ಬೆಂಗಳೂರು ಮತ್ತು ದಾನಾಪುರ ನಡುವೆ ವಿಶೇಷ ರೈಲುಗಳ ಸಂಚಾರ
ಬೆಂಗಳೂರು, 07 ಏಪ್ರಿಲ್ (ಹಿ.ಸ.) : ಆ್ಯಂಕರ್ : ಬೇಸಿಗೆ ರಜೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಕಡಿಮೆ ಮಾಡಲು, ನೈಋತ್ಯ ರೈಲ್ವೆಯು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ದಾನಾಪುರ ನಡುವೆ ಎರಡು ಟ್ರಿಪ್ಗಳ ವಿಶೇಷ ಎಕ್ಸ್ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ರೈಲು
ಬೆಂಗಳೂರು ಮತ್ತು ದಾನಾಪುರ ನಡುವೆ ವಿಶೇಷ ರೈಲುಗಳ ಸಂಚಾರ


ಬೆಂಗಳೂರು, 07 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಬೇಸಿಗೆ ರಜೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಕಡಿಮೆ ಮಾಡಲು, ನೈಋತ್ಯ ರೈಲ್ವೆಯು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ದಾನಾಪುರ ನಡುವೆ ಎರಡು ಟ್ರಿಪ್ಗಳ ವಿಶೇಷ ಎಕ್ಸ್ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.

ರೈಲು ಸಂಖ್ಯೆ 06549 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು - ದಾನಾಪುರ ವಿಶೇಷ ಎಕ್ಸ್ಪ್ರೆಸ್:

ಈ ರೈಲು ಏಪ್ರಿಲ್ 16 ಮತ್ತು ಏಪ್ರಿಲ್ 23, 2026 ರಂದು (ಗುರುವಾರ) ರಾತ್ರಿ 11.00 ಗಂಟೆಗೆ ಎಸ್.ಎಂ.ವಿ.ಟಿ ಬೆಂಗಳೂರಿನಿಂದ ಹೊರಟು, ಭಾನುವಾರ ಬೆಳಿಗ್ಗೆ 01:45 ಗಂಟೆಗೆ ದಾನಾಪುರ ತಲುಪಲಿದೆ.

ರೈಲು ಸಂಖ್ಯೆ 06550 ದಾನಾಪುರ - ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ವಿಶೇಷ ಎಕ್ಸ್ಪ್ರೆಸ್:

ಈ ರೈಲು ಏಪ್ರಿಲ್ 20 ಮತ್ತು ಏಪ್ರಿಲ್ 27, 2026 ರಂದು (ಸೋಮವಾರ) ಬೆಳಿಗ್ಗೆ 08:15 ಗಂಟೆಗೆ ದಾನಾಪುರದಿಂದ ಹೊರಟು, ಬುಧವಾರ ಬೆಳಿಗ್ಗೆ 11:15 ಗಂಟೆಗೆ ಎಸ್.ಎಂ.ವಿ.ಟಿ ಬೆಂಗಳೂರು ತಲುಪಲಿದೆ.

ನಿಲುಗಡೆಗಳು: ಕೃಷ್ಣರಾಜಪುರಂ, ಬಂಗಾರಪೇಟೆ, ಕುಪ್ಪಂ, ಜೊಲಾರ್ಪೆಟ್ಟೈ, ಕಾಟ್ಪಾಡಿ, ರೇಣಿಗುಂಟಾ, ಗೂಡೂರು, ನೆಲ್ಲೂರು, ಒಂಗೋಲ್, ವಿಜಯವಾಡ, ವಾರಂಗಲ್, ಬಲ್ಹಾರ್ಷಾ, ಚಂದ್ರಾಪುರ, ಸೇವಾಗ್ರಾಮ್, ನಾಗ್ಪುರ, ಇಟಾರ್ಸಿ, ಪಿಪಾರಿಯಾ, ಜಬಲ್ಪುರ್, ಕಟ್ನಿ, ಸತ್ನಾ, ಮಾಣಿಕ್ಪುರ್, ಪ್ರಯಾಗ್ರಾಜ್ ಛಿವಕಿ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್, ಬಕ್ಸರ್ ಮತ್ತು ಅರಾ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.

ಈ ರೈಲಿನಲ್ಲಿ ಒಂದು ಎಸಿ 2-ಟೈರ್, ಮೂರು ಎಸಿ 3-ಟೈರ್,ಆರು ಸ್ಲೀಪರ್ ಕ್ಲಾಸ್ , ಒಂಬತ್ತು ದ್ವಿತೀಯ ದರ್ಜೆ, ಮತ್ತು ಎರಡು ಲಗೇಜ್/ಬ್ರೇಕ್ ವ್ಯಾನ್ ಬೋಗಿಗಳು ಇರಲಿವೆ ಎಂದು ಪ್ರಕಟಣೆ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande