ಸಂತ ಮಲುಕ್ ದಾಸ್ ಮಹಾರಾಜರ 452ನೇ ಜಯಂತಿ : ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಉದ್ಘಾಟನೆ
ಮಥುರಾ, 07 ಏಪ್ರಿಲ್ (ಹಿ.ಸ.) : ಆ್ಯಂಕರ್ : ಮಥುರಾದ ವೃಂದಾವನದ ಮಲುಕ್ ಪೀಠ ಆಶ್ರಮದಲ್ಲಿ ಸಂತ ಶಿರೋಮಣಿ ಮಲುಕ್ ದಾಸ್ ಮಹಾರಾಜರ 452ನೇ ಜನ್ಮ ದಿನಾಚರಣೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಂಗವಾಗಿ ಭಾಗವತ್ ಅವರು ಸಂತ ಮ
Mohan bhagwat


ಮಥುರಾ, 07 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಮಥುರಾದ ವೃಂದಾವನದ ಮಲುಕ್ ಪೀಠ ಆಶ್ರಮದಲ್ಲಿ ಸಂತ ಶಿರೋಮಣಿ ಮಲುಕ್ ದಾಸ್ ಮಹಾರಾಜರ 452ನೇ ಜನ್ಮ ದಿನಾಚರಣೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮದ ಅಂಗವಾಗಿ ಭಾಗವತ್ ಅವರು ಸಂತ ಮಲುಕ್ ದಾಸ್ ಮಹಾರಾಜರ ಸಮಾಧಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಅಲ್ಲಿನ ಪವಿತ್ರ ಧೂಳನ್ನು ತಮ್ಮ ಹಣೆಗೆ ಹಚ್ಚಿಕೊಂಡು ಭಕ್ತಿಭಾವ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಮಾತನಾಡಿದ ಅವರು ಸಂತರ ಸಂದೇಶಗಳು ಸಮಾಜದಲ್ಲಿ ಏಕತೆ ಮತ್ತು ಸೌಹಾರ್ದತೆ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.

ಮಲುಕ್ ಪೀಠ ಆಶ್ರಮಕ್ಕೆ ಭಾಗವತ್ ಆಗಮಿಸಿದ ಸಂದರ್ಭದಲ್ಲಿ ಭವ್ಯ ಸ್ವಾಗತ ಕೋರಲಾಗಿದ್ದು, ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪ್ರಸಿದ್ಧ ಯೋಗಗುರು ಬಾಬಾ ರಾಮ್ದೇವ್ ಕೂಡ ಈ ಸಂದರ್ಭದಲ್ಲಿ ಹಾಜರಿದ್ದು, ಸಂತರಿಗೆ ಗೌರವ ಸಲ್ಲಿಸಿದರು.

ಈ ಧಾರ್ಮಿಕ ಸಮಾರಂಭದಲ್ಲಿ ಗೀತಾ ಮನಿಷಿ ಜ್ಞಾನಾನಂದ ಮಹಾರಾಜ್ ಅವರು ಸಂತ ಮಲುಕ್ ದಾಸ್ ಮಹಾರಾಜರ ಜೀವನ ಮತ್ತು ಸಾಧನೆಗಳ ಬಗ್ಗೆ ವಿವರಿಸಿದರು. ಮಲುಕ್ಪೀಠಾಧೀಶ್ವರ ಆಚಾರ್ಯ ರಾಜೇಂದ್ರದಾಸ್ ಮಹಾರಾಜ್ ಅವರು ಭಾಗವತ್ ಅವರಿಗೆ ಠಾಕೂರ್ಜಿಯ ಚಿತ್ರವನ್ನು ಸ್ಮರಣಾರ್ಥವಾಗಿ ನೀಡಿದರು.

ಭದ್ರತಾ ದೃಷ್ಟಿಯಿಂದ ಮಲುಕ್ ಪೀಠ ಸಂಕೀರ್ಣದಲ್ಲಿ ಕಟ್ಟುನಿಟ್ಟಿನ ವ್ಯವಸ್ಥೆ ಮಾಡಲಾಗಿದ್ದು, ಎಲ್ಲೆಡೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಇಂದಿನ ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸುವ ನಿರೀಕ್ಷೆಯಿದೆ.

ಈ ಭವ್ಯ ಆಚರಣೆ ಮಾರ್ಚ್ 30ರಿಂದ ಏಪ್ರಿಲ್ 8ರವರೆಗೆ ನಡೆಯುತ್ತಿದ್ದು, ಅಷ್ಟಯಂ ಲೀಲಾ, ಸಮಾಧಿ ಪೂಜೆ ಹಾಗೂ ಆಧ್ಯಾತ್ಮಿಕ ಚರ್ಚೆಗಳೊಂದಿಗೆ ಭಕ್ತಿಭರಿತ ಕಾರ್ಯಕ್ರಮಗಳು ನಡೆಯುತ್ತಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande