ಬ್ಯಾಂಕ್, ಮೈಕ್ರೋ ಫೈನಾನ್ಸ್ ಅಧಿಕಾರಿಗಳಿಗೆ ಕಾನೂನು ಅರಿವು ಕಾರ್ಯಕ್ರಮ
ಬ್ಯಾಂಕ್, ಮೈಕ್ರೋ ಫೈನಾನ್ಸ್ ಅಧಿಕಾರಿಗಳಿಗೆ ಕಾನೂನು ಅರಿವು ಕಾರ್ಯಕ್ರಮ
ಮೈಕ್ರೋ ಫೈನಾನ್ಸ್ ಲೇವಾದೇವಿದಾರರಿಗೆ ಕೆಜಿಎಫ್ ಎಸ್.ಪಿ. ಕಛೇರಿಯಲ್ಲಿ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.


ಕೋಲಾರ, ೨೯ ಏಪ್ರಿಲ್ (ಹಿ.ಸ) :

ಆ್ಯಂಕರ್ : ಕೆಜಿಎಫ್ ಪೊಲೀಸ್ ಜಿಲ್ಲೆಯ ಪೊಲೀಸರಿಂದ ಬ್ಯಾಂಕ್ ಅಧಿಕಾರಿಗಳಿಗೆ, ಮೈಕ್ರೋ ಪೈನಾನ್ಸ್ ಕಂಪನಿಯವರಿಗೆ ಹಾಗೂ ಜೂವೆಲ್ಲರಿ ಶಾಪ್ ಮಾಲಿಕರಿಗೆ ದರೋಡೆ, ಸುಲಿಗೆ ಪ್ರಕರಣಗಳು ಹೆಚ್ಚಾಗಿ ಸಂಭವಿಸುತ್ತಿರುವರಿAದ, ಅವುಗಳನ್ನು ತಡೆಗಟ್ಟುವ ಸಲುವಾಗಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮ ಹಾಗೂ ಭದ್ರತೆ ಬಗ್ಗೆ ತಿಳುವಳಿಕೆ ನೀಡುವ ಕಾರ್ಯಕ್ರಮವನ್ನು ಕೆಜಿಎಫ್ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ಸರಹದ್ದಿನಲ್ಲಿ ಬರುವ ಎಲ್ಲಾ ಬ್ಯಾಂಕು, ಮೈಕ್ರೋ ಫೈನಾನ್ಸ್ ಅಧಿಕಾರಿಗಳು ಮತ್ತು ಜೂವೆಲ್ಲರಿ ಶಾಪ್ ಮಾಲಿಕರಿಗೆ ಮಂಗಳವಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಹಿವಾಟು ನಡೆಸುವ ಸ್ಥಳಗಳಲ್ಲಿ ಸಿಸಿಟಿವಿ ಕಾರ್ಯನಿರ್ವಹಣೆ ಬಗ್ಗೆ ಆಗಿಂದಾಗ್ಗೆ ಪರಿಶೀಲಿಸಿಸಬೇಕು. ಭದ್ರತಾ ಸಿಬ್ಬಂದಿಯವರನ್ನು ಕಾರ್ಯಪ್ರವೃತ್ತರಾಗಿ ಕಟ್ಟಡಗಳ ಸುರಕ್ಷತೆ ಕಾಪಾಡಿಕೊಳ್ಳಲು, ಸ್ಟಾçಂಗ್ ರೂಮ್, ಕ್ಯಾಷ್ ವೋಲ್ಟ್÷್ಸಗಳ ಮೇಲ್ಛಾವಣಿಗಳ ಮೇಲೆ ಅನಧೀಕೃತ ವ್ಯಕ್ತಿಗಳು ಮುಟ್ಟಿದ ಕೂಡಲೇ ಅಲಾರ್ಮ್ ಹೊಡೆದುಕೊಳ್ಳುವಂತೆ ಸೆನ್ಸಾರ್ ಅಳವಡಿಸಬೇಕು. ಚಿನ್ನ ಬೆಳ್ಳಿ ಅಂಗಡಿಗಳಲ್ಲಿ ಪರಿಚತರನ್ನು ಮಾತ್ರ ಕೆಲಸಕ್ಕೆ ನೇಮಿಸಿಕೊಳ್ಳಲು ಮತ್ತು ಗಿರವಿ ಇಡಲು ಬಂದವರಲ್ಲಿ ಆಧಾರ್, ಪಾನ್ ಹಾಗೂ ಡಿಎಲ್ ದಾಖಲೆಗಳನ್ನು ಪರಿಶೀಲಿಸಿಸಬೇಕು. ಹಣ ಸಾಗಿಸುವ ವಾಹನಗಳಲ್ಲಿ ಶಸ್ತಾçಸ್ತçಗಳು, ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳು, ಎಮೆರ್ಜೆನ್ಸಿ ಅಲಾರ್ಮ್ ಗಳನ್ನು ಇಡಲು ಸೂಚನೆಗಳನ್ನು ನೀಡಲಾಯಿತು.

ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ನಿಗಾವಹಿಸಬೇಕು ಯಾವುದೇ ಆಯುಧಗಳನ್ನು ತರದಂತೆ ನೋಡಿಕೊಳ್ಳುವುದು, ಸಂಶಯಾಸ್ಪದ ವ್ಯಕ್ತಿಗಳು ಕಂಡುಬAದಲ್ಲಿ ಕೂಡಲೇ ೧೧೨ ಅಥವಾ ಹತ್ತಿರದ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆಗೆ ಕರೆ ಮಾಡಲು ತಿಳುವಳಿಕೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಕೆಜಿಎಫ್ ಎಸ್.ಪಿ. ಶಿವಾಂಶು ರಜಪೂತ್, ಡಿವೈಎಸ್ಪಿ ಲಕ್ಷö್ಮಯ್ಯ ಹಾಗೂ ಇತರ ಅಧಿಕಾರಿಗಳು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande