ನಿರುದ್ಯೋಗ ಏರಿಕೆ ‘ಹಮ್ ದೋ ಹಮಾರೆ ದೋ’ ನೀತಿಯ ಪರಿಣಾಮ : ಖರ್ಗೆ ಆರೋಪ
ಬೆಂಗಳೂರು, 01 ಮೇ (ಹಿ.ಸ.) : ಆ್ಯಂಕರ್ : ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಗೆ ಕೇಂದ್ರ ಸರ್ಕಾರದ ನೀತಿಗಳೇ ಕಾರಣ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹೇಳಿಕೆ ನೀಡಿರುವ ಅವರು, “ಇಂದು ಭಾರತದಲ್ಲಿ ನಿರುದ್ಯೋಗವು ‘ಹಮ್ ದೋ
ಖರ್ಗೆ


ಬೆಂಗಳೂರು, 01 ಮೇ (ಹಿ.ಸ.) :

ಆ್ಯಂಕರ್ : ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಗೆ ಕೇಂದ್ರ ಸರ್ಕಾರದ ನೀತಿಗಳೇ ಕಾರಣ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹೇಳಿಕೆ ನೀಡಿರುವ ಅವರು, “ಇಂದು ಭಾರತದಲ್ಲಿ ನಿರುದ್ಯೋಗವು ‘ಹಮ್ ದೋ ಹಮಾರೆ ದೋ’ ನೀತಿಯ ನೇರ ಪರಿಣಾಮವಾಗಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿದ್ದು, ಇದರಿಂದ ದೇಶದಾದ್ಯಂತ ಕಾರ್ಮಿಕ ಅಶಾಂತಿ ಹೆಚ್ಚುತ್ತಿದೆ,” ಎಂದು ಹೇಳಿದ್ದಾರೆ.

ನೋಯ್ಡಾ, ಪಾಣಿಪತ್ನ ಐಒಸಿಎಲ್, ರಾಯ್ಖೇಡಾದ ಅದಾನಿ ಘಟಕ, ಎನ್ಟಿಪಿಸಿ ಪತ್ರತು ಮತ್ತು ಶ್ರೀಪೆರಂಬುದೂರಿನ ಸ್ಯಾಮ್ಸಂಗ್ ಕಾರ್ಖಾನೆಗಳಲ್ಲಿ ಉದ್ಭವಿಸಿರುವ ಸಮಸ್ಯೆಗಳನ್ನು ಉಲ್ಲೇಖಿಸಿದ ಖರ್ಗೆ, “ಈ ಕಾರ್ಮಿಕ ಸಂಹಿತೆಗಳು ಉದ್ಯೋಗ ಭದ್ರತೆಯನ್ನು ಕಡಿಮೆ ಮಾಡಿ, ಗುತ್ತಿಗೆ ಆಧಾರಿತ ಉದ್ಯೋಗಗಳನ್ನು ಉತ್ತೇಜಿಸುತ್ತಿವೆ. ಆದ್ದರಿಂದ ಈ ಸಂಹಿತೆಯನ್ನು ಮರುಪರಿಶೀಲನೆ ಮಾಡಬೇಕು,” ಎಂದು ಒತ್ತಾಯಿಸಿದ್ದಾರೆ.

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕುರಿತು ಟೀಕಿಸಿದ ಅವರು, “ಸಂಸತ್ತಿನಲ್ಲಿ ಬಲವಂತವಾಗಿ ಕಾನೂನು ಅಂಗೀಕರಿಸುವ ಮೂಲಕ ಈ ಯೋಜನೆಯನ್ನು ದುರ್ಬಲಗೊಳಿಸಲಾಗಿದೆ. ಕಾರ್ಮಿಕ ವೆಚ್ಚದ 40% ಅನ್ನು ರಾಜ್ಯಗಳಿಗೆ ವರ್ಗಾಯಿಸಿರುವುದು ರಾಜ್ಯಗಳ ಮೇಲೆ ಹೆಚ್ಚುವರಿ ಹೊರೆ ತಂದಿದೆ,” ಎಂದು ಹೇಳಿದ್ದಾರೆ.

ಕಾರ್ಮಿಕರನ್ನು ಗಿಗ್ ವರ್ಕ್ ಮತ್ತು ಅಸ್ಥಿರ ಉದ್ಯೋಗಗಳತ್ತ ತಳ್ಳಲಾಗಿದೆ ಎಂದು ಆರೋಪಿಸಿದ ಖರ್ಗೆ, “69% ಜನರು ಕನಿಷ್ಠ ವೇತನಕ್ಕಿಂತ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದಾರೆ. ಕಳೆದ ದಶಕದಲ್ಲಿ ಕಾರ್ಮಿಕರ ವೇತನವು ವರ್ಷಕ್ಕೆ 1% ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಾತ್ರ ಹೆಚ್ಚಾಗಿದೆ,” ಎಂದು ಹೇಳಿದರು.

ಪದವೀಧರರಲ್ಲಿ ನಿರುದ್ಯೋಗ ಸಮಸ್ಯೆ ಗಂಭೀರವಾಗಿದೆ ಎಂದು ಅವರು ಎಚ್ಚರಿಸಿದ್ದು, “ಪಿಎಸ್ಯುಗಳ ಖಾಸಗೀಕರಣ, ಸುಮಾರು 30 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡದಿರುವುದು ಮತ್ತು ಎಂಎಸ್ಎಂಇಗಳ ಕುಸಿತದಿಂದ ಉದ್ಯೋಗಾವಕಾಶಗಳು ಕಡಿಮೆಯಾಗಿವೆ,” ಎಂದು ಆರೋಪಿಸಿದರು.

ಈ ಹಿನ್ನೆಲೆ, ಕಾಂಗ್ರೆಸ್ ಪಕ್ಷವು ಕಾರ್ಮಿಕರ ಹಿತಾಸಕ್ತಿಗಾಗಿ ಐದು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದೆ:

ಮನರೇಗಾ ಯೋಜನೆಯನ್ನು ಪುನರುಜ್ಜೀವನಗೊಳಿಸಿ ನಗರ ಪ್ರದೇಶಗಳಿಗೆ ವಿಸ್ತರಿಸಬೇಕು

ರಾಷ್ಟ್ರೀಯ ಕನಿಷ್ಠ ವೇತನವನ್ನು ದಿನಕ್ಕೆ ₹400ಕ್ಕೆ ನಿಗದಿ ಮಾಡಬೇಕು

‘ಆರೋಗ್ಯ ಹಕ್ಕು’ ಕಾನೂನು ಜಾರಿಗೆ ತಂದು ₹25 ಲಕ್ಷವರೆಗೆ ಸಾರ್ವತ್ರಿಕ ಆರೋಗ್ಯ ರಕ್ಷಣೆ ನೀಡಬೇಕು

ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಜೀವ ಮತ್ತು ಅಪಘಾತ ವಿಮೆ ಕಲ್ಪಿಸಬೇಕು

ಗುತ್ತಿಗೆ ಪದ್ಧತಿಯನ್ನು ನಿಯಂತ್ರಿಸಿ, ಹೊಸ ಕಾರ್ಮಿಕ ಸಂಹಿತೆಯನ್ನು ಮರುಪರಿಶೀಲಿಸಬೇಕು

ಕಾರ್ಮಿಕರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು,” ಎಂದು ಖರ್ಗೆ ಒತ್ತಾಯಿಸಿದ್ದಾರೆ

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande