ಬೆಂಬಲ ಬೆಲೆಯ ಕಡಲೆ ಖರೀದಿ ಮುಂದುವರಿಸಲು ಲಿಂಗರಾಜ ಪಾಟೀಲ ಆಗ್ರಹ
ಗದಗ, 29 ಏಪ್ರಿಲ್ (ಹಿ.ಸ.) : ಆ್ಯಂಕರ್ : ಬೆಂಬಲ ಬೆಲೆಯ ಕಡಲೆ ಖರೀದಿಯನ್ನು ಇದೇ ಏಪ್ರಿಲ್ 30ರಂದು ಸ್ಥಗಿತಗೊಳಿಸುವುದಾಗಿ ರಾಜ್ಯದ ವತಿಯಿಂದ ಖರೀದಿ ಸಂಸ್ಥೆಯಾದ ಕರ್ನಾಟಕ ಸಹಕಾರಿ ಮಾರಾಟ ಮಂಡಳಿಯವರು ಹೇಳುತ್ತಿರುವುದು ರೈತರನ್ನು ಆತಂಕಕೀಡು ಮಾಡಿದ್ದು ಸರ್ಕಾರವು ಖರೀದಿ ಪ್ರಕ್ರಿಯೆಯನ್ನು ಇನ್ನೊಂದು ತಿ
ಫೋಟೋ


ಗದಗ, 29 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಬೆಂಬಲ ಬೆಲೆಯ ಕಡಲೆ ಖರೀದಿಯನ್ನು ಇದೇ ಏಪ್ರಿಲ್ 30ರಂದು ಸ್ಥಗಿತಗೊಳಿಸುವುದಾಗಿ ರಾಜ್ಯದ ವತಿಯಿಂದ ಖರೀದಿ ಸಂಸ್ಥೆಯಾದ ಕರ್ನಾಟಕ ಸಹಕಾರಿ ಮಾರಾಟ ಮಂಡಳಿಯವರು ಹೇಳುತ್ತಿರುವುದು ರೈತರನ್ನು ಆತಂಕಕೀಡು ಮಾಡಿದ್ದು ಸರ್ಕಾರವು ಖರೀದಿ ಪ್ರಕ್ರಿಯೆಯನ್ನು ಇನ್ನೊಂದು ತಿಂಗಳು ಮುಂದುವರಿಸಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಆಗ್ರಹಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿದ ಅವರು ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಚೆನ್ನಾಗಿ ಮಳೆಯಾಗಿದ್ದರಿಂದ ಕಡಲೆ ಇಳುವಳಿ ಹೆಚ್ಚು ಬಂದಿದ್ದು, ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬೆಲೆ ಬಾರದ್ದರಿಂದ ಸರಕಾರಿ ಬೆಂಬಲ ಖರೀದಿ ಕೇಂದ್ರಗಳಲ್ಲಿ ಕಡಲೆ ಮಾರಾಟಕ್ಕೆ ಜಿಲ್ಲೆಯಲ್ಲಿ ಒಟ್ಟು 19133 ರೈತರು ತಮ್ಮ ಹೆಸರು ನೋಂದಾಯಿದ್ದರು, ಅದರಲ್ಲಿ 16002 ರೈತರ 273959 ಕ್ವಿಂಟಲ್ ನಷ್ಟು ಕಡಲೆ ಮಾತ್ರ ತೂಕವಾಗಿದ್ದು ಇನ್ನು 3131 ರೈತರ ಅಂದಾಜು 60 ರಿಂದ 70 ಸಾವಿರ ಕ್ವಿಂಟಲ್ ಪ್ರಮಾಣದ ಕಡಲೆ ತೂಕವಾಗಬೇಕಿದೆ. ಈಗ ಏಕಾಏಕಿ ಸ್ಥಗಿತವಾದರೆ ನಾಲ್ಕಾರು ತಿಂಗಳಿನಿಂದ ಕಡಲೆ ಕೊಯಲು ಮಾಡಿ ಕಾದು ಕುಳಿತಿರುವ ರೈತರ ನಷ್ಟಕ್ಕೆ ಯಾರು ಹೊಣೆ.

ಜನವರಿ 31 ರಂದು ಜಿಲ್ಲಾಧಿಕಾರಿಗಳ ನೇತೃತ್ವದ ಸಭೆಯಲ್ಲಿ ಶಿರಹಟ್ಟಿ ಲಕ್ಷ್ಮೇಶ್ವರ ತಾಲೂಕುಗಳಲ್ಲಿ 07,ಮುಂಡರಗಿ 06, ನರಗುಂದ 10, ರೋಣ ಗಜೇಂದ್ರಗಡಕ್ಕೆ 24, ಗದಗ ತಾಲೂಕಿಗೆ 24 ಒಟ್ಟು 70 ಖರೀದಿ ಕೇಂದ್ರಗಳಿಗೆ ಅನುಮತಿ ನೀಡಿದ್ದರಾದರೂ ಪೆಬ್ರವರಿ ಮೂರನೇ ವಾರದಲ್ಲಿ ಖರೀದಿ ಪ್ರಾರಂಭಿಸಿದ್ದು ಮತ್ತು ಖರೀದಿ ಎಜೇನ್ಸಿ ಸಂಸ್ಥೆಯ ವತಿಯಿಂದ ಖರೀದಿ ಕೇಂದ್ರಗಳಿಗೆ ಚೀಲಗಳ ಸಮರ್ಪಕ ಸರಬರಾಜು ಆಗದಿರುವದು, ಕೃಷಿ ಮಾರಾಟ ಇಲಾಖೆಯಾಗಲಿ ಜಿಲ್ಲಾಡಳಿತವಾಗಲಿ ಒಮ್ಮೆಯೂ ಪ್ರಗತಿ ಪರಶೀಲನೆ ಮಾಡದಿರುವದು ಸದ್ಯದ ಅವಾoತರಕ್ಕೆ ಕಾರಣವಾಗಿದೆ.

ಅತ್ಯಧಿಕ ಪ್ರಮಾಣದಲ್ಲಿ ಯರಿ ಭೂಮಿ ಹೊಂದಿರುವ ನರಗುಂದ ರೋಣ ಗಜೇಂದ್ರಗಡ ಭಾಗದಲ್ಲಿ ಈ ಸಾರಿ ಎಕರೆಗೆ 8-10 ಕ್ವಿಂಟಲ್ ಕಡಲೆ ಇಳುವರಿ ಬಂದಿದ್ದು ಆ ಭಾಗಕ್ಕೆ ಖರೀದಿ ಕೇಂದ್ರಗಳನ್ನ ಹೆಚ್ಚು ಮಾಡಬೇಕಿತ್ತು ಅಥವಾ ಈಗಿರುವ ಖರೀದಿ ಕೇಂದ್ರಗಳಿಗೆ ಬೇಡಿಕೆಗೆ ತಕ್ಕಂತೆ ಚೀಲಗಳ ಪೂರೈಕೆಯಾದರು ಮಾಡಬೇಕಿತ್ತು ಅದನ್ನು ಸರಿಯಾಗಿ ನಿರ್ವಹಿಸಲಿಲ್ಲ. ಪೆಬ್ರವರಿ 18 ರಿಂದ ಏಪ್ರಿಲ್ 23 ರವರಿಗೆ ಗದಗ ಮುಂಡರಗಿ ಶಿರಹಟ್ಟಿ ಲಕ್ಷ್ಮೇಶ್ವರ ಭಾಗದ ಖರೀದಿ ಕೇಂದ್ರಗಳಿಗೆ 727 ಬೇಲ್ ಗಳಲ್ಲಿ 363500 ಚೀಲಗಳು ಸರಬರಾಜು ಆಗಿದ್ದರೆ ಅದೇ ಅವಧಿಯಲ್ಲಿ ನರಗುಂದ ರೋಣ ಗಜೇಂದ್ರಗಡ ಭಾಗದ ಖರೀದಿ ಕೇಂದ್ರಗಳಿಗೆ ಕೇವಲ 520 ಬೇಲ್ ಗಳಲ್ಲಿ 260000 ಚೀಲಗಳು ಮಾತ್ರ ಪೂರೈಕೆಯಾಗಿವೆ. ಪ್ರತಿ ಬಾರಿಯು 1000 ದಿಂದ 1500 ಚೀಲಗಳನ್ನ ಕೇಂದ್ರವೊಂದಕ್ಕೆ ಕೊಟ್ಟರೆ ಎರಡು ಮೂರು ದಿನದಲ್ಲಿ ಚೀಲಗಳು ಖಾಲಿಯಾಗುತ್ತಿದ್ದವು ಮತ್ತೆ 8-10 ದಿನ ಚೀಲಗಳಿಗೆ ಕಾಯುವ ಪರಸ್ಥಿತಿ ಖರೀದಿ ಕೇಂದ್ರಗಳದ್ದು.

ಮುಂಡರಗಿ ಶಿರಹಟ್ಟಿ ಲಕ್ಷ್ಮೇಶ್ವರ ಗದಗ ಭಾಗದಲ್ಲಿ 9214 ರೈತರ ಕಡಲೆ ತೂಕವಾಗಿದ್ದು ಇನ್ನು 1243 ರೈತರದು ಆಗಬೇಕಿದೆ. ನರಗುಂದ ರೋಣ ಗಜೇಂದ್ರಗಡ ತಾಲೂಕಿನ 6788 ರೈತರ ಕಡಲೆ ತೂಕವಾಗಿದ್ದು, ಇನ್ನು 1888 ರೈತರ ಕಡಲೆ ತೂಕವಾಗದೆ ಹಾಗೆ ಉಳಿದುಕೊಂಡಿದೆ. ಜಿಲ್ಲೆಯ ಬಹುತೇಕ ಕೇಂದ್ರಗಳಲ್ಲಿ 30 ರಿಂದ 90 ರೈತರು ಉಳಿದುಕೊಂಡಿದ್ದರೆ, ಅತಿ ಹೆಚ್ಚಿನ ಪ್ರಮಾಣದಲ್ಲಿ ಸವಡಿ 266, ಬೆಳವಣಕಿ 115, ಹೊಳೆ ಆಲುರ 98,ಹೊಸಳ್ಳಿ 181,ಮಲ್ಲಾಪೂರ 210,ನರಗುಂದ 99, ನರೇಗಲ್ 175, ಹೊಂಬಳ 299, ಗೊಜನೂರ 123, ಪೇಟಾಲೂರ 162, ಯಳವತ್ತಿ 418, ಹಿರೇಹoದಿಗೋಳ 177, ಲಕ್ಷ್ಮೇಶ್ವರ 98 ರೈತರು ಉಳಿದುಕೊಂಡ ಕೇಂದ್ರಗಳಾಗಿವೆ. ವಿಚಿತ್ರ ಅಂದ್ರೆ ಗದಗ ತಾಲೂಕಿನ ಕೆಲ ಕೇಂದ್ರಗಳಲ್ಲಿ ನೋಂದಣಿ ಆದ ಸಂಖ್ಯೆಗಿಂತಲೂ ಅಧಿಕ ರೈತರ ಕಡಲೆ ತೂಕವಾಗಿವೆ ಅಂದರೆ ಅಲ್ಲಿ ಚೀಲಗಳ ಪೂರೈಕೆ ನಿರಾತoಕವಾಗಿ ಪೂರೈಕೆ ಆಗಿರುವದರಿಂದ ಬೇರೆ ತಾಲೂಕಿನ ರೈತರು ಅಲ್ಲಿ ಹೋಗಿ ತೂಕ ಮಾಡಿಸುವಂತಾಗಿದೆ.

ಖರೀದಿ ಎಜೇನ್ಸಿ ಸಂಸ್ಥೆ, ಕೃಷಿ ಮಾರಾಟ ಇಲಾಖೆ ಮತ್ತು ಜಿಲ್ಲಾಡಳಿತ ಬೆಂಬಲ ಬೆಲೆ ಖರೀದಿ ಪ್ರಕ್ರಿಯೆಯಲ್ಲಿ ಸಂಪೂರ್ಣ ವಿಫಲರಾಗಿದ್ದರಿಂದ ಅಮಾಯಕ ರೈತರು ಸಂಕಷ್ಟಕ್ಕೆ ಈಡಾಗುವಂತಾಗಿದೆ, ಕೂಡಲೇ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಿ ಕಡಲೆ ಖರೀದಿ ಮುಂದುವರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಲಿಂಗರಾಜ ಪಾಟೀಲ ಆಗ್ರಹಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande