಪ್ಪ ವಸತಿ ಶಾಲೆಯು 2025-26ನೇ ಸಾಲಿನ ಐಸಿಎಸ್ಸಿ ಪರೀಕ್ಷೆಯಲ್ಲಿ ಅಭೂತಪೂರ್ವ ಸಾಧನೆ ಮಾಡಿದೆ. ಶಾಲೆಯು ಸತತವಾಗಿ ಶೇ. 100ರಷ್ಟು ಫಲಿತಾಂಶವನ್ನು ದಾಖಲಿಸುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.

ಒಟ್ಟು ಪರೀಕ್ಷೆಗೆ ಹಾಜರಾದ 116 ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣರಾಗುವ ಮೂಲಕ ಶಾಲೆಯ ಗೌರವವನ್ನು ಹೆಚ್ಚಿಸಿದ್ದಾರೆ.ಒಟ್ಟು ವಿದ್ಯಾರ್ಥಿಗಳು: 116ವಿಶೇಷ ಶ್ರೇಣಿ (Distinction): : 70 ವಿದ್ಯಾರ್ಥಿಗಳು, ಪ್ರಥಮ ದರ್ಜೆ (ಈiಡಿsಣ ಅಟಚಿss): 46 ವಿದ್ಯಾರ್ಥಿಗಳು,ಶಾಲೆಯ ಐವರು ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.

ಎ. ಹರ್ಷಿತ್: 96.03%, ಶ್ರೀ ಹರ್ಷವರ್ಧನ ಎಸ್.: 94.7%, ಡಿ. ಸಾಯಿ ನಳಿನಿ: 92.6%,ಕಿಶನ್ ಸುರಪುರ: 92.4%, ವರುಣ್ ಕುಮಾರ್: 91.6% ಎಲ್ಲಾ ವಿದ್ಯಾರ್ಥಿಗಳ ಈ ಅಮೋಘ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೊಲ್ಲಾ ಶೇಷಗಿರಿ ರಾವ್ ಅವರು ಹರ್ಷ ವ್ಯಕ್ತಪಡಿಸಿದ್ದು, ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಸಂಸ್ಥೆಯ ಆಡಳಿತಾಧಿಕಾರಿ ಶ್ರೀಮನ್ ನಾರಾಯಣ, ಕಾರ್ಯದರ್ಶಿ ಎಲ್. ವೀರಭದ್ರ ರಾವ್, ಪ್ರಾಚಾರ್ಯರಾದ ಡಾ. ಮಹಮ್ಮದ್ ರಫೀಕ್ ಹಾಗೂ ಐಸಿಎಸ್ಸಿ ವಿಭಾಗದ ಪ್ರಾಂಶುಪಾಲೆ ಶ್ರೀದೇವಿ ಕೊಲ್ಲಾ ಅವರು ಮಾತನಾಡಿ, ವಿದ್ಯಾರ್ಥಿಗಳ ಕಠಿಣ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಹಾಗೂ ಪಾಲಕರ ಸಹಕಾರವೇ ಈ ಯಶಸ್ಸಿಗೆ ಕಾರಣ ಎಂದು ಶ್ಲಾಘಿಸಿದರು. ಶಿಕ್ಷಕ ವೃಂದದವರು ಮತ್ತು ಪಾಲಕರು ಈ ಸಂಭ್ರಮದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande